ಎಂಎಸ್ ಧೋನಿ- ಎನ್ ಶ್ರೀನಿವಾಸನ್ 
ಕ್ರಿಕೆಟ್

IPL 2026: CSK ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ನೇಮಕ

ಇಂಡಿಯಾ ಸಿಮೆಂಟ್ಸ್ ಅನ್ನು ಅಲ್ಟ್ರಾಟೆಕ್ 2014ರಲ್ಲಿ ಖರೀದಿಸಿತು. ಇದರ ಪರಿಣಾಮವಾಗಿ, ಈಗ ಇಂಡಿಯಾ ಸಿಮೆಂಟ್ಸ್ ನಿಯಂತ್ರಣದಲ್ಲಿದ್ದ ಕ್ರಿಕೆಟ್ ಫ್ರಾಂಚೈಸಿಯು ಅಲ್ಟ್ರಾಟೆಕ್ ಪಾಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೂ ಮುಂಚಿತವಾಗಿ ಎನ್ ಶ್ರೀನಿವಾಸನ್ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್‌ಕೆಸಿಎಲ್) ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಹಿಂದೂ ಬಿಸಿನೆಸ್ ಲೈನ್ ವರದಿ ಮಾಡಿದೆ.

ಇಂಡಿಯಾ ಸಿಮೆಂಟ್ಸ್ ಅನ್ನು ಅಲ್ಟ್ರಾಟೆಕ್ 2014ರಲ್ಲಿ ಖರೀದಿಸಿತು. ಇದರ ಪರಿಣಾಮವಾಗಿ, ಈಗ ಇಂಡಿಯಾ ಸಿಮೆಂಟ್ಸ್ ನಿಯಂತ್ರಣದಲ್ಲಿದ್ದ ಕ್ರಿಕೆಟ್ ಫ್ರಾಂಚೈಸಿಯು ಅಲ್ಟ್ರಾಟೆಕ್ ಪಾಲಾಗಿದೆ. ಹೀಗಾಗಿ, ಶ್ರೀನಿವಾಸನ್ ಅಥವಾ ಅವರ ಮಗಳು ರೂಪಾ ಗುರುನಾಥ್ CSKCL ನ ಭಾಗವಾಗಿಲ್ಲದಿದ್ದರೂ, ಅದಾದ ಮೂರು ತಿಂಗಳ ನಂತರ, ಫೆಬ್ರುವರಿಯಲ್ಲಿ, ಇಬ್ಬರನ್ನೂ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಯಿತು.

ಶ್ರೀನಿವಾಸನ್ ಸಿಎಸ್‌ಕೆಸಿಎಲ್‌ನಲ್ಲಿ ಶೇ 0.11 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅವರ ಪತ್ನಿ ಚಿತ್ರಾ ಶ್ರೀನಿವಾಸನ್ ಮತ್ತು ಮಗಳು ರೂಪಾ ಕ್ರಮವಾಗಿ ಶೇ 0.03 ಮತ್ತು ಶೇ 0.01 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಶ್ರೀನಿವಾಸನ್ ಅವರ ಆಪ್ತ ಮಿತ್ರ ಕೆಎಸ್ ವಿಶ್ವನಾಥನ್ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 2028 ರವರೆಗೆ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.

'ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯು 2025ರ ಮಾರ್ಚ್ 22 ರಂದು ಪ್ರಾರಂಭವಾಯಿತು ಮತ್ತು ಪಂದ್ಯಗಳು ಮಾರ್ಚ್‌ನಿಂದ ಜೂನ್‌ವರೆಗೆ ನಡೆದವು. ನಿಮ್ಮ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ನಾಕೌಟ್‌ಗಳಿಗೆ ಅರ್ಹತೆ ಪಡೆಯದಿದ್ದರೂ, ಮುಂಬರುವ ಆವೃತ್ತಿಗಳಲ್ಲಿ ಬಲವಾದ ಪುನರಾಗಮನ ಮತ್ತು ಸುಧಾರಿತ ಪ್ರದರ್ಶನದ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ' ಎಂದು CSKCL ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಹಿಳಾ ವಿಶ್ವಕಪ್ 2025: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 53 ರನ್‌ಗಳ ಭರ್ಜರಿ ಜಯ, ಸೆಮಿಫೈನಲ್‌ಗೆ INDIA ಲಗ್ಗೆ!

ವೆಸ್ಟ್ ಬ್ಯಾಂಕ್ ವಶಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೇ ಅಮೆರಿಕದ ಬೆಂಬಲ ಕಳಕೊಳ್ಳಬೇಕಾಗುತ್ತೆ: ಇಸ್ರೇಲ್‌ಗೆ ಟ್ರಂಪ್ ಕಟು ಎಚ್ಚರಿಕೆ

ರಕ್ಷಣಾ ವಲಯಕ್ಕೆ 79,000 ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ!

ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆ ಆರಂಭ: ಯಾರಾಗಲಿದ್ದಾರೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ?

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಎರಡ್ಮೂರು ದಿನಗಳಲ್ಲಿ AAI ವರದಿ ಸಲ್ಲಿಕೆ- ಎಂ.ಬಿ ಪಾಟೀಲ್

SCROLL FOR NEXT