ಮೊಹ್ಸಿನ್ ನಖ್ವಿ  
ಕ್ರಿಕೆಟ್

Asia Cup 2025: ವಿಜೇತ ತಂಡಕ್ಕೆ ACC ಮುಖ್ಯಸ್ಥ ನಖ್ವಿಯಿಂದ ಟ್ರೋಫಿ ವಿತರಣೆ; ಭಾರತದ ನಿಲುವೇನು?

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅವರ ಉಪಸ್ಥಿತಿ ಬಗ್ಗೆ ಭಾರತ ತಂಡದ ನಿಲುವು ಗಮನ ಸೆಳೆಯುವ ನಿರೀಕ್ಷೆಯಿದೆ.

ದುಬೈ: ಭಾನುವಾರ ನಡೆಯಲಿರುವ ಭಾರತ- ಪಾಕಿಸ್ತಾನ ನಡುವಣ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಲು ಪಾಕಿಸ್ತಾನದ ಆಂತರಿಕ ಸಚಿವರು ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಸಜ್ಜಾಗಿದ್ದಾರೆ.

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅವರ ಉಪಸ್ಥಿತಿ ಬಗ್ಗೆ ಭಾರತ ತಂಡದ ನಿಲುವು ಗಮನ ಸೆಳೆಯುವ ನಿರೀಕ್ಷೆಯಿದೆ.

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥರು ಹಾಗೂ ಎಸಿಸಿ ಮುಖ್ಯಸ್ಥರಾಗಿರುವ ನಖ್ವಿ ಹಾಜರಿರುವುದು ಕಡ್ಡಾಯವಾಗಿದೆ. ಪಂದ್ಯವೊಂದರಲ್ಲಿ ಮಂಡಳಿಯ ಮುಖ್ಯಸ್ಥರ ಹಾಜರಾತಿಯು ಸಾಮಾನ್ಯವಾಗಿ ವಾಡಿಕೆಯಂತೆ ಇರುತ್ತದೆ. ಆದರೆ ಅವರ ಭಾರತ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಭಾರತ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ACC ಮುಖ್ಯಸ್ಥರಾಗಿ ನಖ್ವಿ ಟ್ರೋಫಿ ವಿತರಿಸಲು ಹಾಗೂ ಎರಡೂ ತಂಡಗಳೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ನಲ್ಲಿ ಭಾಗವಹಿಸುವ ಹಕ್ಕು ಹೊಂದಿದ್ದಾರೆ.

ಆದಾಗ್ಯೂ ಭಾರತ ತಂಡವು ಪಾಕಿಸ್ತಾನದೊಂದಿಗೆ 'ನೋ ಹ್ಯಾಂಡ್‌ಶೇಕ್' ನೀತಿಯನ್ನು ನಿರ್ವಹಿಸುತ್ತಿದೆ. ಬಹಿರಂಗವಾಗಿ ಭಾರತದ ವಿರುದ್ಧ ಹೇಳಿಕೆ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥರೊಂದಿಗೆ ಬಿಸಿಸಿಐ ಆಟಗಾರರು ಮಾತನಾಡುವ ಸಾಧ್ಯತೆಯಿಲ್ಲ. ಆದಾಗ್ಯೂ, ನಖ್ವಿ ಉಪಸ್ಥಿತಿಗೆ ಸಂಬಂಧಿಸಿದಂತೆ ಬಿಸಿಸಿಐ ತನ್ನ ನಿಲುವನ್ನು ಇನ್ನೂ ಸಾರ್ವಜನಿಕವಾಗಿ ಸ್ಪಷ್ಟಪಡಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರು ಕಾಲ್ತುಳಿತ ದುರಂತ: 36 ಮಂದಿ ಸಾವು; ತಮಿಳುನಾಡಿನಿಂದ ವರದಿ ಕೇಳಿದ ಕೇಂದ್ರ; TVK ವಿಜಯ್ ಪ್ರತಿಕ್ರಿಯೆ ಏನು?

ಕರೂರ್ ಕಾಲ್ತುಳಿತ ಘಟನೆ ತನಿಖೆಗೆ ಆಯೋಗ; ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ: ಸಿಎಂ ಸ್ಟಾಲಿನ್ ಘೋಷಣೆ

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 36ಕ್ಕೂ ಹೆಚ್ಚು ಮಂದಿ ಸಾವು; ಪ್ರಧಾನಿ ಸಂತಾಪ; ಸಿಎಂ ಸ್ಟಾಲಿನ್ ಹೇಳಿದ್ದು ಏನು?

Asia CUP 2025: ಭಾರತ-ಪಾಕ್ ಫೈನಲ್ ಪಂದ್ಯಕ್ಕೂ ಮುನ್ನ ಕಿಡಿ ಹೊತ್ತಿಸಿದ PCB ಮುಖ್ಯಸ್ಥ! ಏನಿದು?

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 8 ಮಕ್ಕಳು ಸೇರಿ 36 ಮಂದಿ ಸಾವು; 40 ಜನರಿಗೆ ಗಂಭೀರ ಗಾಯ!

SCROLL FOR NEXT