ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2025 ಟೂರ್ನಿಯ ರಣರೋಚಕ ಹೈ ವೋಲ್ಟೇಜ್ ಫೈನಲ್ ಪಂದ್ಯದ ಕೊನೆ ಕ್ಷಣ ನಿಜಕ್ಕೂ ಅದ್ಬುತವಾಗಿತ್ತು.
ಭಾರತದ ರಿಂಕು ಸಿಂಗ್ ಅದ್ಬುತ ಪ್ರದರ್ಶನ ಮೂಲಕ ಮ್ಯಾಚ್ ಫಿನಿಶರ್ ಎನಿಸಿಕೊಂಡರು. ಒತ್ತಡದ ಸಂದರ್ಭದಲ್ಲಿ ತನ್ನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯ ಗೆಲುವಿನ ಬಳಿಕ ಮಾತನಾಡಿದ ರಿಂಕು ಸಿಂಗ್ ನಾನು ಫಿನಿಶರ್, ಫಿನಿಶರ್ ಎಂದು ಗುರುತಿಸಿಕೊಂಡಿದ್ದೇನೆ.ಇದು ನನ್ನ ಕೆಲಸ! ನಾನು ಬ್ಯಾಟಿಂಗ್ ಬಂದಾಗ ಬಾಲ್ ಹೆಚ್ಚು ಇರಲಿಲ್ಲ. ಆದರೆ ಮ್ಯಾಚ್ ಫಿನಿಶಿಂಗ್ ನನ್ನ ಕೆಲಸವಾಗಿತ್ತು. ಅದನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದೇನೆ ಅನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಣರೋಚಕ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಬಗ್ಗುಬಡಿದ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತ ಪರ ಆಕರ್ಷಕ ಅರ್ಧ ಶತಕ ಭಾರಿಸಿದ ತಿಲಕ್ ವರ್ಮಾ ತಂಡ ಏಷ್ಯಾ ಕಪ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದು ಹಂತದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ತಂಡಕ್ಕೆ ತಿಲಕ್ ವರ್ಮಾ (69) ಹಾಗೂ ಸಂಜು ಸ್ಯಾಮ್ಸನ್ 24, ಶಿವಂ ದುಬೆ ಆಸರೆಯಾದರು.