ರಾಹುಲ್ ದ್ರಾವಿಡ್‌ 
ಕ್ರಿಕೆಟ್

IPL 2026: RR ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್‌ರನ್ನು ಕಿತ್ತುಹಾಕಲಾಯಿತೇ?; ಎಬಿಡಿ ಹೇಳಿದ್ದೇನು?

ಎಬಿ ಡಿವಿಲಿಯರ್ಸ್, ಫುಟ್ಬಾಲ್ ಲೀಗ್‌ಗಳಲ್ಲಿ ತಂಡಗಳು ಟ್ರೋಫಿಗಳನ್ನು ಗೆಲ್ಲದಿದ್ದಾಗ ಏನಾಗುತ್ತದೆ ಎಂಬುದನ್ನು ದ್ರಾವಿಡ್ ನಿರ್ಗಮನದ ವಿಚಾರಕ್ಕೆ ಹೋಲಿಕೆ ಮಾಡಿದ್ದಾರೆ.

ಐಪಿಎಲ್ 2026ನೇ ಆವೃತ್ತಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ (RR) ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದು, ಆರ್‌ಆರ್ ತಂಡವೇ ಅವರನ್ನು ಹೊರಹಾಕಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ದ್ರಾವಿಡ್ ಆರ್‌ಆರ್ ತಂಡದ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ಆವೃತ್ತಿಯಲ್ಲಿ ತಂಡವು ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ಫ್ರಾಂಚೈಸಿಯಲ್ಲಿ ದ್ರಾವಿಡ್‌ಗೆ ಮತ್ತೊಂದು ದೊಡ್ಡ ಹುದ್ದೆಯೊಂದನ್ನು ನೀಡಲಾಗಿತ್ತು ಆದರೆ ಅದನ್ನು ತಿರಸ್ಕರಿಸಿದ್ದಾರೆ ಎಂದು ಆರ್‌ಆರ್ ಹೇಳಿದೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದರಲ್ಲಿ ಡಿವಿಲಿಯರ್ಸ್, ಫುಟ್ಬಾಲ್ ಲೀಗ್‌ಗಳಲ್ಲಿ ತಂಡಗಳು ಟ್ರೋಫಿಗಳನ್ನು ಗೆಲ್ಲದಿದ್ದಾಗ ಏನಾಗುತ್ತದೆ ಎಂಬುದನ್ನು ದ್ರಾವಿಡ್ ನಿರ್ಗಮನದ ವಿಚಾರಕ್ಕೆ ಹೋಲಿಕೆ ಮಾಡಿದ್ದಾರೆ. ದ್ರಾವಿಡ್ ಅವರಿಗೆ ಮತ್ತೊಂದು ದೊಡ್ಡ ಹುದ್ದೆಯನ್ನು ನೀಡಲಾಗಿದ್ದು, ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಅವರನ್ನು ಹೊರದಬ್ಬಲಾಗಿದೆ ಎಂಬುದರ ಸೂಚನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಅವರು ಆ ಇನ್ನೊಂದು ಪಾತ್ರವನ್ನು ತಿರಸ್ಕರಿಸಿದ ಸಂಗತಿಯು ನನಗೆ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿದೆ. ಅವರನ್ನು ಹೊರಹಾಕಲಾಗಿದೆ, ಅದು ಎಂದಿಗೂ ಆದರ್ಶವಲ್ಲ' ಎಂದು ಡಿವಿಲಿಯರ್ಸ್ ಹೇಳಿದರು.

ದ್ರಾವಿಡ್ 2024 ರಲ್ಲಿ ಟೀಂ ಇಂಡಿಯಾ ಜೊತೆಗಿನ ತಮ್ಮ ಅವಧಿಯನ್ನು ಕೊನೆಗೊಳಿಸಿದ ಸ್ವಲ್ಪ ಸಮಯದ ನಂತರ RR ಗೆ ಮುಖ್ಯ ಕೋಚ್ ಆಗಿ ಸೇರಿದರು. ಆದಾಗ್ಯೂ, IPL 2025 ರಲ್ಲಿ RR ಅಂದುಕೊಂಡಂತೆ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು ಪಾಯಿಂಟ್ಸ್ ಟೇಬಲ್‌ನಲ್ಲಿ 9 ನೇ ಸ್ಥಾನ ಪಡೆದರು. ಫ್ರಾಂಚೈಸಿಯ ಪಾಲುದಾರರು, RR ನ ಸಹಾಯಕ ಸಿಬ್ಬಂದಿ ಮುಂದಿನ ಕ್ರಮದ ಕುರಿತು ಚರ್ಚಿಸಲು ಲಂಡನ್‌ನಲ್ಲಿ ಮಾಲೀಕ ಮನೋಜ್ ಬಡಾಲೆ ಅವರನ್ನು ಭೇಟಿಯಾಗಲಿದ್ದಾರೆ.

ಐಪಿಎಲ್ 2026 ಕ್ಕಿಂತ ಮೊದಲು ಆರ್‌ಆರ್ ತಮ್ಮಲ್ಲಿನ ಕೊರತೆಗಳನ್ನು ನೀಗಿಸಲು ಮತ್ತು ತಂಡವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಲು ಬಯಸಬಹುದು. ಐಪಿಎಲ್ 2025ಕ್ಕಿಂತ ಮೊದಲು ನಡೆದ ಮೆಗಾ ಹರಾಜಿನ ವೇಳೆ ತಂಡವು ಉತ್ತಮ ಹರಾಜು ತಂತ್ರವನ್ನು ಹೊಂದಿರಲಿಲ್ಲ ಎಂದು ಅವರು ಗಮನಿಸಿದರು.

'ಮುಂಬರುವ ಆವೃತ್ತಿಗಾಗಿ ಆರ್‌ಆರ್ ವಿಭಿನ್ನ ಆಲೋಚನೆಗಳನ್ನು ಹೊಂದಿರಬಹುದು. ಬಹುಶಃ ಅವರು ಕೆಲವು ವಿಚಾರಗಳನ್ನು ಬದಲಾಯಿಸಿ ಅವುಗಳೊಂದಿಗೆ ಮುಂದುವರಿಯಲು ಬಯಸಬಹುದು. ಕಳೆದ ಬಾರಿ ಅವರು ಅತ್ಯುತ್ತಮ ಹರಾಜನ್ನು ಹೊಂದಿದ್ದರು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಅವರು ಜೋಸ್ ಬಟ್ಲರ್‌ನಂತಹ ಕೆಲವು ಅದ್ಭುತ ಆಟಗಾರರನ್ನು ಕೈಬಿಟ್ಟರು, ಅದು ತಪ್ಪಾಯಿತು ಎಂದು ನಾನು ಭಾವಿಸಿದೆ. ನೀವು ಒಬ್ಬ ಅಥವಾ ಇಬ್ಬರನ್ನು ಕೈಬಿಡಬಹುದು. ಆದರೆ, ಅವರು ತಮ್ಮ ತಂಡದ ದೊಡ್ಡ ಭಾಗವನ್ನು ಏಕಕಾಲದಲ್ಲಿ ಬಿಟ್ಟುಕೊಟ್ಟರು, ನನ್ನ ಪ್ರಕಾರ, ಇದು ಕ್ರಮೇಣ ಕುಸಿತ ಕಂಡಿತು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

4 ವರ್ಷಗಳಲ್ಲಿ ಮೊದಲ ಬಾರಿಗೆ ಖಜಾನೆ ಎಕ್ಸ್ಪೋಷರ್ ಕಡಿತಗೊಳಿಸಿದ ಆರ್‌ಬಿಐ

MGNREGA ಕುರಿತು ಚರ್ಚಿಸಲು ವಿಶೇಷ ಅಧಿವೇಶನ; ಜ. 26 ರಿಂದ ಕಾಂಗ್ರೆಸ್​​ನಿಂದ 'ಮನ್ರೇಗಾ ಉಳಿಸಿ' ಪಾದಯಾತ್ರೆ

ಭೀಕರ: ಡಿವೈಡರ್ ಮೇಲೆ ಹಾರಿ ಜನರ ಮೇಲೆ ಬಿದ್ದ ದುಬಾರಿ ಕಾರು, ಬದುಕಿದ್ದೇ ಪವಾಡ.. Video Viral

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

SCROLL FOR NEXT