ಸಿಎಸ್‌ಕೆ ಆಟಗಾರರು 
ಕ್ರಿಕೆಟ್

IPL 2026: ಆರ್ ಅಶ್ವಿನ್‌ ಬದಲಿ ಆಟಗಾರನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ; ಸಿಎಸ್‌ಕೆ

ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್, 227 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈಗ ಅವರು ಸಿಡ್ನಿ ಥಂಡರ್ಸ್ ಪರ ಬಿಬಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.

ಐಪಿಎಲ್ 2026ರ ಹರಾಜಿಗೂ ಮುನ್ನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ದಿಗ್ಗಜ ಎಂಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಸಭೆ ನಡೆಸಲು ಸಜ್ಜಾಗಿದೆ. ಈ ವರ್ಷದ ಆರಂಭದಲ್ಲಿ ಐಪಿಎಲ್‌ನಿಂದ ನಿವೃತ್ತರಾದ ರವಿಚಂದ್ರನ್ ಅಶ್ವಿನ್ ಅವರ ಬದಲಿ ಆಟಗಾರನನ್ನು ಹುಡುಕುವುದು ಇದೀಗ ಫ್ರಾಂಚೈಸಿಗೆ ತಲೆನೋವಾಗಿ ಪರಿಣಮಿಸಿದೆ. ಅಶ್ವಿನ್ ಅವರ ಸ್ಥಾನವನ್ನು ತುಂಬುವಂತಹ ಆಟಗಾರನನ್ನು ಹುಡುಕುವುದು ಕಷ್ಟದ ಕೆಲಸ ಎಂದು ಸಿಎಸ್‌ಕೆ ಒಪ್ಪಿಕೊಂಡಿದೆ.

ರೆವ್‌ಸ್ಪೋರ್ಟ್ಸ್ ಪ್ರಕಾರ, ಆಫ್-ಸ್ಪಿನ್ನರ್‌ಗಳ ಕೊರತೆ ಇದೆ. ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಮತ್ತು ಜೂನಿಯರ್ ಮಟ್ಟದಲ್ಲಿ ಸ್ಕೌಟಿಂಗ್ ನಡೆಸಿದೆ. ಆದರೆ, ಗುಣಮಟ್ಟದ ಆಫ್-ಸ್ಪಿನ್ ಬೌಲರ್‌ಗಳು ಬಹಳ ಕಡಿಮೆ ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಮಿನಿ-ಹರಾಜಾಗಿರುವುದರಿಂದ, ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡುವುದಿಲ್ಲ ಮತ್ತು ಆದ್ದರಿಂದ ಉತ್ತಮ ಗುಣಮಟ್ಟದ ಆಟಗಾರರನ್ನು ಪಡೆಯುವುದು ಕಷ್ಟವಾಗಿರುತ್ತದೆ ಎಂದು ಹೇಳಿದರು.

'ಕೆಲವು ಎಡಗೈ ಸ್ಪಿನ್ನರ್‌ಗಳು ಇದ್ದಾರೆ. ಆದರೆ, ಆಫ್-ಸ್ಪಿನ್ನರ್‌ಗಳ ಕೊರತೆಯಿದೆ. ನಾವು ಟಿಎನ್‌ಪಿಎಲ್ ಮತ್ತು ಜೂನಿಯರ್ ಮಟ್ಟದಲ್ಲಿ ನಮ್ಮ ಸ್ಕೌಟಿಂಗ್ ಮಾಡಿದ್ದೇವೆ. ಆಫ್-ಸ್ಪಿನ್ ಬೌಲಿಂಗ್ ಮಾಡುವ ಕೆಲವರು ಇದ್ದರೂ, ಗುಣಮಟ್ಟವನ್ನು ಪಡೆಯುವುದು ತುಂಬಾ ಕಷ್ಟ. ಮಿನಿ-ಹರಾಜಿನಲ್ಲಿ, ಉತ್ತಮ ಗುಣಮಟ್ಟದ ಆಫ್ ಸ್ಪಿನ್ನರ್ ಸಿಗುವ ಸಾಧ್ಯತೆ ಕಡಿಮೆ' ಎಂದು ಸಿಎಸ್‌ಕೆ ಅಧಿಕಾರಿ ಹೇಳಿದರು.

ಐಪಿಎಲ್ 2025ನೇ ಆವೃತ್ತಿಗೂ ಮುನ್ನ 9.75 ಕೋಟಿ ರೂ.ಗೆ ಮೆಗಾ ಹರಾಜಿನಲ್ಲಿ ಆರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಸುಮಾರು ಒಂದು ದಶಕದ ನಂತರ ಸಿಎಸ್‌ಕೆಗೆ ಮರಳಿದ ಅಶ್ವಿನ್ ಅವರಿಗೆ ಆ ಆವೃತ್ತಿ ಅಷ್ಟೇನು ಉತ್ತಮವಾಗಿರಲಿಲ್ಲ. 2025ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದರು. ಒಂಬತ್ತು ಪಂದ್ಯಗಳಿಂದ 40.42 ಸರಾಸರಿಯೊಂದಿಗೆ ಕೇವಲ ಏಳು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಅದಾದ ತಿಂಗಳುಗಳ ನಂತರ, ಅಶ್ವಿನ್ ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದರು. ಅನುಭವಿ ಆಟಗಾರ ಐಪಿಎಲ್‌ನಲ್ಲಿ 227 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಗಳಿಸಿದರು. ಈಗ ಅವರು ಸಿಡ್ನಿ ಥಂಡರ್ಸ್ ಪರ ಬಿಬಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ಮುಗಿದಿದೆ: 2 ವರ್ಷಗಳ ಬಳಿಕ ಎಲ್ಲಾ ಜೀವಂತ 20 ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್; ಇಸ್ರೇಲ್ ಸೆನೆಟ್‌ನಲ್ಲಿ ಟ್ರಂಪ್ ಭಾಷಣ

Women's ODI World Cup 2025: ಸತತ ಸೋಲುಗಳಿಂದ ಸಂಕಷ್ಟ; ಟೀಂ ಇಂಡಿಯಾ ಸೆಮಿಫೈನಲ್‌ ಹಾದಿ ಕಠಿಣ

ನಾನು ಸಿಎಂ ಆಗಿದ್ರೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದ ಆರ್‌ವಿ ದೇಶಪಾಂಡೆ; ಸ್ಪಷ್ಟನೆ ಕೋರಿದ ಸಿದ್ದರಾಮಯ್ಯ

ಬಿಹಾರ ಚುನಾವಣೆ: ಸುಶಾಂತ್ ಸಿಂಗ್ ಸಹೋದರಿಗೆ ಟಿಕೆಟ್ ನೀಡಲು ಸಿಪಿಐ(ಎಂಎಲ್) ನಿರ್ಧಾರ

'ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ: ಜಮೀರ್‌ನ ಬಿಳಿ ಟೋಪಿ ಸಾಬಣ್ಣ ಅಂತ ಕರಿತೀರಾ?'

SCROLL FOR NEXT