ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ಆತುರದ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಅನಗತ್ಯವಾಗಿ ಶಾಟ್ ಹೊಡೆಯಲು ಹೋಗಿ ಅಭಿಷೇಕ್ ಶರ್ಮಾ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು. ಅಭಿಷೇಕ್ ಶರ್ಮಾ ವಿಕೆಟ್ ಪಾಕಿಸ್ತಾನಕ್ಕೆ ಪ್ರಮುಖವಾದ ವಿಕೆಟ್ ಆಗಿತ್ತು. ಈ ಹಿಂದಿನ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಅಭಿಷೇಕ್ ಶರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಆದಾಗ್ಯೂ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಫಹೀಮ್ ಅಶ್ರಫ್ ಬೇಗನೆ ಫೆವಿಲಿಯನ್ ಸೇರುವಂತೆ ಮಾಡಿದ್ದರು.
ಅಭಿಷೇಕ್ ಶರ್ಮಾ ವಿಕೆಟ್ ಬೀಳುತ್ತಿದ್ದಂತೆಯೇ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಭಾರತದ ಟಾರ್ಗೆಟ್ 190 ಆಗಿದ್ದರೆ ಕಷ್ಟವಾಗುತಿತ್ತು. 147 ಇರುವಾಗ ಅದನ್ನು ಚೇಸಿಂಗ್ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ ಎರಡನೇ ಓವರ್ ಲ್ಲಿಯೇ ಶಾಟ್ ಹೊಡೆಯುವ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತವು ಸೂಕ್ಷ್ಮವಾಗಿ ಆಡಬೇಕಾಗಿದೆ. ಫೈನಲ್ ಪೈಪೋಟಿಯಲ್ಲಿ ಪಾಕಿಸ್ತಾನಕ್ಕೆ ಒಂದು ಸಣ್ಣ ಅವಕಾಶ ನೀಡಿದ್ರು ದೊಡ್ಡ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ.