ಗುಜರಾತ್ ಟೈಟಾನ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್ 
ಕ್ರಿಕೆಟ್

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌; ಕೊನೆಯ ಓವರ್‌ನಲ್ಲಿ ಸೋತ Gujarat Titans

ಇಂಡಿಯನ್ ಪ್ರಿಮಿಯರ್ ಲೀಗ್ (2026) ಟೂರ್ನಮೆಂಟ್ 9ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್‌ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರೋಚಿತ ಸೋಲು ಅನುಭವಿಸಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ (2026) ಟೂರ್ನಮೆಂಟ್ 9ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್‌ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರೋಚಿತ ಸೋಲು ಅನುಭವಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 210 ರನ್‌ ಪೇರಿಸಿತ್ತು. 211 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 204 ರನ್ ಪೇರಿಸಲಷ್ಟೇ ಶಕ್ತವಾಗಿದ್ದು 6 ರನ್ ಗಳಿಂದ ಸೋಲು ಕಂಡಿತು.

ಟೈಟಾನ್ಸ್ ತಂಡ ಪರ ಸಾಯಿ ಸುದರ್ಶನ್ 73 ರನ್ ಬಾರಿಸುವ ಮೂಲಕ ಭದ್ರ ಬುನಾದಿ ಹಾಕಿದರು. ಆದರೆ ಇನ್ನುಳಿದ ಆಟಗಾರರು ಯಾರೂ ಉತ್ತರ ರನ್ ಕಲೆಹಾಕದ ಕಾರಣ ತಂಡ ಸೋಲು ಅನುಭವಿಸಿತು. ರಾಯಲ್ಸ್ ಪರ ರವಿ ಬಿಷ್ಣೋಯ್ 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ರಾಜಸ್ಥಾನ ರಾಯಲ್ಸ್ ಪರ ಧ್ರುವ್ ಜುರೆಲ್ 75 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಅಲ್ಲದೆ ಯಶಸ್ವಿ ಜೈಸ್ವಾಲ್ ಕೂಡ ಅರ್ಧಶತಕ ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರು. ಪವರ್‌ಪ್ಲೇನಲ್ಲಿ RR ವಿಕೆಟ್ ಕಳೆದುಕೊಳ್ಳದೆ 69 ರನ್ ಗಳಿಸಿತ್ತು. ವೈಭವ್ ಸೂರ್ಯವಂಶಿ 18 ಎಸೆತಗಳಲ್ಲಿ 31 ರನ್ ಗಳಿಸಿದರೆ, ಜೈಸ್ವಾಲ್ 36 ಎಸೆತಗಳಲ್ಲಿ 55 ರನ್ ಗಳಿಸಿದರು. ನಾಯಕ ರಿಯಾನ್ ಪರಾಗ್ ಕೇವಲ 8 ರನ್ ಗಳಿಸಿ ವಿಫಲರಾದರು. ಕಗಿಸೊ ರಬಾಡ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಅಹಮದಾಬಾದ್ ಮೈದಾನದಲ್ಲಿ ಅತ್ಯಧಿಕ ರನ್ ಚೇಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮಾಡಿತ್ತು. 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 205 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಕರ್ಮಕಾಂಡ: ನಾಪತ್ತೆಯಾಗಿರುವ IAS ಅಧಿಕಾರಿಗೆ ED ಬಿಗ್ ಶಾಕ್; ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ

ಮುಂಬೈನಲ್ಲಿ ಘೋರ ದುರಂತ: 22 ಅಡಿ ಎತ್ತರದ ಗಣೇಶ ಮೂರ್ತಿ ಬಿದ್ದು ಇಬ್ಬರು ಸಾವು, ಐವರಿಗೆ ಗಾಯ; Video

ಎಂಜಿನ್ ವೈಫಲ್ಯ, ನಡುಸಮುದ್ರದಲ್ಲಿ ಕೆಟ್ಟು ನಿಂತ ಬೋಟ್; ರಕ್ಷಣೆಗೆ ಧಾವಿಸಿದ ಕೋಸ್ಟಲ್ ಗಾರ್ಡ್, 9 ಮೀನುಗಾರರ ರಕ್ಷಣೆ! Video

Bengaluru Tunnel Road: ಸ್ವತಃ ಅಖಾಡಕ್ಕಿಳಿದ ಗೌತಮ್ ಅದಾನಿ; CM ಡಿಕೆಶಿ ನಿವಾಸಕ್ಕೆ ದಿಢೀರ್ ಭೇಟಿ – ಸುರಂಗ ರಸ್ತೆ ಕುರಿತು ಮಹತ್ವದ ಚರ್ಚೆ

ಹತ್ರಾಸ್‌ನಲ್ಲಿ ಅಮಾನವೀಯ ಕೃತ್ಯ: 16 ವರ್ಷದ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಿಣಿ.. 70ರ ಅಜ್ಜ ಅರೆಸ್ಟ್!