ರವೀಂದ್ರ ಜಡೇಜಾ ವಿಕೆಟ್ ಸಂಭ್ರಮ 
ಕ್ರಿಕೆಟ್

1st test: ವಿಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 140 ರನ್ ಭರ್ಜರಿ ಜಯ

ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 140 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

2ನೇ ದಿನಾದಟ ಅಂತ್ಯಕ್ಕೆ ಭಾರತ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಆದರೆ 3ನೇ ದಿನದಾಟ ಆರಂಭಕ್ಕೂ ಮೊದಲೇ ಭಾರತ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಅದರಂತೆ 286 ರನ್ ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಪಡೆ ರವೀಂದ್ರ ಜಡೇಜಾ ಮತ್ತು ಮಹಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಸ್ಟನ್ ಚೇಸ್ ಪಡೆ ಅಂತಿಮವಾಗಿ 146 ರನ್ ಗಳಿಗೆ ಆಲೌಟ್ ಆಯಿತು.

ಆ ಮೂಲಕ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 140 ರನ್ ಗಳ ಹೀನಾಯ ಸೋಲು ದಾಖಲಿಸಿತು. 2ನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ ಪರ ಅಲಿಕ್ ಅಥನಾಜೆ 38 ರನ್ ಗಳಿಸಿದರೆ, ಜಸ್ಟಿನ್ ಗ್ರೀವ್ಸ್ 25 ರನ್ ಗಳಿಸಿದ್ದಾರೆ.

ಉಳಿದಂತೆ ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಸಿರಾಜ್ 3, ಕುಲದೀಪ್ ಯಾದವ್ 2 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ; ನಾಳೆ ಬಿಹಾರ ನೂತನ ಸಿಎಂ ಆಗಿ ಪ್ರಮಾಣ

'ಯಕ್ಷಗಾನ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: KDA ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೊಟ್ಟ ಸ್ಪಷ್ಟನೆಯೇನು?

ಮಹಾಯುತಿಯಲ್ಲಿ ಭಿನ್ನಮತ ಸ್ಫೋಟ: ಬಿಜೆಪಿಗೆ ಇನ್ಮುಂದೆ ಏಕನಾಥ್ ಶಿಂಧೆ ಅಗತ್ಯವಿಲ್ಲ; ಮೈತ್ರಿಕೂಟ ತೊರೆಯುವಂತೆ ಮನವಿ

ಉಗ್ರ ಸಂಘಟನೆ ಸೇರಲು ಹೆತ್ತ ಅಮ್ಮ, ಮಲತಂದೆ ಒತ್ತಾಯ: ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಮಗ!

Delhi Red Fort blast: ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳಿಂದ ಸ್ಫೋಟಕ ತಯಾರಿಸುವ ಕುರಿತು ವರದಿ; ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

SCROLL FOR NEXT