ಶುಭಮನ್ ಗಿಲ್  
ಕ್ರಿಕೆಟ್

2nd test, Day 2: ಆರಂಭದಲ್ಲೇ ಭಾರತಕ್ಕೆ ಆಘಾತ; ಭೋಜನ ವಿರಾಮದ ವೇಳೆಗೆ 427/4

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಮೊದಲ ಅವಧಿಯಲ್ಲಿ ವೆಸ್ಟ್ ಇಂಡೀಸ್ ಮೇಲುಗೈ ಸಾಧಿಸಿದೆ.

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಆರಂಭದಲ್ಲೇ ಭಾರತ ಆಘಾತ ಎದುರಿಸಿದ್ದು, ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 427 ರನ್ ಕಲೆಹಾಕಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಮೊದಲ ಅವಧಿಯಲ್ಲಿ ವೆಸ್ಟ್ ಇಂಡೀಸ್ ಮೇಲುಗೈ ಸಾಧಿಸಿದೆ.

ನಿನ್ನೆ ದಿನವಿಡೀ ವಿಕೆಟ್ ಪಡೆಯಲು ಪರದಾಡಿದ್ದ ವಿಂಡೀಸ್ ಪಡೆ ಇಂದು ದಿನದಾಟ ಎರಡನೇ ಓವರ್ ನಲ್ಲಿಯೇ ದ್ವಿಶತಕದತ್ತ ದಾಪುಗಾಲಿರಿಸಿದ್ದ ಯಶಸ್ವಿ ಜೈಸ್ವಾಲ್ ಅನಗತ್ಯ ರನೌಟ್ ಗೆ ಬಲಿಯಾಗಿದ್ದಾರೆ.

‌ನಿನ್ನೆ 173 ರನ್ ಸಿಡಿಸಿ ಅಜೇಯರಾಗಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಇಂದು ಕೇವಲ 2 ರನ್ ಸೇರಿಸಿ ರನೌಟ್ ಆಗಿ ಹೊರನಡೆದರು. ಬಳಿಕ ಬಂದ ನಿತೀಶ್ ಕುಮಾರ್ ರೆಡ್ಡಿ 43 ರನ್ ಸಿಡಿಸಿ ಕೇವಲ 7 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡು ಔಟ್ ಆದರು.

ಬೃಹತ್ ಮೊತ್ತದತ್ತ ಭಾರತ

ಸದ್ಯ ಮೊದಲ ಸೆಷನ್ ಮುಕ್ತಾಯದ ಹೊತ್ತಿಗೆ ಟೀಂ ಇಂಡಿಯಾ 427 ರನ್‌ ಗಳಿಸಿ ಬೃಹತ್ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದೆ. ಮೊದಲ ದಿನದಾಟದಲ್ಲಿ 20 ರನ್ ಗಳಿಸಿ ಅಜೇಯರಾಗಿದ್ದ ನಾಯಕ ಶುಭಮನ್ ಗಿಲ್ (75*) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (7*) ಅಜೇಯರಾಗಿದ್ದು, ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

ವಿಂಡೀಸ್ ಪರ ಜೋಮೆಲ್ ವಾರಿಕನ್ 3 ವಿಕೆಟ್ ಪಡೆದುಕೊಂಡಿದ್ದಾರೆ.

ದ್ವಿಶತಕ ಮಿಸ್ ಮಾಡಿಕೊಂಡ ಜೈಸ್ವಾಲ್

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 173 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಇಂದು ತಮ್ಮ ಖಾತೆಗೆ ಮತ್ತೆರಡು ರನ್ ಗಳನ್ನು ಮಾತ್ರ ಸೇರಿಸಿದರು. ದಿನದಾಟದ 2ನೇ ಓವರ್ ನಲ್ಲಿಯೇ ಜೈಸ್ವಾಲ್ 175 ರನ್ ಗಳಿಸಿದ್ದಾಗ ಚಂದರ್ ಪಾಲ್ ಎಸೆದ ಅದ್ಭುತ ಥ್ರೋನಲ್ಲಿ ರನೌಟ್ ಗೆ ಬಲಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT