ನವದೆಹಲಿ: ಏಷ್ಯಾ ಕಪ್ 2025 ಸೋಲಿನ ಹತಾಶೆಯಲ್ಲಿರುವ ಪಾಕಿಸ್ತಾನ ಭಾರತದ ವಿರುದ್ಧದ ತನ್ನ ಹೇಳಿಕೆಗಳಿಂದ ಮತ್ತಷ್ಟು ನಗೆಪಾಟಲಿಗೀಡಾಗುತ್ತಿದೆ.
ಮೈದಾನದಲ್ಲಿ ಚೆಕ್ ಎಸೆದು ಸುದ್ದಿಯಾಗಿದ್ದ ಪಾಕ್ ಕ್ರಿಕೆಟ್ ತಂಡದ ನಾಯಕ ಒಂದೆಡೆಯಾದರೆ, ಏಷ್ಯಾ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷನಾಗಿರುವ ಪಾಕಿಸ್ತಾನದ Mohsin Naqvi ಭಾರತದ ವಿರುದ್ಧ ತನ್ನ ವಿಚಿತ್ರ ಹೇಳಿಕೆಗಳಿಂದಾಗಿ ತೀವ್ರ ನಗೆಪಾಟಲಿಗೀಡಾಗಿದ್ದಾರೆ.
ಏಷ್ಯಾ ಕಪ್ ಟ್ರೋಫಿಯೊಂದಿಗೆ ಭಾರತ ಹೊರನಡೆಯುವ ಅವಕಾಶವನ್ನು ಮೊಹ್ಸಿನ್ ನಖ್ವಿ ನಿರಾಕರಿಸಿದರು. ಆದಾಗ್ಯೂ, ಕೊನೆಯಲ್ಲಿ, ಅವರು ಅತ್ಯಂತ ಕಳಪೆ ವ್ಯಕ್ತಿತ್ವ ತೋರಿದರು.
ನಖ್ವಿಯಿಂದ ಟ್ರೋಫಿ ಪಡೆಯುವುದಕ್ಕೆ ಭಾರತೀಯ ತಂಡ ನಿರಾಕರಿಸಿತಾದರೂ, ಆ ಟ್ರೋಫಿಯನ್ನು ಮೈದಾನದಲ್ಲೇ ಉಪಸ್ಥಿತರಿದ್ದ ಇನ್ನಿತರ ಗಣ್ಯರ ಮೂಲಕ ಭಾರತ ತಂಡಕ್ಕೆ ತಲುಪಿಸಿ ನಖ್ವಿ ಉದಾರ ವ್ಯಕ್ತಿತ್ವವನ್ನು ಪ್ರದರ್ಶಿಸಬಹುದಿತ್ತು. ಆದರೆ ನಖ್ವಿ ನನ್ನ ಟ್ರೋಫಿ ನನ್ನ ಇಷ್ಟ ಎಂಬಂತೆ ಮೈದಾನದಿಂದ ಟ್ರೋಫಿಯನ್ನೆ ಹೊತ್ತೊಯ್ದು ಮತ್ತಷ್ಟು ಹಾಸ್ಯಾಸ್ಪದ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ.
ಅದಷ್ಟೇ ಅಲ್ಲದೇ ನಾವು ಗೆದ್ದಿದ್ದೀವಿ ಆದ್ದರಿಂದ Trophy ನಮ್ಮ ಬಳಿ ಇದೆ, ಭಾರತ ಗೆದ್ದಿದ್ದರೆ ಟ್ರೋಫಿ ತೋರಿಸಲಿ ಎಂಬಂತಹ ಹೇಳಿಕೆಗಳನ್ನೂ ನೀಡಿ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದಾರೆ.
ಏಷ್ಯಾ ಕಪ್‌ಗೆ ಇದು ಸಂಪೂರ್ಣವಾಗಿ ಹಾಸ್ಯಾಸ್ಪದ ಅಂತ್ಯವಾಗಿತ್ತು, ಅಲ್ಲಿ ಕ್ರೀಡೆಯು ಬಹುತೇಕ ಸೈಡ್‌ಶೋ ಆಗಿತ್ತು ಮತ್ತು ಕ್ರಿಕೆಟ್ ಅಲ್ಲದ ಬೆಳವಣಿಗೆಗಳು ಕೇಂದ್ರಬಿಂದುವಾಗಿದ್ದಂತೂ ಕ್ರಿಕೆಟ್ ನ ಇತಿಹಾಸ ಎಂದಿಗೂ ಮರೆಯದ ಘಟನೆಯಾಗಿ ಪರಿಣಮಿಸಿದೆ.