ಭಾರತ ಕ್ರಿಕೆಟ್ ತಂಡ (Indian Cricket Team) ಪಾಕಿಸ್ತಾನ ತಂಡವನ್ನು ಮಣಿಸಿ 2025 ರ ಏಷ್ಯಾ ಕಪ್ ಗೆದ್ದು ಟ್ರೋಫಿಯನ್ ಸ್ವೀಕರಿಸದ್ದು ಭಾರೀ ಸುದ್ದಿ ಮಾಡಿತು. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಭಾರತೀಯ ತಂಡ ಸ್ಪಷ್ಟಪಡಿಸಿತ್ತು.
ನಖ್ವಿ ಸ್ವತಃ ಟ್ರೋಫಿಯನ್ನು ನೀಡಲು ಬಯಸಿದ್ದರು ಆದರೆ ಭಾರತ ನಿರಾಕರಿಸಿತು. ಇದಕ್ಕೆ ಮೊಹ್ಸಿನ್ ನಖ್ವಿ ತಮ್ಮೊಂದಿಗೆ ಟ್ರೋಫಿ ಮತ್ತು ಟೀಮ್ ಇಂಡಿಯಾದ ಆಟಗಾರರ ಪದಕಗಳನ್ನು ತೆಗೆದುಕೊಂಡು ಹೊರಟರು.
ಸೂರ್ಯಕುಮಾರ್ ಯಾದವ್ ಇನ್ಸ್ಟಾ ಪೋಸ್ಟ್ ವೈರಲ್
ಭಾರತ ತಂಡ ಏಷ್ಯಾ ಕಪ್ ಟ್ರೋಫಿಯನ್ನು ನಿರಾಕರಿಸಿದ ಬೆನ್ನಲ್ಲೇ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಪಂದ್ಯದಲ್ಲಿ ವಿಜೇತ ತಂಡವನ್ನು ನೆನಪಿಸಿಕೊಳ್ಳುತ್ತಾರೆ ಹೊರತು ಟ್ರೋಫಿಯನ್ನು ಅಲ್ಲ ಎಂದು ಹೇಳಿದ್ದಾರೆ. ತಿಲಕ್ ವರ್ಮಾ ಅವರೊಂದಿಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಎಮೋಜಿಗಳೊಂದಿಗೆ ಟ್ರೋಫಿಯನ್ನು ರಚಿಸಿದ್ದಾರೆ. ಪಂದ್ಯ ಮುಗಿದ ನಂತರ, ಚಾಂಪಿಯನ್‌ಗಳನ್ನು ಮಾತ್ರ ಜನ ನೆನಪಿಸಿಕೊಳ್ಳುತ್ತಾರೆ, ಟ್ರೋಫಿಯ ಚಿತ್ರವನ್ನಲ್ಲ ಎಂದು ಬರೆದುಕೊಂಡಿದ್ದಾರೆ.