ಸೂರ್ಯಕುಮಾರ್ ಯಾದವ್ 
ಕ್ರಿಕೆಟ್

Asia Cup 2025: ದೂರು ಕೊಟ್ಟ ಪಾಕಿಸ್ತಾನಕ್ಕೆ ಮುಖಭಂಗ; ಸೂರ್ಯಕುಮಾರ್ ಯಾದವ್‌ಗೆ 'ಎಚ್ಚರಿಕೆ' ನೀಡಿದ ಮ್ಯಾಚ್ ರೆಫರಿ!

ಐಸಿಸಿ ಪಾಕ್ ಆಟಗಾರರಿಗೂ ಸಮನ್ಸ್ ನೀಡಿದ್ದು, ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಈಗ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಬೇಕಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲ ಪಂದ್ಯದ ಫಲಿತಾಂಶವನ್ನು ಮೀರಿ ಇತರೆ ವಿಚಾರಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಏಷ್ಯಾ ಕಪ್ 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಚಾರಣೆಗಳು, ದೂರುಗಳು ಇದೀಗ ಐಸಿಸಿ ಅಂಗಳಕ್ಕೆ ಮುಟ್ಟಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಔಪಚಾರಿಕ ದೂರಿನ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಸಮನ್ಸ್ ಜಾರಿ ಮಾಡಿತ್ತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ನಂತರ ಆಟಗಾರರಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ ಬಳಿಕ ಮಾತನಾಡಿದ್ದ ಸೂರ್ಯಕುಮಾರ್, ಈ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ನಂತರ ವಿವಾದ ಉಂಟಾಗಿತ್ತು.

ಉಪಸ್ಥಿತರ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ಮತ್ತು ಕ್ರಿಕೆಟ್ ಕಾರ್ಯಾಚರಣೆ ವ್ಯವಸ್ಥಾಪಕ ಸಮ್ಮರ್ ಮಲ್ಲಾಪುರ್ಕರ್ ಅವರೊಂದಿಗೆ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ಹಾಜರಾದರು. ಭಾರತೀಯ ನಾಯಕ ತಾವು ತಪ್ಪಿತಸ್ಥರಲ್ಲ, ನನ್ನ ಮಾತುಗಳು ರಾಜಕೀಯ ಸಂದೇಶಕ್ಕಿಂತ ಹೆಚ್ಚಾಗಿ ತಮ್ಮ ದೇಶವಾಸಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾಗಿತ್ತು ಎಂದು ವಾದಿಸಿದರು.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ರಾಜಕೀಯಕ್ಕೆ ಸಂಬಂಧಿಸಿದ ಕಾಮೆಂಟ್‌ಗಳಿಂದ ದೂರವಿರುವಂತೆ ರಿಚರ್ಡ್‌ಸನ್ 34 ವರ್ಷದ ಆಟಗಾರನಿಗೆ ನೆನಪಿಸಿದರು. ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕೆ ಸಾಮಾನ್ಯವಾಗಿ ಎಚ್ಚರಿಕೆ ಅಥವಾ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ವಿಧಿಸಲಾಗುತ್ತದೆ. ಇದೀಗ, ಸೂರ್ಯ ಕೇವಲ ಒಂದು ಎಚ್ಚರಿಕೆಯೊಂದಿಗೆ ಪಾರಾಗಿದ್ದಾರೆ.

ಐಸಿಸಿ ಪಾಕ್ ಆಟಗಾರರಿಗೂ ಸಮನ್ಸ್ ನೀಡಿದ್ದು, ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಈಗ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಸೆಪ್ಟೆಂಬರ್ 21ರ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯದ ಸಮಯದಲ್ಲಿ ಅವರ ಪ್ರಚೋದನಕಾರಿ ಸನ್ನೆಗಳನ್ನು ಉಲ್ಲೇಖಿಸಿ ಐಸಿಸಿಗೆ ಬಿಸಿಸಿಐ ಪ್ರತ್ಯೇಕ ದೂರು ದಾಖಲಿಸಿದೆ.

ರೌಫ್ ವಿಮಾನವನ್ನು ಹೊಡೆದುರುಳಿಸುವ ಸನ್ನೆಯನ್ನು ಮಾಡಿದರು. ಇದು ಭಾರತೀಯ ಬೆಂಬಲಿಗರಿಗೆ ಹಿಂದಿನ ಮಿಲಿಟರಿ ಮುಖಾಮುಖಿಯ ಕ್ಷಣಗಳನ್ನು ನೆನಪಿಸುವ ಒಂದು ಸನ್ನೆಯಾಗಿದೆ. ಫರ್ಹಾನ್ ತನ್ನ ಅರ್ಧಶತಕ ಗಳಿಸಿದ ನಂತರ, ಗನ್ ಫೈರ್ ಸಂಭ್ರಮಾಚರಣೆ ಮಾಡಿದರು. ಉಭಯ ದೇಶಗಳು ಕೆಲವು ತಿಂಗಳುಗಳ ಹಿಂದೆ ಯುದ್ಧಕ್ಕೆ ಇಳಿದಿದ್ದನ್ನು ಪರಿಗಣಿಸಿ ಇದು ಭಾರತೀಯರಿಗೆ ಅಪಹಾಸ್ಯ ಮಾಡಿದಂತೆ ಭಾಸವಾಯಿತು. ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಏನಾಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೈಸೂರು: ಪಂಚಭೂತಗಳಲ್ಲಿ ಸಾಹಿತಿ ಎಸ್‌.ಎಲ್‌ ಭೈರಪ್ಪ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ `ಅಕ್ಷರ ಮಾಂತ್ರಿಕ' ನ ಅಂತ್ಯಕ್ರಿಯೆ

MiG-21 ಇನ್ನು ನೆನಪು ಮಾತ್ರ: ಚಂಡೀಗಢದಲ್ಲಿ ಇಂದು ಭಾರತೀಯ ವಾಯುಪಡೆಯಿಂದ ವಿದಾಯ

ಕೇಂದ್ರದ ಆರೋಪಗಳ ನಡುವೆ Sonam Wangchuk ಬೆಂಬಲಕ್ಕೆ ನಿಂತ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ

ಲಡಾಕ್ ಲಡಾಯಿ: ಅ. 7 ರ ಮಾತುಕತೆಗೆ ಮುನ್ನ ಪೂರ್ವ ಸಿದ್ಧತಾ ಸಭೆಗೆ ಗೃಹ ಸಚಿವಾಲಯ ಕರೆ

ಉತ್ತರ ಪ್ರದೇಶ: ಎನ್ಕೌಂಟರ್ ನಂತರ ಶಿಕ್ಷಕಿ ಮುಖಕ್ಕೆ ಆಸಿಡ್ ಎರಚಿದ ವ್ಯಕ್ತಿಯ ಬಂಧನ

SCROLL FOR NEXT