ಹಾರ್ದಿಕ್ ಪಾಂಡ್ಯ - ಮಹಿಕಾ ಶರ್ಮಾ 
ಕ್ರಿಕೆಟ್

ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್‌ರೌಂಡರ್ ಹಲವು ದಿನಗಳಿಂದ ಕೇಳಿಬರುತ್ತಿದ್ದ ಡೇಟಿಂಗ್ ವದಂತಿಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು, ಮಹಿಕಾ ಅವರೊಂದಿಗೆ ಇರುವ ಫೋಟೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅಕ್ಟೋಬರ್ 11 ರಂದು ತಮ್ಮ ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಅವರೊಂದಿಗೆ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾರತದ 2025ರ ಏಷ್ಯಾ ಕಪ್ ವಿಜಯದ ನಂತರ ರಜೆಯ ಮೂಡ್‌ನಲ್ಲಿರುವ ಕ್ರಿಕೆಟಿಗ, ಮಾಲ್ಡೀವ್ಸ್‌ನಲ್ಲಿರುವ ಒಂದು ಸುಂದರವಾದ ಬೀಚ್ ಸ್ಥಳದಲ್ಲಿ ತಮ್ಮ ಹುಟ್ಟುಹಬ್ಬದ ಆಚರಣೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಮೂಲಕ ಟೀಂ ಇಂಡಿಯಾ ಆಲ್‌ರೌಂಡರ್ ಹಲವು ದಿನಗಳಿಂದ ಕೇಳಿಬರುತ್ತಿದ್ದ ಡೇಟಿಂಗ್ ವದಂತಿಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು, ಮಹಿಕಾ ಅವರೊಂದಿಗೆ ಇರುವ ಫೋಟೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಹಾರ್ದಿಕ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ಗಳಲ್ಲಿ ಹುಟ್ಟುಹಬ್ಬದ ಕೇಕ್, ದಂಪತಿ ಕಡಲತೀರದಲ್ಲಿ ಕೈಕೈ ಹಿಡಿದು ನಡೆಯುತ್ತಿರುವ ಪ್ರಶಾಂತ ವಿಡಿಯೋ ಸೇರಿದಂತೆ ಹಲವಾರು ಫೋಟೊಗಳಿವೆ. ಕೆಲವು ಚಿತ್ರಗಳಲ್ಲಿ ಹಾರ್ಧಿಕ್ ಅವರ ಮಗ ಅಗಸ್ತ್ಯ, ಅವರ ತಾಯಿ ಮತ್ತು ಅಜ್ಜಿ ಕೂಡ ಇದ್ದಾರೆ.

ಮಹಿಕಾ ಶರ್ಮಾ ಯಾರು?

24 ವರ್ಷದ ಮಹೀಕಾ ಶರ್ಮಾ ಮಾಡೆಲ್ ಮತ್ತು ಪ್ರಭಾವಿಯಾಗಿದ್ದು, ಅವರು ಕೆಲವು ಉನ್ನತ ಭಾರತೀಯ ಫ್ಯಾಷನ್ ವಿನ್ಯಾಸಕರೊಂದಿಗೆ ಕೆಲಸ ಮಾಡಿದ್ದಾರೆ. ಈ ದಂಪತಿ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇತ್ತು ಮತ್ತು ಅವರು ಮೊದಲು ಹುಟ್ಟುಹಬ್ಬದ ಪ್ರವಾಸಕ್ಕೆ ತೆರಳುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

2024 ರ ಇಂಡಿಯನ್ ಫ್ಯಾಷನ್ ಅವಾರ್ಡ್ಸ್‌ನಲ್ಲಿ ಮಹಿಕಾ ಅವರನ್ನು ವರ್ಷದ ಮಾಡೆಲ್ (ನ್ಯೂ ಏಜ್) ಎಂದು ಹೆಸರಿಸಲಾಯಿತು. ಎಲ್ಲೆ ನಂತಹ ನಿಯತಕಾಲಿಕೆಗಳು ಅವರನ್ನು ಈ ಆವೃತ್ತಿಯ ಮಾಡೆಲ್ ಎಂದು ಗುರುತಿಸಿವೆ.

ಮಹಿಕಾ ಮ್ಯೂಸಿಕ್ ವಿಡಿಯೋಗಳು, ಕಿರುಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ತನಿಷ್ಕ್, ವಿವೋ ಮತ್ತು ಯುನಿಕ್ಲೊದಂತಹ ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

AI ಬರಹ, ನಕಲಿ ಲೇಖಕರು: ಕೊಯಮತ್ತೂರಿನ ಗ್ರಂಥಾಲಯದಲ್ಲಿ ನಕಲಿ ಪುಸ್ತಕಗಳ ಜಾಲ! ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿದ ಪೆರಿಯಾರ್ ಅರಿವುಳಗಂ ಗ್ರಂಥಾಲಯ ಹಗರಣ

OBC ಮೀಸಲಾತಿ ಕುರಿತು ಸುಪ್ರೀಂ ಮಹತ್ವದ ತೀರ್ಪು: ಕೇವಲ ವೇತನವಷ್ಟೇ ಮಾನದಂಡವಲ್ಲ ಎಂದ ಸರ್ವೋಚ್ಚ ನ್ಯಾಯಾಲಯ

India vs New Zealand, 2nd ODI: ಭಾರತದ ಬೌಲರ್‌ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಬ್ಯಾಟರ್‌ಗಳು; 134 ರನ್‌ಗಳಿಗೆ ಆಲೌಟ್!

'ತುರ್ತು ಪರಿಸ್ಥಿತಿಯ ಅತಿರೇಕದ ಘಟನೆಗಳಿಗೆ ಸಂಜಯ್ ಮಾತ್ರ ಕಾರಣರಲ್ಲ': ಅತ್ತೆ ಇಂದಿರಾ ಮೇಲೆ ಸಾಕಷ್ಟು ಒತ್ತಡವಿತ್ತು; ಸೋನಿಯಾ ಗಾಂಧಿ

India-EU: ಪ್ರಧಾನಿ ಮೋದಿ ಭೇಟಿ ಮುನ್ನ ಸಂಶೋಧನೆ, ನಾವೀನ್ಯತೆ ಕಾರ್ಯಕ್ರಮ ಸಂಬಂಧಿಸಿದ ಮಾತುಕತೆ ಪೂರ್ಣ