ಕ್ರಿಸ್ ಗೇಲ್ 
ಕ್ರಿಕೆಟ್

'ಪಂಜಾಬ್ ಕಿಂಗ್ಸ್‌ ನನಗೆ ಅಗೌರವ ತೋರಿತು, ಖಿನ್ನತೆಗೆ ಒಳಗಾದಂತೆ ಅನಿಸಿತು': ಕ್ರಿಸ್ ಗೇಲ್

ಗೇಲ್ 2018 ರಿಂದ 2021 ರವರೆಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ 41 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. 40.75 ಸರಾಸರಿ ಮತ್ತು 148.65 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,304 ರನ್ ಗಳಿಸಿದರು.

ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ (ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದೊಂದಿಗಿನ ತಮ್ಮ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ಗೇಲ್ ಟಿ20 ಕ್ರಿಕೆಟ್‌ನಲ್ಲಿ ಐಕಾನ್ ಆಗಿ ಉಳಿದಿದ್ದರೂ, ಪಂಜಾಬ್ ಕಿಂಗ್ಸ್ ಅವರನ್ನು 'ಅಗೌರವ ತೋರಿತು' ಮತ್ತು ಆಗ ನಾನು ಖಿನ್ನತೆಗೆ ಒಳಗಾಗುತ್ತಿರುವಂತೆ ಭಾಸವಾಯಿತು ಎಂದಿದ್ದಾರೆ.

ಗೇಲ್ 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅವರು ತಂಡದೊಂದಿಗೆ 41 ಪಂದ್ಯಗಳನ್ನು ಆಡಿದರು. 40.75 ಸರಾಸರಿ ಮತ್ತು 148.65 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,304 ರನ್ ಗಳಿಸಿದರು. ಈ ಪೈಕಿ ಒಂದು ಶತಕ ಮತ್ತು ಹನ್ನೊಂದು ಅರ್ಧಶತಕಗಳು ಸೇರಿದ್ದವು. ಅವರ ಅತ್ಯಧಿಕ ಸ್ಕೋರ್ ಅಜೇಯ 104. ಆದರೂ, ಫ್ರಾಂಚೈಸಿಗಾಗಿ ಆಡಿದ ವೇಳೆಯಲ್ಲಿ ಅವರ ನೆನಪುಗಳು ಸಾಕಷ್ಟು ಕಹಿಯಾಗಿದ್ದವು.

'ಪಂಜಾಬ್ ಜೊತೆಗಿನ ನನ್ನ ಐಪಿಎಲ್ ಪಯಣ ಅವಧಿಗೆ ಮುನ್ನವೇ ಕೊನೆಗೊಂಡಿತು. ಕಿಂಗ್ಸ್ ಇಲೆವೆನ್‌ನಲ್ಲಿ ನನಗೆ ಅಗೌರವ ತೋರಲಾಯಿತು. ಲೀಗ್‌ಗಾಗಿ ಇಷ್ಟೊಂದು ಸೇವೆ ಸಲ್ಲಿಸಿ ಮೌಲ್ಯ ತಂದುಕೊಟ್ಟ ಹಿರಿಯ ಆಟಗಾರನಾಗಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ನನಗೆ ಅನಿಸಿತು. ಅವರು ನನ್ನನ್ನು ಮಗುವಿನಂತೆ ನಡೆಸಿಕೊಂಡರು. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಖಿನ್ನತೆಗೆ ಒಳಗಾಗುತ್ತಿದ್ದೇನೆ ಅನಿಸಿತು. ನನಗೆ ತುಂಬಾ ನೋವಾಗಿತ್ತು ಮತ್ತು ಅನಿಲ್ ಕುಂಬ್ಳೆ ಅವರೊಂದಿಗೆ ಮಾತನಾಡುವಾಗ ಅತ್ತಿದ್ದೆ. ಕುಂಬ್ಳೆ ಮತ್ತು ಫ್ರಾಂಚೈಸಿ ನಡೆಸುತ್ತಿದ್ದ ರೀತಿಯಿಂದಲೂ ನನಗೆ ನಿರಾಶೆಯಾಯಿತು' ಎಂದು ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಗೇಲ್ ಹೇಳಿದರು.

ಆಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್, ನನಗೆ ಫೋನ್ ಮಾಡಿ ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ನೀಡುವ ಭರವಸೆ ನೀಡಿದರು. ಆಗ ನಾನು ಅವರಿಗೆ ಧನ್ಯವಾದ ಹೇಳಿ ಹೊರನಡೆದೆ ಎಂದು ಗೇಲ್ ಬಹಿರಂಗಪಡಿಸಿದ್ದಾರೆ.

'ಕೆಎಲ್ ರಾಹುಲ್ ನನಗೆ ಕರೆ ಮಾಡಿ, 'ಕ್ರಿಸ್, ಇರು, ಮುಂದಿನ ಪಂದ್ಯವನ್ನು ನೀನು ಆಡುತ್ತೀಯ' ಎಂದು ಹೇಳಿದರು. ಆದರೆ ನಾನು, 'ನಿಮಗೆ ಶುಭ ಹಾರೈಸುತ್ತೇನೆ' ಎಂದು ಹೇಳಿ, ನನ್ನ ಬ್ಯಾಗ್ ಪ್ಯಾಕ್ ಮಾಡಿ ಹೊರನಡೆದೆ' ಎಂದರು.

ಗೇಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ಫ್ರಾಂಚೈಸಿಗಳ ಪರವಾಗಿ ಆಡಿದ್ದಾರೆ. ಎಲ್ಲ ಫ್ರಾಂಚೈಸಿಗಳಲ್ಲಿ, ಆದರೆ ಅವರು ಹೆಚ್ಚು ರನ್ ಗಳಿಸಿರುವುದು ಪಂಜಾಬ್ ಪರ.

ತಮ್ಮ ವೃತ್ತಿಜೀವನದಲ್ಲಿ, ಗೇಲ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 16 ಇನಿಂಗ್ಸ್‌ಗಳಲ್ಲಿ ಒಟ್ಟು 797 ರನ್ ಗಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

ಆಜ್ ತಕ್ ನಿರೂಪಕನ ವಿರುದ್ಧ ದ್ವೇಷ ಭಾಷಣ ಆರೋಪ: ಎಫ್‌ಐಆರ್ ದಾಖಲಿಸಲು UP ನ್ಯಾಯಾಲಯ ಆದೇಶ

Amruta Fadnavis: 'ನೀತಿ ಪಾಠ ಹೇಳುವವರೆ ಈ ರೀತಿಯ ಬಟ್ಟೆ ಧರಿಸಿದರೆ ಹೇಗೆ? ಮಹಾ ಸಿಎಂ 'ಫಡ್ನವೀಸ್ ಪತ್ನಿ' ವಿರುದ್ಧ ನೆಟ್ಟಿಗರ ಆಕ್ರೋಶ, Video ವೈರಲ್

ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

SCROLL FOR NEXT