1973 ರಲ್ಲಿ ಮೊದಲ ಬಾರಿಗೆ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯ ನಡೆದಿತ್ತು. ದುರದೃಷ್ಟವಶಾತ್, ನ್ಯೂಜಿಲೆಂಡ್ ಮತ್ತು ಜಮೈಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆಸ್ಟ್ರೇಲಿಯಾ ಮತ್ತು ಯಂಗ್ ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು 58 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಆಗ ಅದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ಚೇಸಿಂಗ್ ದಾಖಲೆಯಾಗಿತ್ತು. ಆದರೆ, ಈಗ ಆಟದ ಸ್ವರೂಪ ಬದಲಾಗಿದೆ. ಕ್ರೀಡೆ ಬಹಳ ದೂರ ಸಾಗಿದೆ. ಬೃಹತ್ ಗುರಿಗಳನ್ನು ಬೆನ್ನಟ್ಟುವ ಸಾಮರ್ಥ್ಯವು ಇದೀಗ ಹಲವು ತಂಡಗಳಲ್ಲಿ ಕಾಣಿಸುತ್ತಿದೆ.
ಆರು ಅತಿ ಹೆಚ್ಚು ಯಶಸ್ವಿ ಚೇಸಿಂಗ್‌ಗಳ ಪೈಕಿ ಈ ವರ್ಷವೇ ಎರಡು ದಾಖಲೆಯಾಗಿವೆ. ಮೊದಲ ಎರಡು ಸ್ಥಾನಗಳು ಈ ವರ್ಷ ಅಕ್ಟೋಬರ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲಾಗಿವೆ. ಅತ್ಯಧಿಕ ಯಶಸ್ವಿ ಚೇಸಿಂಗ್ ದಾಖಲೆಯನ್ನು ಮೊದಲು ಆಸ್ಟ್ರೇಲಿಯಾ ಹೊಂದಿತ್ತು. ಇದೀಗ ಭಾರತ ಅತ್ಯಧಿಕ್ ಚೇಸ್ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ಚೇಸ್
* 2025ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 339 ರನ್ ಚೇಸ್ ಮಾಡಿ ಗೆದ್ದಿದೆ
* 2025ರಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ 331 ರನ್ ಚೇಸ್ ಮಾಡಿ ಗೆದ್ದಿದೆ
* 2024ರಲ್ಲಿ ಶ್ರೀಲಂಕಾ ದಕ್ಷಿಣ ಆಫ್ರಿಕಾ ವಿರುದ್ಧ 302 ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ
* 2012ರಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 289 ರನ್ ಚೇಸ್ ಮಾಡಿ ಗೆದ್ದಿದೆ
* 2023ರಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ 283 ರನ್ ಚೇಸ್ ಮಾಡಿ ಗೆದ್ದಿದೆ
* 2025ರಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ 282 ರನ್ ಚೇಸ್ ಮಾಡಿ ಗೆದ್ದಿದೆ
ಭಾರತ ಅತ್ಯಧಿಕ ಯಶಸ್ವಿ ಚೇಸ್
2025ರ ಅಕ್ಟೋಬರ್ 30 ರಂದು ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಮಹಿಳಾ ODI ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 339 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತದ ದಾಖಲೆ ಅಷ್ಟೇ ಅಲ್ಲ, ಮಹಿಳಾ ODI ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಯಶಸ್ವಿ ಚೇಸ್ ಆಗಿದೆ.