2025ರ ಮಹಿಳಾ ವಿಶ್ವಕಪ್‌ನಲ್ಲಿನ ಶೋಚನೀಯ ಅಭಿಯಾನದ ನಂತರ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ತನ್ನ ಮುಖ್ಯ ತರಬೇತುದಾರ ಮೊಹಮ್ಮದ್ ವಾಸಿಂ ಅವರನ್ನು ವಜಾಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಪಂದ್ಯಾವಳಿಯಲ್ಲಿ ಶೂನ್ಯ ಗೆಲುವುಗಳೊಂದಿಗೆ ತಂಡವು 7ನೇ ಸ್ಥಾನದಲ್ಲಿ ಸ್ಥಾನ ಪಡೆದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಖ್ಯ ತರಬೇತುದಾರರನ್ನು ಬದಲಾಯಿಸುವ ಸಾಧ್ಯತೆಯಿದೆ.
ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಭಾರತಕ್ಕೆ 2025ರ ಏಷ್ಯಾ ಕಪ್ ಟ್ರೋಫಿಯನ್ನು ಹಸ್ತಾಂತರಿಸಲು ನಿರಾಕರಿಸಿರುವ ಪಿಸಿಬಿ ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಹಿಳಾ ತಂಡದ ಪ್ರದರ್ಶನದಿಂದ ನಿರಾಶೆಗೊಂಡಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಬ್ಯಾಟಿಂಗ್‌ನಲ್ಲಿ ಪ್ರಗತಿಯ ಕೊರತೆಗೆ ಮೊಹಮ್ಮದ್ ವಾಸಿಂ ಅವರನ್ನು ದೂಷಿಸಲಾಗಿದೆ. ಜೊತೆಗೆ ಇತರ ಕೋಚಿಂಗ್ ಸಿಬ್ಬಂದಿಯೊಂದಿಗೆ ಅವರ ಮಾತುಕತೆ ಮತ್ತು ಸಮನ್ವಯದ ಬಗ್ಗೆಯೂ ಆಂತರಿಕ ಕಳವಳಗಳು ವ್ಯಕ್ತವಾಗಿವೆ.
18 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಮಾಜಿ ಬ್ಯಾಟ್ಸ್‌ಮನ್ ಅಡಿಯಲ್ಲಿ ಪಾಕಿಸ್ತಾನದ ಮಹಿಳಾ ತಂಡವು ಸುಧಾರಿಸುವ ನಿರೀಕ್ಷೆಯಿತ್ತು. ಹೆಚ್ಚುವರಿಯಾಗಿ, ಇತರ ಕೋಚಿಂಗ್ ಸಿಬ್ಬಂದಿಯ ಜೊತೆಗೆ ವಾಸಿಂ ಅವರ ಮಾತುಕತೆ ಮತ್ತು ಸಮನ್ವಯದ ಬಗ್ಗೆಯೂ ಆಂತರಿಕ ಕಳವಳಗಳು ವ್ಯಕ್ತವಾಗಿವೆ. ಮುಖ್ಯವಾಗಿ ಪಾಕಿಸ್ತಾನದ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣದಿರುವುದಕ್ಕೆ ವಾಸಿಂ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ' ಎಂದು ವರದಿ ತಿಳಿಸಿದೆ.