ಸ್ಮೃತಿ ಮಂಧನಾ ಮತ್ತು ಪಾಲಶ್ ಮುಚ್ಚಲ್  
ಕ್ರಿಕೆಟ್

ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧನಾಗೆ ಕೂಡಿ ಬಂದ ಕಂಕಣ ಭಾಗ್ಯ: ಮ್ಯೂಸಿಕ್ ಡೈರೆಕ್ಟರ್ ಜೊತೆ ಸಪ್ತಪದಿ!

ಕಾರ್ಯಕ್ರಮದಲ್ಲಿ ಸ್ಮೃತಿಯೊಂದಿಗಿನ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಮಾತನಾಡಿದ ಅವರು ತಾವಿಬ್ಬರು ಶೀಘ್ರದಲ್ಲೇ ಇಂದೋರ್​ನಲ್ಲಿ ಮದುವೆಯಾಗುತ್ತೇವೆ ಎಂದು ನಾನು ಹೇಳಲು ಬಯಸುವ ಏಕೈಕ ವಿಷಯ ಎಂದು ಹೇಳುವ ಮೂಲಕ ತಮ್ಮ ಸಂಬಂಧದ ಬಗ್ಗೆ ಖಚಿತ ಪಡಿಸಿದ್ದಾರೆ.

ಇಂದೋರ್: ಭಾರತ ತಂಡದ ಕ್ರಿಕೆಟ್​ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅವರು ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಸ್ವತಃ ಅವರ ಗೆಳೆಯ , ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಸ್ವತಃ ಪಾಲಶ್ ಮುಚ್ಛಲ್ ಅವರೇ ಇಂದೋರ್​ ಸ್ಟೇಟ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ. ಪಾಲಶ್ ಮುಚ್ಛಲ್ ಅವರು 30 ವರ್ಷ ವಯಸ್ಸಿನವರಾಗಿದ್ದು, ಸಂಗೀತ ನಿರ್ದೇಶಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸ್ಮೃತಿಯೊಂದಿಗಿನ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಮಾತನಾಡಿದ ಅವರು ತಾವಿಬ್ಬರು ಶೀಘ್ರದಲ್ಲೇ ಇಂದೋರ್​ನಲ್ಲಿ ಮದುವೆಯಾಗುತ್ತೇವೆ ಎಂದು ನಾನು ಹೇಳಲು ಬಯಸುವ ಏಕೈಕ ವಿಷಯ ಎಂದು ಹೇಳುವ ಮೂಲಕ ತಮ್ಮ ಸಂಬಂಧದ ಬಗ್ಗೆ ಖಚಿತ ಪಡಿಸಿದ್ದಾರೆ.

ಸ್ಮೃತಿ ಮಂಧಾನ ಭಾರತ ಮಹಿಳಾ ತಂಡದ ಉಪನಾಯಕಿಯಾಗಿದ್ದು, ಲೆಫ್ಟ್‌ಹ್ಯಾಂಡ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಲಶ್ ಮುಚ್ಛಲ್ ಅವರೊಂದಿಗೆ ಪ್ರೀತಿ ಸಂಬಂಧದ ಗಾಸಿಪ್​ಗಳು ಕೇಳಿಬರುತ್ತಲೇ ಇವೆ. ಇಬ್ಬರೂ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಆದರೆ ಮೊದಲ ಬಾರಿ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಮೃತಿ ಅವರು ಸದ್ಯ ಇಂದೋರ್‌ನಲ್ಲೇ ಇದ್ದು, ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ 2025ರಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ. ಇಂದು (ಅಕ್ಟೋಬರ್ 19) ಹೋಳ್ಕರ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ನಡೆಯಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಸ್ಮೃತಿ ಬ್ಯಾಟಿಂಗ್ ಮಹತ್ವದ ಪಾತ್ರವಹಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

ಬಿಜೆಪಿಯಿಂದಲೇ ಹಣ ಕಲೆಕ್ಷನ್: ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಆರೋಪಕ್ಕೆ ಸಿಎಂ ತಿರುಗೇಟು

KL Rahulರನ್ನು ಹೀಗೆ ನಡೆಸಿಕೊಂಡಿದ್ದು ನಿಜಕ್ಕೂ ಹಾಸ್ಯಾಸ್ಪದ: ಮೂರ್ಖತನದ ನಿರ್ಧಾರ ಎಂದು ಟೀಕಿಸಿದ ಮಾಜಿ ನಾಯಕ

ಕಾಂಗ್ರೆಸ್-ಆರ್‌ಜೆಡಿಯಿಂದ 'ಪಿತೂರಿ'; ಬಿಹಾರ ಚುನಾವಣೆಯಿಂದ ಹಿಂದೆ ಸರಿದ ಜೆಎಂಎಂ

News headlines 20-10-2025| ದಕ್ಷಿಣ ಕನ್ನಡ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಣೆ, ಸುಳ್ಳು ಸುದ್ದಿ ಹರಡಿದರೆ ಕೇಸ್- ಸಿದ್ದರಾಮಯ್ಯ; ವೇತನ ನೀಡದೇ ಕಿರುಕುಳ: ಇಂಜಿನಿಯರ್ ಆತ್ಮಹತ್ಯೆ; ಅತಿವೃಷ್ಟಿ: ರಾಜ್ಯಕ್ಕೆ 300 ಕೋಟಿ, ಮಹಾರಾಷ್ಟ್ರಕ್ಕೆ 1,500 ಕೋಟಿ ರೂ ಕೇಂದ್ರ ಪರಿಹಾರ

SCROLL FOR NEXT