ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026 ರ ಮೆಗಾ ಹರಾಜಿನಲ್ಲಿ ಸ್ಟಾರ್ ಇಂಡಿಯಾ ಆಲ್‌ರೌಂಡರ್ ದೀಪ್ತಿ ಶರ್ಮಾ ಹೆಚ್ಚಿನ ಬೆಲೆಗೆ ಸೋಲ್ಡೌಟ್ ಆಗಿದ್ದಾರೆ.
ದೀಪ್ತಿ ಶರ್ಮಾ ಅವರನ್ನು UP ವಾರಿಯರ್ಜ್ 3.2 ಕೋಟಿ ರೂ.ಗೆ ಖರೀದಿ ಮಾಡಿದೆ. ಇದುವರೆಗೂ ಖರೀದಿಸಲಾದ ಆಟಗಾರ್ತಿಯರ ಪೈಕಿ ಇದು ಅತಿ ಹೆಚ್ಚಿನ ಬೆಲೆಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ (DC) ಆರಂಭದಲ್ಲಿ ದೀಪ್ತಿಗಾಗಿ 50 ಲಕ್ಷ ರೂ.ಗೆ ಬಿಡ್ ಮಾಡಿತು. ಆದರೆ UP ವಾರಿಯರ್ಸ್ RTM ಆಯ್ಕೆಯನ್ನು ಬಳಸಿದ ನಂತರ ತಮ್ಮ ಬಿಡ್ ಅನ್ನು ವಿಸ್ತರಿಸಿತು. ಆದಾಗ್ಯೂ, UPW ಹೆಚ್ಚಿನ ಬೆಲೆಗೆ ಬಿಡ್ ಮಾಡಿತು.
ನ್ಯೂಜಿಲೆಂಡ್ ಆಲ್‌ರೌಂಡರ್‌ಗಳಾದ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ಕೂಡಾ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದಾರೆ. ಸೋಫಿ ಡಿವೈನ್ ಅವರನ್ನು 2 ಕೋಟಿ ರೂಗೆ ಗುಜರಾತ್ ಟೈಟನ್ಸ್ ( Gujarat Giants) ಖರೀದಿಸಿತು. ಇನ್ನೂ 3 ಕೋಟಿಗೆ ಅಮೆಲಿಯಾ ಕೆರ್ ಮುಂಬೈ ಇಂಡಿಯನ್ಸ್ (MI) ಪಾಲಾದರು.
ಅನುಭವಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಗಳಾದ ಮೆಗ್ ಲ್ಯಾನಿಂಗ್ ಅವರನ್ನು UPW ಖರೀದಿಸಿತು. ಆದರೆ ಅಲಿಸಾ ಹೀಲಿ ಮಾರಾಟವಾಗಲಿಲ್ಲ.