ಮಹಮದ್ ಶಮಿ ಮತ್ತು ಎಲ್ಎಸ್ ಜಿ ಮಾಲೀಕ ಸಂಜೀವ್ ಗೋಯೆಂಕಾ 
ಕ್ರಿಕೆಟ್

IPL 2026: ಯಾರ್ ಮೇಲಾದ್ರೂ 5 ಸಾವಿರ ಹೂಡಿಕೆ ಮಾಡಿ ನೋಡಿ: LSG ಮಾಲೀಕರ ಕುರಿತು Mohammed Shami ಹೇಳಿಕೆ ವೈರಲ್!

2024ರಲ್ಲಿ ಕೆಎಲ್ ರಾಹುಲ್ ಮತ್ತು 2025ರಲ್ಲಿ ರಿಷಬ್ ಪಂತ್ ಜೊತೆಗಿನ ವಾಗ್ವಾದ ಬಳಿಕವಂತೂ ಸಂಜೀವ್ ಗೊಯೆಂಕಾ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನೇ ವ್ಯಕ್ತಪಡಿಸಿದ್ದರು.

ಲಖನೌ: ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕುರಿತು ಮಾತನಾಡಿರುವ ಕ್ರಿಕೆಟಿಗ ಮಹಮದ್ ಶಮಿ, ಅವರ ಭಾವನೆ ಮತ್ತು ಪ್ರತಿಕ್ರಿಯೆಗಳು ಸರಿಯಾಗೇ ಇವೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

LSG ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ಕಟು ಪ್ರತಿಕ್ರಿಯೆಗಳ ಮೂಲಕವೇ ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. 2024ರಲ್ಲಿ ಕೆಎಲ್ ರಾಹುಲ್ ಮತ್ತು 2025ರಲ್ಲಿ ರಿಷಬ್ ಪಂತ್ ಜೊತೆಗಿನ ವಾಗ್ವಾದ ಬಳಿಕವಂತೂ ಸಂಜೀವ್ ಗೊಯೆಂಕಾ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನೇ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಅವರ ಕೋಪ, ಭಾವನೆಗಳು ಮತ್ತು ಪ್ರತಿಕ್ರಿಯೆಗಳು ನ್ಯಾಯಸಮ್ಮತವಾಗಿವೆ ಎಂದು ಭಾರತ ತಂಡದ ಸ್ಟಾರ್ ವೇಗಿ ಮಹಮದ್ ಶಮಿ ಹೇಳಿದ್ದಾರೆ. ಎಲ್ ಎಸ್ ಜಿ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿರುವ ಬೃಹತ್ ಮೊತ್ತವನ್ನು ಗಮನಿಸಿದರೆ ಅವರ ಪ್ರತಿಕ್ರಿಯೆಗಳು ಸರಿಯಾಗಿವೆ ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ.

'ಅನ್‌ಪ್ಲಗ್ಡ್' ಪಾಡ್‌ಕ್ಯಾಸ್ಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಮಹಮದ್ ಶಮಿ, 'ಗೋಯೆಂಕಾ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿರುವ ಬೃಹತ್ ಮೊತ್ತವನ್ನು ನೋಡಿದರೆ ಅವರ ಪ್ರತಿಕ್ರಿಯೆಗಳು ಮಾನ್ಯವಾಗಿವೆ. ಅವರು ಯಾರೇ ಆಗಿರಲಿ, ಅವರು ನಿಮ್ಮ ಮೇಲೆ ಇಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದಾಗ, ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದು ಸಾಮಾನ್ಯ.

ಆದ್ದರಿಂದ ಗೋಯೆಂಕಾ ಅವರು ಅದರ ಬಗ್ಗೆ ಪೊಸೆಸಿವ್ ಆಗಿದ್ದರೆ ಯಾವುದೇ ತಪ್ಪಿಲ್ಲ. ಅವರು ತಮ್ಮ ಆಟಗಾರರು ಪ್ರದರ್ಶನ ನೀಡುತ್ತಾರೆ ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಿರೀಕ್ಷಿಸಿದರೆ, ಅದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಗೊಯೆಂಕಾ ಅವರು ಲಖ್ನೋ ತಂಡದಲ್ಲಿ ಹೂಡಿಕೆ ಮಾಡಿರುವ ಸಾವಿರಾರು ಕೋಟಿ ಬಿಡಿ.. ಯಾರಾದರೂ ಕೇವಲ 5,000 ರೂ.ಗಳನ್ನು ಹೂಡಿಕೆ ಮಾಡಿದರೂ ಸಹ ಇದೇ ರೀತಿ ಆತಂಕಕ್ಕೊಳಗಾಗುತ್ತಾರೆ.

ಸರಿಯಾಗಿಲ್ಲದ ಹಲವಾರು ಮೀಮ್‌ಗಳು ಮತ್ತು ವಿಷಯಗಳು ನಡೆಯುತ್ತಿವೆ. ನೀವು ಸಾಮಾನ್ಯ ವ್ಯಕ್ತಿಯನ್ನು ತೆಗೆದುಕೊಂಡರೆ, ಅವರು 5,000 ರೂಪಾಯಿಗಳನ್ನು ಏನನ್ನಾದರೂ ಹೂಡಿಕೆ ಮಾಡಿದರೂ ಸಹ, ಅವರ ಹೃದಯವು 'ನಾನು ರೂ 5,000 ಅಥವಾ ರೂ 10,000 ಕಳೆದುಕೊಂಡರೆ ಗತಿ ಏನು?' ಎಂದು ಯೋಚಿಸುತ್ತಿರುತ್ತಾರೆ ಎಂದು ನೇರವಾಗಿ ಗೊಯೆಂಕಾ ಅವರ ಬೆನ್ನಿಗೆ ನಿಂತಿದ್ದಾರೆ.

ತರ್ಕಬದ್ಧವಾಗಿ ಮಾತನಾಡುತ್ತಾರೆ

ಇದೇ ವೇಳೆ ವೈಯುಕ್ತಿಕ ಭೇಟಿ ಕುರಿತು ಮಾತನಾಡಿದ ಶಮಿ, 'ನಾನು ಇಲ್ಲಿಯವರೆಗೆ ಅವರೊಂದಿಗೆ ಎರಡು ಅಥವಾ ಮೂರು ಬಾರಿ ಮಾತ್ರ ಮಾತನಾಡಿದ್ದೇವೆ. ಅವರು ತುಂಬಾ ಚೆನ್ನಾಗಿ, ತರ್ಕಬದ್ಧವಾಗಿ ಮಾತನಾಡುತ್ತಾರೆ. ಸಂಭಾಷಣೆಗಳು ತಂಡದ ಸುತ್ತಲೇ ಇವೆ. ನಾನು ಇಲ್ಲಿಯವರೆಗೆ ಮಾಡಿರುವ ಅಲ್ಪಸ್ವಲ್ಪದಲ್ಲಿ ಅವರೊಂದಿಗೆ ಮಾತನಾಡುವುದನ್ನು ನಾನು ನಿಜವಾಗಿಯೂ ಆನಂದಿಸಿದೆ" ಎಂದು ಶಮಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

Op Sindoor: ವಿಶ್ವಭೂಪಟದಿಂದ ಪಾಕ್ ನಿರ್ನಾಮಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿದ್ದೆವು, ಆದ್ರೆ ಅವರು ತಡೆದರು...: ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ

ದೇಶದಲ್ಲೇ ಮೊದಲ ಬಾರಿಗೆ ಡ್ರಗ್ಸ್, ಸಾಮಾಜಿಕ–ಆರ್ಥಿಕ ಜನಗಣತಿ ಆರಂಭಿಸಿದ ಪಂಜಾಬ್: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

ಬ್ಯಾಂಕ್ ವಂಚನೆ ಪ್ರಕರಣ: ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ದೋಷಿ; ಜೈಲಿಗೆ ಶಿಫ್ಟ್

SCROLL FOR NEXT