ಫಾಫ್ ಡುಪ್ಲೆಸಿಸ್ 
ಕ್ರಿಕೆಟ್

Cricket: IPL ಗೆ ಕೈಕೊಟ್ಟು PSL ಆಯ್ಕೆ ಮಾಡಿದ Faf du Plessis

ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿನೀಡಿದ್ದು, ಹಾಲಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಮುಂಬೈ: ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡು ಪ್ಲೆಸಿಸ್ ಐಪಿಎಲ್ ಗೆ ತಾತ್ಕಾಲಿಕ ವಿದಾಯ ಹೇಳಿದ್ದು, ಈ ವರ್ಷದ ಹರಾಜಿಗೆ ಅವರು ಲಭ್ಯವಿರುವುದಿಲ್ಲ ಎಂದು ಘೋಷಿಸಿದ್ದಾರೆ.

ಹೌದು.. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಕೇವಲ 2 ವಾರಗಳು ಮಾತ್ರ ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿನೀಡಿದ್ದು, ಹಾಲಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಒಂದು ಕಾಲದ ಆರ್ ಸಿಬಿ ಸ್ಟಾರ್ ಆಟಗಾರ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಫಾಫ್ ಡುಪ್ಲೆಸಿಸ್ ಐಪಿಎಲ್ ಗೆ ತಾತ್ಕಾಲಿಕ ವಿದಾಯ ಹೇಳಿದ್ದು, ಈ ಬಾರಿ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್ 15 ರಂದು ನಡೆಯುವ ಐಪಿಎಲ್ ಆಟಗಾರರ ಹರಾಜಿಗೆ ಎರಡು ವಾರಗಳ ಮೊದಲು ಡುಪ್ಲೆಸಿಸ್ ಅವರಿಂದ ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಈ ಕುರಿತು ಅಧಿಕೃತ ಪೋಸ್ಟ್ ಮಾಡಿರುವ ಡುಪ್ಲೆಸಿಸ್, 'ಐಪಿಎಲ್ ನಲ್ಲಿ 14 ಸೀಸನ್ ಗಳನ್ನು ಆಡಿದ್ದೇನೆ ಮತ್ತು ವಿಶ್ವ ದರ್ಜೆಯ ಆಟಗಾರರೊಂದಿಗೆ ಆಡಲು ಅದೃಷ್ಟಶಾಲಿ' ಎಂದು ಹೇಳಿದ್ದಾರೆ.

‘ನಾನು ಹದಿನಾಲ್ಕು ವರ್ಷಗಳಿಂದ ಐಪಿಎಲ್ ಆಡಿದ್ದೇನೆ. ಈ ಬಾರಿ, ನಾನು ಹರಾಜಿನಲ್ಲಿ ನನ್ನ ಹೆಸರನ್ನು ನೋಂದಾಯಿಸುತ್ತಿಲ್ಲ. ಐಪಿಎಲ್‌ನಂತಹ ಲೀಗ್‌ನಲ್ಲಿ ಆಡಲು ಬಯಸದಿರುವುದು ದೊಡ್ಡ ನಿರ್ಧಾರ. ಈ ಲೀಗ್ ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಮರೆಯಲಾಗದ ಪಾತ್ರವನ್ನು ವಹಿಸಿದೆ.

ವಿಶ್ವ ದರ್ಜೆಯ ತಂಡದ ಸಹ ಆಟಗಾರರೊಂದಿಗೆ ಆಡುವುದು, ಅದ್ಭುತ ಫ್ರಾಂಚೈಸಿಗಳೊಂದಿಗೆ ಮುಂದುವರಿಯುವುದು ಮತ್ತು ಕ್ರಿಕೆಟ್ ಅನ್ನು ಪ್ರೀತಿಸುವ ಅಭಿಮಾನಿಗಳ ಮುಂದೆ ಆಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಭಾರತ ನನಗೆ ಅನೇಕ ಸ್ನೇಹಿತರನ್ನು ನೀಡಿದೆ. ಇದು ನನಗೆ ಅನೇಕ ಜೀವನ ಪಾಠಗಳನ್ನು ಮತ್ತು ಸಿಹಿ ನೆನಪುಗಳನ್ನು ನೀಡಿದೆ. ಇದು ಒಬ್ಬ ಕ್ರಿಕೆಟಿಗ ಮತ್ತು ವ್ಯಕ್ತಿಯಾಗಿಯೂ ನನ್ನನ್ನು ಬಹಳಷ್ಟು ಬದಲಾಯಿಸಿದೆ'.

ಪಿಎಸ್ಎಲ್ ನಲ್ಲಿ ಭಾಗಿ

ಇದೇ ವೇಳೆ ತಮ್ಮ ನೂತನ ಹಾದಿಯ ಕುರಿತೂ ಮಾತನಾಡಿರುವ ಡುಪ್ಲೆಸಿಸ್, 'ಈ ಹದಿನಾಲ್ಕು ವರ್ಷಗಳ ಪ್ರಯಾಣದಲ್ಲಿ ನನ್ನನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸಿದ ತರಬೇತುದಾರರು, ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬ ಅಭಿಮಾನಿಗೂ ನಾನು ಕೃತಜ್ಞನಾಗಿದ್ದೇನೆ. ಭಾರತಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಆದಾಗ್ಯೂ, ನಾನು ಐಪಿಎಲ್‌ಗೆ ಸಂಪೂರ್ಣವಾಗಿ ವಿದಾಯ ಹೇಳುತ್ತಿಲ್ಲ. ನೀವು ನನ್ನನ್ನು ಮತ್ತೊಮ್ಮೆ ಐಪಿಎಲ್‌ನಲ್ಲಿ ನೋಡುತ್ತೀರಿ. ಆದಾಗ್ಯೂ, ಈ ಬಾರಿ, ನಾನು ಹೊಸ ಸವಾಲನ್ನು ಸ್ವೀಕರಿಸಲು ಬಯಸುತ್ತೇನೆ. ಅದಕ್ಕಾಗಿಯೇ.. ನಾನು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಸಿದ್ಧನಾಗುತ್ತಿದ್ದೇನೆ' ಎಂದು ಡು ಪ್ಲೆಸಿಸ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡು ಪ್ಲೆಸಿಸ್ ಐಪಿಎಲ್ ನಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳಲ್ಲಿದ್ದರು. ಅವರು ಆರ್ ಸಿಬಿಯ ನಾಯಕರೂ ಕೂಡ ಆಗಿದ್ದರು. ಡು ಪ್ಲೆಸಿಸ್ ಇಲ್ಲಿಯವರೆಗೆ ನಾಲ್ಕು ತಂಡಗಳಿಗೆ ಆಡಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಫಾಫ್ ಸಿಎಸ್‌ಕೆ ಆಟಗಾರನಾಗಿ ಎರಡು ಬಾರಿ ಐಪಿಎಲ್ ವಿಜೇತರಾಗಿದ್ದಾರೆ. ಅವರು ಹದಿನಾಲ್ಕು ಋತುಗಳಲ್ಲಿ 154 ಪಂದ್ಯಗಳನ್ನು ಆಡಿದರು ಮತ್ತು 135.79 ಸ್ಟ್ರೈಕ್ ರೇಟ್‌ನಲ್ಲಿ 4,773 ರನ್‌ಗಳನ್ನು ಗಳಿಸಿದರು.

ಅಂದಹಾಗೆ ಈ ಬಾರಿಯೂ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16 ರಂದು ಗಲ್ಫ್ ಕರಾವಳಿಯ ಅಬುಧಾಬಿಯಲ್ಲಿ ನಡೆಯಲಿದೆ. ಹತ್ತೊಂಬತ್ತನೇ ಸೀಸನ್‌ಗೆ ಯಾರನ್ನು ಖರೀದಿಸಬೇಕು? ಫ್ರಾಂಚೈಸಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ತಯಾರಿಯಲ್ಲಿ ನಿರತರಾಗಿರುವಾಗ.. ಈ ಸಂದರ್ಭದಲ್ಲಿ, ಫಾಫ್ ಡುಪ್ಲೆಸಿಸ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ತಾವು ಹರಾಜಿನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC ಚುನಾವಣಾ ಫಲಿತಾಂಶ: ಬಿಜೆಪಿ ಮೈತ್ರಿಕೂಟಕ್ಕೆ 128 ಸ್ಥಾನಗಳಲ್ಲಿ ಮುನ್ನಡೆ; ಮಹಾಯುತಿಯ ಹಿಡಿತಕ್ಕೆ ಮುಂಬೈ, ಪುಣೆ, ನಾಗ್ಪುರ

CCL 2026: ಪಂಜಾಬ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ!

ಮೊದಲು ನಿಮ್ಮ ಪಾರ್ಟಿ ಹಣೆ ಬರಹ ನೋಡಿಕೊಳ್ಳಿ: ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಲಾತೂರ್‌ನಲ್ಲಿ ಕಾಂಗ್ರೆಸ್ ಗೆಲುವು; ವಿಲಾಸ್‌ರಾವ್ ದೇಶಮುಖ್ ನೆನಪು ಅಳಿಸುತ್ತೇವೆ ಎಂದಿದ್ದ ಬಿಜೆಪಿಗೆ ಮುಖಭಂಗ

ಕನಕಪುರ ಏಕೆ ಗಬ್ಬೆದ್ದು ನಾರುತ್ತಿದೆ? ತ್ಯಾಜ್ಯ ವಿಲೇವಾರಿಯಾಕಿಲ್ಲ: ಉಪ ಲೋಕಾಯುಕ್ತರ ಮಹತ್ವದ ಸೂಚನೆ

SCROLL FOR NEXT