ಕರುಣ್ ನಾಯರ್ 
ಕ್ರಿಕೆಟ್

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!

ಕಳೆದ ಎರಡು ವರ್ಷಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಇದೀಗ ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತ ತಂಡದಿಂದ ಹೊರಬಿದ್ದ ಬಳಿಕ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕರುಣ್ ನಾಯರ್, ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾಗ ಅಜಿತ್ ಅಗರ್ಕರ್ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಇದೀಗ ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸುಧೀರ್ಘ ಸಮಯದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾಗೆ ಕರುಣ್ ನಾಯರ್ ಆಯ್ಕೆಯಾಗಿದ್ದರು.

ಕೆಲವು ತಿಂಗಳ ಹಿಂದೆ ಕರುಣ್ ನಾಯರ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ ಆ ಸರಣಿಯಲ್ಲಿ ಕರುಣ್ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಬ್ಯಾಟರ್ ಎಂಟು ಇನ್ನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸಹಿತ 25.62 ಸರಾಸರಿಯಲ್ಲಿ ಕೇವಲ 205 ರನ್‌ಗಳನ್ನು ಗಳಿಸಿದ್ದರು. ಹೀಗಾಗಿ ಕೇವಲ ಒಂದು ಸರಣಿಯ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಆದಾಗ್ಯೂ ಛಲ ಬಿಡದ ಕರುಣ್ ರಣಜಿ ಟ್ರೋಫಿಯಲ್ಲಿ ಗೋವಾ ವಿರುದ್ಧದ ಪಂದ್ಯದಲ್ಲಿ 174 ರನ್ ಗಳಿಸಿ ಗಮನ ಸೆಳೆದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ

ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ಅತ್ಯಂತ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಎರಡು ರಣಜಿ ಟ್ರೋಫಿ ಅಭಿಯಾನಗಳಲ್ಲಿ 1,533 ರನ್‌ಗಳನ್ನು ಗಳಿಸಿರುವ ಕರುಣ್, ಭಾರತ ತಂಡಕ್ಕೆ ಮರಳುವ ವಿಶ್ವಾಸ ಹೊಂದಿದ್ದರು. ಕಳೆದ ಋತುವಿನಲ್ಲಿ ವಿದರ್ಭ ರಣಜಿ ಟ್ರೋಫಿಯನ್ನು ಗೆಲ್ಲುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕರುಣ್ ನಾಯರ್ ರನ್ನು ಕೈಬಿಟ್ಟಿದೆ.

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ'

ಇನ್ನು ಈ ಬಗ್ಗೆ ಭಾನುವಾರ ಗೋವಾ ವಿರುದ್ಧದ ಕರ್ನಾಟಕದ ರಣಜಿ ಟ್ರೋಫಿ ಪಂದ್ಯದ ನಡುವೆ ಮಾತನಾಡಿದ ಕರುಣ್ ನಾಯರ್, "ಖಂಡಿತ, ತಂಡಕ್ಕೆ ಆಯ್ಕೆಯಾಗದೇ ಇರುವುದು ತುಂಬಾ ನಿರಾಶಾದಾಯಕವಾಗಿದೆ. ಕಳೆದ ಎರಡು ವರ್ಷಗಳ ನಂತರ, ನಾನು ಇನ್ನೂ ಹೆಚ್ಚಿನದನ್ನು ಅಂದರೆ ಸರಣಿಗಿಂತ ಹೆಚ್ಚಿನದಕ್ಕೆ ಅರ್ಹನೆಂದು ನಾನು ಭಾವಿಸುತ್ತೇನೆ. ಭಾರತ ತಂಡದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಭಾವನೆಗಳ ಬಗ್ಗೆ ನನ್ನೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದಾರೆ. ನನ್ನ ಕೆಲಸವೇನಿದ್ದರೂ ಕೆಲಸವನ್ನು ಮಾಡುವುದು, ಅಂದರೆ ರನ್ ಗಳಿಸುವುದು ಮತ್ತು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವುದು ಅಷ್ಟೇ ಎಂದರು.

ಅಂತೆಯೇ 'ಪ್ರಾಮಾಣಿಕವಾಗಿ, ನಾನು ಮುಂದೆ ಯಾವ ಗುರಿಯನ್ನು ಹೊಂದಬಹುದು? ನಾನು ದೇಶಕ್ಕಾಗಿ ಆಡುವುದು ಮಾತ್ರ. ನೀವು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಮುಂದಿನ ಕೆಲಸವೆಂದರೆ ನೀವು ಆಡುತ್ತಿರುವ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುವುದು' ಎಂದು ಹೇಳುವ ಮೂಲಕ ಕರುಣ್ ರಾಷ್ಟ್ರೀಯ ತಂಡಕ್ಕಾಗಿ ಆಡುವ ಕನಸನ್ನು ಬಿಟ್ಟುಕೊಟ್ಟಿಲ್ಲ.

ಕರುಣ್ ನಾಯರ್ ಬಗ್ಗೆ ಅಗರ್ಕರ್ ಹೇಳಿದ್ದೇನು?

ಇನ್ನು ವೆಸ್ಟ್ ಇಂಡೀಸ್ ಸರಣಿಗೆ ತಂಡವನ್ನು ಹೆಸರಿಸಿದಾಗ ಕರುಣ್ ನಾಯರ್ ಆಯ್ಕೆಯಾಗದಿರುವ ಬಗ್ಗೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರನ್ನು ಕೇಳಿದಾಗ ಉತ್ತರಿಸಿದ ಅವರು, 'ನಾವು ಅವರಿಂದ (ಇಂಗ್ಲೆಂಡ್‌ನಲ್ಲಿ) ಹೆಚ್ಚಿನದನ್ನು ನಿರೀಕ್ಷಿಸಿದ್ದೇವು. ಅವರು ನಾಲ್ಕು ಟೆಸ್ಟ್‌ಗಳನ್ನು ಆಡಿದರು, ಮತ್ತು ಕೇವಲ ಒಂದು ಅರ್ಧಶತಕ ಮಾತ್ರ ಇತ್ತು. ನಾವು ಎಲ್ಲರಿಗೂ 15 ರಿಂದ 20 ಅವಕಾಶಗಳನ್ನು ನೀಡಲು ಬಯಸುತ್ತೇವೆ. ಆದರೆ ದುರದೃಷ್ಟವಶಾತ್, ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ" ಎಂದು ಅಗರ್ಕರ್ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸ್ಪರ್ಧೆಗಳ ಸಂಕೀರ್ಣ ಸಮಯಗಳೊಂದಿಗೆ ಜಗತ್ತು ಹೋರಾಡುತ್ತಿದೆ, ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ': ಜೈಶಂಕರ್ ಖಡಕ್ ಸಂದೇಶ

'ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ಕಾಲ ನಾನೇ ಮುಖ್ಯಮಂತ್ರಿ': ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ!

ಥೂ ಏನ್ ಗುರು.. ಆಗ ಅಶ್ವಿನಿ ಗೌಡ.. ಈಗ ಗಿಲ್ಲಿ.. ಕ್ಯಾಪ್ಟನ್ ಗೆ ಬೆಲೆನೇ ಇಲ್ಲ..: ರಘು ಫುಲ್ ರೋಸ್ಟ್ Video

ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: 145 ಕೆಜಿ ತೂಕ ಎತ್ತಿ ಪದಕ ಪಡೆದ 7 ತಿಂಗಳ ಗರ್ಭಿಣಿ; ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಸಾಧನೆಗೆ ಅಭಿನಂದನೆಗಳ ಮಹಾಪೂರ!

ಮೊನ್ನೆ ನೇಮಕ, ಇಂದು RSS ಕಾರ್ಯಕರ್ತನ ಹೆಸರು ತೆಗೆದು ಹಾಕಿದ ಸರ್ಕಾರ; ಸಿಎಂಗೆ ಕ್ಷಮೆ ಕೇಳುತ್ತೇನೆ!

SCROLL FOR NEXT