ಮೊಹಮ್ಮದ್ ಕೈಫ್, ಬೂಮ್ರಾ ಸಾಂದರ್ಭಿಕ ಚಿತ್ರ 
ಕ್ರಿಕೆಟ್

Tweet war: ಮೊಹಮ್ಮದ್ ಕೈಫ್-ಬೂಮ್ರಾ ನಡುವೆ ಟ್ವೀಟ್ ವಾರ್! ಅಷ್ಟಕ್ಕೂ ಆಗಿದ್ದೇನು?

ಕೈಫ್ ಅವರ ಹೇಳಿಕೆಯನ್ನು ಬೂಮ್ರಾ ತೀಕ್ಷ್ಣವಾಗಿ ತಳ್ಳಿಹಾಕಿದ್ದಾರೆ. ಮೊದಲು ನಿಖರವಾಗಿರಲಿಲ್ಲ. ಮತ್ತೇ ನಿಖರವಾಗಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.

ನವದೆಹಲಿ: ಸೂರ್ಯ ಕುಮಾರ್ ಯಾದವ್ ಅವರ ನಾಯಕತ್ವದಡಿ ಏಷ್ಯಾ ಕಪ್ ಟೂರ್ನಿಯಲ್ಲಿ ವೇಗಿ ಬೂಮ್ರಾ ಅವರ ಪವರ್‌ ಪ್ಲೇ ವರ್ಕ್‌ಲೋಡ್ ನ್ನು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಪ್ರಶ್ನಿಸಿದ ನಂತರ ಅವರಿಬ್ಬರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ಯುದ್ದ ನಡೆಯುತ್ತಿದೆ.

ಕೈಫ್ ಅವರ ಹೇಳಿಕೆಯನ್ನು ಬೂಮ್ರಾ ತೀಕ್ಷ್ಣವಾಗಿ ತಳ್ಳಿಹಾಕಿದ್ದಾರೆ. ಮೊದಲು ನಿಖರವಾಗಿರಲಿಲ್ಲ. ಮತ್ತೇ ನಿಖರವಾಗಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.

ಇದಕ್ಕೆ ಸಮಧಾನಕಾರ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೊಹಮ್ಮದ್ ಕೈಫ್, ಹಿತೈಷಿ ಹಾಗೂ ಅಭಿಮಾನಿಯಾಗಿ ಕ್ರಿಕೆಟ್ ನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ. ನೀವು ಭಾರತ ಕ್ರಿಕೆಟ್ ತಂಡದ ದೊಡ್ಡ ಮ್ಯಾಚ್ ವಿನ್ನರ್, ತ್ರಿವರ್ಣ ಧ್ವಜದ ಜೆರ್ಸಿ ಧರಿಸಿ ಮೈದಾನದಲ್ಲಿ ಆಡುವಾಗ ಎಲ್ಲವನ್ನೂ ನೀಡಲು ಏನು ಬೇಕು ಎಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಮೊಹಮ್ಮದ್ ಕೈಫ್, ರೋಹಿತ್ ಶರ್ಮಾ ನಾಯಕರಾಗಿದ್ದಾಗ ಬೂಮ್ರಾ ಪವರ್ ಪ್ಲೇನಲ್ಲಿ ಒಂದು, ಮಧ್ಯದ ಓವರ್ ಗಳಲ್ಲಿ ಒಂದು ಮತ್ತು ಡೆತ್ ಓವರ್ ಗಳಲ್ಲಿ ಎರಡು ಓವರ್ ಮಾಡುತ್ತಿದ್ದರು ಎಂದು ಕೈಫ್ ಹೇಳಿಕೆ ನಂತರ ವಿವಾದ ಹುಟ್ಟಿಕೊಂಡಿತ್ತು.

ಬೂಮ್ರಾ ಗಾಯದ ಸಮಸ್ಯೆ ತಪ್ಪಿಸಲು ದೇಹ ಉತ್ತಮ ಅನಿಸಿದಾಗ ಬೌಲಿಂಗ್ ಮಾಡಲು ಆದ್ಯತೆ ನೀಡುತ್ತಾರೆ. ಪವರ್‌ಪ್ಲೇ ನಂತರ ಬುಮ್ರಾ ಅವರ ಒಂದು ಓವರ್ ದೊಡ್ಡ ತಂಡಗಳ ವಿರುದ್ಧ ಭಾರತಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಕೈಫ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ