ಮುಂಬೈ: ಏಷ್ಯಾ ಕಪ್ 2025 ಸನ್ನಿಹದಲ್ಲಿರುವಂತೆಯೇ ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುವಾರ ಸಂಜೆ ದುಬೈ ತಲುಪಿದ ಹಾರ್ದಿಕ್ ಪಾಂಡ್ಯ, ಏಷ್ಯಾ ಕಪ್ ಟೂರ್ನಿಗಾಗಿ ಅಭ್ಯಾಸವನ್ನು ಆರಂಭಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಂದು ಮಿಶ್ರಿತ ಮರಳಿನ ಬಣ್ಣದ ಸ್ಯಾಂಡ್ಲಿ ಬ್ಲಾಂಡ್ ಕೇಶವಿನ್ಯಾಸ ಮಾಡಿಸಿರುವ ಪಾಂಡ್ಯ, ಸುತ್ತಲೂ ಟ್ರಿಮ್ ಮಾಡಿಸಿಕೊಂಡಿದ್ದಾರೆ.
ಪಾಂಡ್ಯ ಅವರ ನೂತನ ಕೇಶ ವಿನ್ಯಾಸಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಪಾಂಡ್ಯ ಅವರನ್ನು ಬೆನ್ ಸ್ಟೋಕ್ಸ್ ಮತ್ತು ನಿಕೋಲಸ್ ಪೊರನ್ ಅವರಿಗೆ ಹೋಲಿಕೆ ಮಾಡಿದ್ದಾರೆ.