ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ 
ಕ್ರಿಕೆಟ್

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ' ಪತ್ತೆ ಮಾಡಿದೆ: ದಾಂಪತ್ಯ ದ್ರೋಹದ ಕುರಿತು ಧನಶ್ರೀ ವರ್ಮಾ ಸ್ಫೋಟಕ ಹೇಳಿಕೆ, Video!

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಯಲ್ಲಿದೆ.

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಯಲ್ಲಿದೆ. ತಮ್ಮ ಮದುವೆಯಾದ ಕೇವಲ ಎರಡು ತಿಂಗಳ ನಂತರ ತನ್ನ ಮಾಜಿ ಪತಿ ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದೆ ಎಂದು ನೃತ್ಯ ಸಂಯೋಜಕಿ ಹೇಳಿಕೊಂಡಿದ್ದಾರೆ. ಪ್ರಸ್ತುತ, ಧನಶ್ರೀ ರೈಸ್ ಅಂಡ್ ಫಾಲ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ, ಧನಶ್ರೀ ಊಟದ ಮೇಜಿನ ಬಳಿ ಉಪಾಹಾರದ ಸಮಯದಲ್ಲಿ ನಟಿ ಕುಬ್ರಾ ಸೇಟ್ ಅವರೊಂದಿಗಿನ ತನ್ನ ಮುರಿದ ವಿವಾಹದ ಬಗ್ಗೆ ಚರ್ಚಿಸುತ್ತಾರೆ.

ನಿಮ್ಮ ಸಂಬಂಧದಲ್ಲಿ 'ಇನ್ನು ಮುಂದುವರಿಯಲು ಸಾಧ್ಯವಿಲ್ಲ, ಈ ತಪ್ಪು ಈಗಾಗಲೇ ಮಾಡಲಾಗಿದೆ' ಎಂದು ನೀವು ಯಾವಾಗ ಅರಿತುಕೊಂಡಿದ್ದೀರಿ?" ಎಂದು ಕುಬ್ರಾ ಕೇಳಿದರು, "ಮೊದಲ ವರ್ಷ" ಎಂದು ಧನಶ್ರೀ ಉತ್ತರಿಸಿದರು. ನಾನು ಅವನನ್ನು ಎರಡನೇ ತಿಂಗಳಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದೆ ಎಂದು ಧನಶ್ರೀ ಮತ್ತಷ್ಟು ವಿವರಿಸಿದರು. ಆಕೆಯ ಪ್ರತಿಕ್ರಿಯೆ ಕುಬ್ರಾ ಅವರನ್ನು ಆಶ್ಚರ್ಯಗೊಳಿಸಿದ್ದು ಮ್ಯಾಡ್ ಬ್ರದರ್ ಎಂದು ಹೇಳುತ್ತಾರೆ. ಈ ಶೋನ ಆರಂಭದಲ್ಲಿ, ಧನಶ್ರೀ ಜೀವನಾಂಶ ವದಂತಿಗಳು ಸುಳ್ಳು ಎಂದು ಬಹಿರಂಗಪಡಿಸಿದರು. ಆದಿತ್ಯ ನಾರಾಯಣ್ ಜೊತೆ ಮಾತನಾಡುವಾಗ ಸುಮಾರು ಒಂದು ವರ್ಷ ಕಳೆದಿದೆ. ಪರಸ್ಪರ ಒಪ್ಪಿಗೆಯಿಂದಾಗಿ ಇದು ವಿಚ್ಛೇದನ ಬೇಗನೆ ಸಿಕ್ಕಿತು ಎಂದು ಹೇಳಿದರು.

ನಂತರ ಜೀವನಾಂಶದ ಬಗ್ಗೆ ಚರ್ಚೆಗಳು ಶುರುವಾದವು. ಅದು ತಪ್ಪು. ನಾನು ಏನೂ ಮಾತನಾಡುತ್ತಿಲ್ಲ ಎಂಬ ಕಾರಣಕ್ಕಾಗಿ ನೀವು ಏನನ್ನಾದರೂ ಹೇಳುತ್ತಲೇ ಇರುತ್ತೀರಾ? ನನ್ನ ಪೋಷಕರು ನನಗೆ ನನ್ನ ಮನಸ್ಸನ್ನು ನಾನು ಪ್ರೀತಿಸುವ ಜನರೊಂದಿಗೆ ಮಾತ್ರ ಮಾತನಾಡಲು ಕಲಿಸಿದ್ದಾರೆ. ನಾವು ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದೇವು. ಅದಕ್ಕೂ ಮೊದಲು ನಾವು 6-7 ತಿಂಗಳುಗಳ ಕಾಲ ಡೇಟಿಂಗ್ ಮಾಡಿದ್ದೇವು ಎಂದು ಹೇಳಿದರು. ಅಂತಿಮವಾಗಿ ನನ್ನ ಜೀವನದಲ್ಲಿ ಈ ರೀತಿ ನಡೆಯಿತಲ್ಲ ಎಂಬ ವಿಚಾರ ನೋವುಂಟು ಮಾಡುತ್ತದೆ ಎಂದು ಧನಶ್ರೀ ಹೇಳಿದರು.

ಧನಶ್ರೀ ಮತ್ತು ಯುಜ್ವೇಂದ್ರ ಚಾಹಲ್ ಅವರ ಪರಿಚಯ 2020ರಲ್ಲಿ COVID-19 ಲಾಕ್‌ಡೌನ್ ಸಮಯದಲ್ಲಿ ಆಯಿತು. ಧನಶ್ರೀ ಅವರ ಆನ್‌ಲೈನ್ ನೃತ್ಯ ತರಗತಿಗಳ ಮೂಲಕ ಸಂಪರ್ಕ ಸಾಧಿಸಿದಾಗ ಅರಳಿತು. ಈ ಜೋಡಿ 2020ರ ಡಿಸೆಂಬರ್ 20ರಂದು ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿದ್ದು 2025ರಲ್ಲಿ ದಾಂಪತ್ಯ ಕೊನೆಗೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಗಲಕೋಟೆ: ರೈತರ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚುತ್ತಿರುವ Video ವೈರಲ್; ಮೂರು FIR ದಾಖಲು

ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

Cricket: ಭಾರತ vs ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, 3 ದಾಖಲೆಗಳ ನಿರ್ಮಾಣ

Bihar: 'ಅಂದು ಇದೇ ಕೊಳಕು ಕಿಡ್ನಿ ನಿಮ್ಮ ಪ್ರಾಣ ಉಳಿಸಿತು, ಇಂದು ಚಪ್ಪಲಿಯಲ್ಲಿ ಥಳಿಸುತ್ತಿದ್ದಾರೆ'..: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ

India vs South Africa: 93 ವರ್ಷಗಳ ಇತಿಹಾಸದಲ್ಲೇ ಹೀನಾಯ ದಾಖಲೆ ಬರೆದ ಭಾರತ!

SCROLL FOR NEXT