ನವದೆಹಲಿ: ಪಂದ್ಯ ಗೆದ್ದ ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡಲು ನಿರಾಕರಿಸುವ ಪದ್ಧತಿಯನ್ನು ನಾನೆಂದಿಗೂ ನೋಡಿಲ್ಲ ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಸಾಧಿಸಿತು. ಆದರೆ, ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿತು. ಹೀಗಾಗಿ. ಭಾರತ ಗೆದ್ದರೂ ಟ್ರೋಫಿ ನೀಡಲಿಲ್ಲ.
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸೂರ್ಯಕುಮಾರ್ ಯಾದವ್ ಅವರು, ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದ ದಿನಗಳಿಂದಲೂ ಇಂತಹ ಪದ್ಧತಿಯನ್ನು ಎಂದಿಗೂ ನೋಡಿಲ್ಲ. ಚಾಂಪಿಯನ್‌ಗಳಾದರೂ ಟ್ರೋಪಿ ಕೊಡದಿರುವುದು ಇದೆಂತಹ ಪ್ರಕ್ರಿಯೆ. ಇಂತಹ ವ್ಯವಸ್ಥೆಯನ್ನು ನಾನೆಂದು ಕಂಡಿರಲಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸೂರ್ಯ ಕುಮಾರ್ ಯಾದವ್ ಅವರು, ಟ್ರೋಫಿ ನೀಡದ ಏಸಿಸಿ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಚಾಂಪಿಯನ್‌ಗಳಾದರೂ ಟ್ರೋಪಿ ಕೊಡದಿರುವುದನ್ನು ನಾನೆಂಗೂ ನೋಡಿಲ್ಲ. ಆದರೆ, ನನ್ನ ನಿಜವಾದ ಟ್ರೋಫಿಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿವೆ. ನನ್ನ 14 ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳೇ ನನಗೆ ಟ್ರೋಫಿ. ಅವರು ಈ ಪ್ರಶಸ್ತಿಯನ್ನು ಗೆಲ್ಲಲು ಕಾರಣ. ಆದರೂ, ಕಷ್ಟಪಟ್ಟು ಪಂದ್ಯಾವಳಿಯಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಕೊಡದಿರುವುದು, ನಾನು ಎಂದಿಗೂ ನೋಡಿಲ್ಲ. ನಾವು 4ನೇ ತಾರೀಖಿನಿಂದ ದುಬೈನಲ್ಲಿ ಇದ್ದೇವೆ. ಇಂದು ಒಂದು ಪಂದ್ಯ ಆಡಿದ್ದೇವೆ. ಎರಡು ದಿನಗಳಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಉತ್ತಮ ಪಂದ್ಯಗಳನ್ನು ಉತ್ತಮವಾಗಿ ಆಡಿದ್ದೇವೆ. ನಾವು ಟ್ರೋಫಿ ಪಡೆಯಲು ಅರ್ಹರು ಎಂದು ಹೇಳಿದರು.
ಇದೇ ವೇಳೆ ಏಷ್ಯಾ ಕಪ್ ಪಂದ್ಯಾವಳಿಗಳಿಂದ ತಾವು ಗಳಿಸಿದ ಸಂಪೂರ್ಣ ಪಂದ್ಯ ಶುಲ್ಕವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ನೀಡುವುದಾಗಿ ಘೋಷಿಸಿದರು.
ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮುಂಬರುವ ವಿಶ್ವಕಪ್ ವರ್ಷಕ್ಕೆ ಈ ಕ್ಷಣಗಳು ಬಹಳ ಮುಖ್ಯ. ತಂಡದ ಆಟಗಾರರು ಟ್ರೋಫಿ ಕೊಡದಿದ್ದ ಘಟನೆ ಬಗ್ಗೆ ಸಕಾರಾತ್ಮಕವಾಗಿ ತೆಗೆದುಕೊಂಡರು ಎಂದು ನಾನು ಭಾವಿಸುತ್ತೇನೆ. ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಟ್ರೋಫಿ ನೀಡದಿದ್ದಕ್ಕೆ ಬೇಸರವಿಲ್ಲ. ನಾವು ಗೆದ್ದಾಗ ಕ್ರೀಡಾಂಗಣದಲ್ಲಿ ಜನರ ಸಂತೋಷವೂ, ಸಂಭ್ರಮದ ಕ್ಷಣ ನಮ್ಮ ಮುಂದಿನ ಪಂದ್ಯಕ್ಕೆ ಸ್ಪೂರ್ತಿ ಎಂದು ತಿಳಿಸಿದರು.
ಬಳಿಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಕೈಕುಲುಕಲು ನಿರಾಕರಿಸುವ ಮೂಲಕ ಕ್ರೀಡೆಯನ್ನು ರಾಜಕೀಯಗೊಳಿಸುತ್ತಿದ್ದೀರಿ ಎಂಬ ಪಾಕಿಸ್ತಾನ ಪತ್ರಕರ್ತನಿಗೆ ಹಾಸ್ಯ ರೀತಿಯಲ್ಲೇ ಉತ್ತರ ನೀಡಿದ ಸೂರ್ಯ ಕುಮಾರ್ ಅವರು, ನೀವು ಕೋಪಗೊಳ್ಳುತ್ತಿದ್ದೀರಿ, ಸರಿ? ನೀವೇಕೆ ಇಷ್ಟೊಂದು ಕೋಪಗೊಳ್ಳುತ್ತಿದ್ದೀರಿ? ಮರು ಪ್ರಶ್ನಿಸಿದರು.
ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಂತೆ ತಂಡಕ್ಕೆ ಬಿಸಿಸಿಐ ಸೂಚಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ನನಗೆ ಇಮೇಲ್ ಬಗ್ಗೆ ತಿಳಿದಿಲ್ಲ. ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಮೈದಾನದಲ್ಲಿ. ಯಾರಿಂದಲೂ ನಮಗೆ ಸೂಚನೆ ಬಂದಿಲ್ಲ. ನೀವು ಟೂರ್ನಮೆಂಟ್ ಗೆದ್ದರೆ, ಟ್ರೋಫಿಗೆ ಅರ್ಹರಲ್ಲವೇ? ನೀವೇ ಹೇಳಿ ಎಂದು ಕೇಳಿದರು. ಈ ವೇಳೆ ಪಾಕಿಸ್ತಾನ ಪತ್ರಕರ್ತ ಏನನ್ನೂ ಹೇಳದೆ ಒಪ್ಪಿಗೆ ಸೂಚಿಸುತ್ತಾ ತಲೆಯಾಡಿಸಿದರು.
ಬಳಿಕ ಟ್ರೋಫಿ ಕುರಿತು ಮಾತನಾಡಿ, ನೀವು ಟ್ರೋಫಿ ನೋಡಿಲ್ಲವೇ? ನಾನು ಟ್ರೋಫಿ ತಂದಿದ್ದೇನೆ. ತನ್ನ ತಂಡವೇ ನನಗೆ ಟ್ರೋಫಿ ಎಂದು ವ್ಯಂಗ್ಯವಾಡಿದರು.