ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಶಸ್ತಿ 
ಕ್ರಿಕೆಟ್

Cricket: ಮತ್ತೆ ಇತಿಹಾಸ ನಿರ್ಮಿಸಿದ ಭಾರತ, ಚೊಚ್ಚಲ ಅಂಧರ ಟಿ20 ವಿಶ್ವಕಪ್ ಗೆದ್ದ ಮಹಿಳಾ ಕ್ರಿಕೆಟ್ ತಂಡ!

ಕೊಲಂಬೊದಲ್ಲಿ ಭಾನುವಾರ ನಡೆದ ಮೊದಲ ಅಂಧ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.

ಕೊಲಂಬೋ: ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತೊಂದು ಇತಿಹಾಸ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದೆ.

ಕೆಲ ದಿನಗಳ ಹಿಂದಷ್ಟೇ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಜಯಿಸಿತ್ತು. ಈ ಖುಷಿ ಬೆನ್ನಲ್ಲೇ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಕೂಡ ತನ್ನ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಕೊಲಂಬೊದಲ್ಲಿ ಭಾನುವಾರ ನಡೆದ ಮೊದಲ ಅಂಧ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.

ಶ್ರೀಲಂಕಾದ ಕೊಲಂಬೊದ ಪಿ. ಸರವನಮುತ್ತು ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸುವ ಮೂಲಕ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡ ಟ್ರೋಫಿಗೆ ಮುತ್ತಿಟ್ಟಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡವು 20 ಓವರ್​ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 114 ರನ್‌ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಭಾರತ ಮಹಿಳಾ ತಂಡವು 12 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 117 ರನ್‌ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತ ಮಹಿಳಾ ತಂಡವು ಚೊಚ್ಚಲ ಬಾರಿಗೆ ಅಂಧರ ಟಿ20 ವಿಶ್ವಕಪ್​ ಅನ್ನು ಮುಡಿಗೇರಿಸಿಕೊಂಡಿದೆ.

ಈ ವಿಶೇಷ ಟೂರ್ನಿಯನ್ನು ಶ್ರೀಲಂಕಾ ಮತ್ತು ಭಾರತ ಜಂಟಿಯಾಗಿ ಆಯೋಜಿಸಿದ್ದವು. ಅಂಧರ ಕ್ರಿಕೆಟ್ ಅನ್ನು ಬಿಳಿ ಪ್ಲಾಸ್ಟಿಕ್ ಚೆಂಡಿನೊಂದಿಗೆ ಆಡಲಾಗುತ್ತದೆ. ಅದು ಉರುಳುವಾಗ ಗುಡುಗುವ ಬಾಲ್ ಬೇರಿಂಗ್‌ಗಳಿಂದ ತುಂಬಿರುತ್ತದೆ. ಇದು ಆಟಗಾರರಿಗೆ ಕೇಳಲು ಅನುವು ಮಾಡಿಕೊಡುತ್ತದೆ. ಈ ಶಬ್ಧ ಕೇಳಿಕೊಂಡು ಬ್ಯಾಟರ್ ಗಳು ಬ್ಯಾಟ್ ಬೀಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೇನು ಗೊತ್ತಿಲ್ಲ, ಏನೇ ಇದ್ದರೂ ತೀರ್ಮಾನ ಹೈಕಮಾಂಡ್ ಮಾಡುತ್ತೇ: ರಾಜ್ಯ ರಾಜಕಾರಣ ಕುರಿತು AICC ಅಧ್ಯಕ್ಷ ಖರ್ಗೆ ಹೇಳಿಕೆ

ಲೈಂಗಿಕ ಬಲವರ್ಧನೆಗೆ ಆಯುರ್ವೇದ ಔಷಧಿ: 'ವಿಜಯ್ ಗುರೂಜಿ' ನಂಬಿ, ಕಿಡ್ನಿ, 48 ಲಕ್ಷ ಕಳೆದುಕೊಂಡ ಬೆಂಗಳೂರು ಟೆಕ್ಕಿ!

ತಾಳಿ ಕಟ್ಟೋಕೆ ಮುಂಚೆ ಆಘಾತ, ಕುಸಿದು ಬಿದ್ದ ಸ್ಮೃತಿ ಮಂಧಾನ ತಂದೆ, ಮದುವೆ ಮುಂದೂಡಿಕೆ

ಜಪಾನ್ ಆಟಗಾರರನ್ನು ಸೋಲಿಸಿ Australian Open ಗೆದ್ದ ಲಕ್ಷ್ಯ ಸೇನೆ: KL Rahul ರಂತೆ ಟೀಕಾಕಾರರ ಬಾಯಿ ಮುಚ್ಚಿಸಿದ ಶಟ್ಲರ್!

2nd Test: ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 489ರನ್ ಗಳಿಗೆ ಆಲೌಟ್, ಕುಲದೀಪ್ ಯಾದವ್ ಗೆ 4 ವಿಕೆಟ್!

SCROLL FOR NEXT