ಟಿಮ್ ಡೇವಿಡ್  
ಕ್ರಿಕೆಟ್

IPL 2026: ಚಿನ್ನಸ್ವಾಮಿಯಲ್ಲಿ RCB 'ಸಿಕ್ಸರ್‌ ಮಷಿನ್‌' ಟಿಮ್ ಡೇವಿಡ್ ಹೊಡೆದ ಬಾಲ್ ಎಲ್ಲಿಗೆ ಹೋಯ್ತು ಗೊತ್ತಾ?

ಆರ್ ಸಿಬಿ 'ಸಿಕ್ಸರ್‌ ಮಷಿನ್‌' ಎಂದೇ ಖ್ಯಾತಿ ಪಡೆದಿರುವ, 30 ವರ್ಷದ ಆಸ್ಟ್ರೇಲಿಯನ್ ಆಟಗಾರ ಟಿಮ್ ಡೇವಿಡ್ ಅವರು 25 ಎಸೆತಗಳಲ್ಲಿ 70 ರನ್ ಗಳಿಸಿ ಎಂಟು ಸಿಕ್ಸರ್‌ಗಳನ್ನು ಬಾರಿಸಿದರು.

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಸಿಎಸ್ ಕೆ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ಹಾಲಿ ಚಾಂಪಿಯನ್‌ಗಳ ಅದ್ಭುತ ಪ್ರದರ್ಶನದೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 43 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಆರ್ ಸಿಬಿ 'ಸಿಕ್ಸರ್‌ ಮಷಿನ್‌' ಎಂದೇ ಖ್ಯಾತಿ ಪಡೆದಿರುವ, 30 ವರ್ಷದ ಆಸ್ಟ್ರೇಲಿಯನ್ ಆಟಗಾರ ಟಿಮ್ ಡೇವಿಡ್ ಅವರು 25 ಎಸೆತಗಳಲ್ಲಿ 70 ರನ್ ಗಳಿಸಿ ಎಂಟು ಸಿಕ್ಸರ್‌ಗಳನ್ನು ಬಾರಿಸಿದರು.

ಬೃಹತ್ ಹಿಟ್‌ಗಳ ಇನ್ನಿಂಗ್ಸ್‌ನಲ್ಲಿ, ಟಿಮ್ ಡೇವಿಡ್ ಹೊಡೆದ ಒಂದು ಶಾಟ್ ಚೆಂಡನ್ನು ನೇರವಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಛಾವಣಿಯ ಮೇಲೆ ಬಿದ್ದಿತು. ಇದು 106 ಮೀಟರ್ ಸ್ಟ್ರೈಕ್‌ನೊಂದಿಗೆ ಸಿಎಸ್ ಕೆಯನ್ನು ಉಸಿರುಗಟ್ಟಿಸಿತು.

ಈ ಒಂದು ಬಾಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಅನ್ಶುಲ್ ಕಾಂಬೋಜ್ ಮಾಡಿದ ಒಂದು ಸಣ್ಣ ತಪ್ಪು ಚೆನ್ನೈ ಸೂಪರ್ ಕಿಂಗ್ಸ್‌ಗೆ ಭಾರೀ ಹೊಡೆತ ನೀಡಿತು. ಇದಾದ ನಂತರ ಚೆನ್ನೈ ತಂಡಕ್ಕೆ ಟಿಮ್ ಡೇವಿಡ್ ಡೆವಿಲ್ ರೂಪದಲ್ಲಿ ಕಾಡಿದರು.

"ನಮಗೆ ಛಾವಣಿಯ ಮೇಲೆ ಹೊಡೆಯಲು ಪ್ರಯತ್ನಿಸಲು ಸ್ಪರ್ಧೆಗಳಿವೆ ಮತ್ತು ನಾವು ಸ್ಪಷ್ಟವಾಗಿ ಸೈಡ್ ಪಿಚ್‌ಗಳಲ್ಲಿದ್ದೇವೆ. ಆದ್ದರಿಂದ, ಪಂದ್ಯದ ಮಧ್ಯದಲ್ಲಿ ಒಂದು ಬಾಲ್ ಅನ್ನು ಛಾವಣಿಯ ಮೇಲೆ ಹೊಡೆಯಲು ಯತ್ನಿಸುತ್ತೇವೆ. ಆ ಬಾಲ್ ತರಲು ಹುಡುಗರಿಗೆ ಮೇಲಕ್ಕೆ ಹತ್ತಲು ಸಹಾಯ ಮಾಡುವುದು ಉತ್ತಮ ಮೋಜಿನ ಸಂಗತಿಯಾಗಿತ್ತು" ಎಂದ ಡೇವಿಡ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?