ನವದೆಹಲಿ: ಮದುವೆಯಾದ 2 ತಿಂಗಳಲ್ಲೇ ಯಜುವೇಂದ್ರ ಚಹಲ್ ಅಕ್ರಮ ಸಂಬಂಧ ಬಯಲಾಗಿತ್ತು ಎಂಬ ಮಾಜಿ ಪತ್ನಿ ಧನಶ್ರೀ ವರ್ಮಾ ಆರೋಪಕ್ಕೆ ಖಡಕ್ ತಿರುಗೇಟು ನೀಡಿರುವ ಚಹಲ್, '2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು..?' ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ವಿರುದ್ಧ ಹೊರಿಸಿರುವ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಧನಶ್ರೀ ವರ್ಮಾರ ಎಲ್ಲ ಆರೋಪಗಳನ್ನು ತಿರಸ್ಕರಿಸಿರುವ ಚಹಲ್, '2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು.. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ' ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಜನಪ್ರಿಯ ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡಿರುವ ಧನಶ್ರೀ ವರ್ಮಾ, 'ಮದುವೆಯಾದ ಎರಡು ತಿಂಗಳೊಳಗೆ ಚಹಲ್ ತನಗೆ ಮೋಸ ಮಾಡಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಸಹಸ್ಪರ್ಧಿ ಜೊತೆ ತಮ್ಮ ಕರಾಳ ಅನುಭವ ಹಂಚಿಕೊಂಡಿದ್ದರು. ಅವರ ಈ ಹೇಳಿಕೆ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಆರೋಪಗಳಿಗೆ ತಿರುಗೇಟು ನೀಡಿರುವ ಚಹಲ್, ಮಾಜಿ ಪತ್ನಿಯ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು ಮಾತ್ರವಲ್ಲದೇ ಇದೀಗ ಆಕೆ ಮನೆ ನಡೆಯುತ್ತಿರುವುದು ನನ್ನ ಹೆಸರಿನಲ್ಲಿ ಎಂದು ಕಿಡಿಕಾರಿದ್ದಾರೆ.
'ನಾನು ಓರ್ವ ಕ್ರೀಡಾಪಟು. ಮೋಸಗಾರನಲ್ಲ. ಮದುವೆಯಾದ ಎರಡು ತಿಂಗಳೊಳಗೆ ಮೋಸ ನಡೆದರೆ, ಮದುವೆ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಹೇಗೆ ಉಳಿಯುತ್ತದೆ? ಇದು ತರ್ಕಬದ್ಧವಲ್ಲದ ಪ್ರಶ್ನೆ. ನನಗೆ, ಈ ಅಧ್ಯಾಯ ಮುಗಿದಿದೆ. ಇದು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ನಾನು ನನ್ನ ಜೀವನವನ್ನು ಮುಂದುವರಿಸಿದ್ದೇನೆ. ಉಳಿದವರೂ ಅದೇ ರೀತಿ ಮಾಡಬೇಕು' ಎಂದು ಅವರು ಹೇಳಿದರು.
ಅಂತೆಯೇ 'ಕೆಲವು ಜನರು ಇನ್ನೂ ತಮ್ಮ ಹಳೆಯ ಜೀವನಕ್ಕೆ ಅಂಟಿಕೊಂಡಿದ್ದಾರೆ. ಅವರ ಮನೆ ಇನ್ನೂ ನನ್ನ ಹೆಸರಿನಲ್ಲಿ ನಡೆಯುತ್ತಿದೆ. ಆದ್ದರಿಂದ ಅವರು ಅದನ್ನು ಮುಂದುವರಿಸಬಹುದು. ನನಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚಹಲ್ ತೀಕ್ಷ್ಣವಾಗಿ ಉತ್ತರಿಸಿದರು.
ಇದೇ ಕೊನೆಯ ಬಾರಿ
ಕೆಲವು ಜನರು ಇನ್ನೂ ತಮ್ಮ ಹಳೆಯ ಜೀವನಕ್ಕೆ ಅಂಟಿಕೊಂಡಿದ್ದಾರೆ. ಅವರ ಮನೆ ಇನ್ನೂ ನನ್ನ ಹೆಸರಿನಲ್ಲಿ ನಡೆಯುತ್ತಿದೆ. ಆದ್ದರಿಂದ ಅವರು ಅದನ್ನು ಮುಂದುವರಿಸಬಹುದು. ನನಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ನನಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತೀಕ್ಷ್ಣವಾಗಿ ಉತ್ತರಿಸಿದರು.
ನಾನು ಈಗ ಒಂಟಿ ಅಷ್ಟೇ!
ಇದೇ ವೇಳೆ ತಾವು ಈಗ ಒಂಟಿಯಾಗಿದ್ದೇನೆ ಎಂದೂ ಸ್ಪಷ್ಟಪಡಿಸಿರುವ ಚಹಲ್, 'ತಾವು ಪ್ರಸ್ತುತ ಒಂಟಿಯಾಗಿರುವುದಾಗಿ ಮತ್ತು ಯಾವುದೇ ಹೊಸ ಸಂಬಂಧಕ್ಕೆ ಸಿದ್ಧರಿಲ್ಲ . ತಮ್ಮ ಜೀವನವು ಆರಾಮದಾಯಕ ಮತ್ತು ಸಂತೋಷದಿಂದ ಕೂಡಿದೆ ಮತ್ತು ಅವರ ತಾಯಿ ಕೂಡ ಸಂತೋಷವಾಗಿದ್ದಾರೆ' ಎಂದು ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಚಹಲ್ ಸ್ಪಷ್ಟಪಡಿಸಿದ್ದಾರೆ.