ಬಾಬರ್ ಅಜಮ್  
ಕ್ರಿಕೆಟ್

ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ: ಪತ್ರಕರ್ತರ ಮೇಲೆ ಬಾಬರ್ ಅಜಮ್ ಫುಲ್ ಗರಂ! Video

ಪೇಶಾವರ ಝಲ್ಮಿ ಪರ ಆಡುತ್ತಿರುವ ಬಾಬರ್ ಅಜಮ್, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 37 ಬಾಲ್’ನಲ್ಲಿ 43 ರನ್ ಹೊಡೆದಿದ್ದರು.

ಕರಾಚಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ ಪತ್ರಕರ್ತರ ಮೇಲೆ ಪಾಕಿಸ್ತಾನದ ಬ್ಯಾಟರ್ ಅಜಮ್ ಪುಲ್ ಗರಂ ಆಗಿದ್ದಾರೆ. 'ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ ಎಂಬ ವರದಿಗಾರನೊಬ್ಬನ ಪ್ರಶ್ನೆಗೆ ಕೆರಳಿ ಕೆಂಡವಾಗಿದ್ದಾರೆ. PSL ಪಂದ್ಯಾವಳಿಯಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧ ಪೇಶಾವರ್ ಝಾಲ್ಮಿ ರೋಚಕ ಗೆಲುವು ಸಾಧಿಸಿದ ನಡೆದ ಸುದ್ದಿಗೋಷ್ಠಿಯಲ್ಲಿ ಇದು ನಡೆದಿದೆ.

ಪೇಶಾವರ ಝಲ್ಮಿ ಪರ ಆಡುತ್ತಿರುವ ಬಾಬರ್ ಅಜಮ್, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 37 ಬಾಲ್’ನಲ್ಲಿ 43 ರನ್ ಹೊಡೆದಿದ್ದರು. ಪಂದ್ಯದ ಕೊನೆಯ ಬಾಲ್’ನಲ್ಲಿ ಹೈದರಾಬಾದ್ ಕಿಂಗ್ಮೆನ್ ವಿರುದ್ದ ಪೇಶಾವರ ತಂಡ ಗೆಲುವು ಸಾಧಿಸಿತ್ತು. ಬಾಬರ್, ಉತ್ತವಾಗಿ ಆಡಿದ್ದರೂ, ಮ್ಯಾಚ್ ಫಿನಿಶ್ ಮಾಡಿದ್ದು ಇಫ್ತಿಕರ್ ಅಹ್ಮದ್. ಇದು ಕೊಹ್ಲಿ ಜೊತೆ ಹೋಲಿಕೆಗೆ ಕಾರಣವಾಯಿತು.

ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಬಾಬರ್ ಅಜಮ್ ಅವರ ಸಾಮರ್ಥ್ಯಗಳನ್ನು ಪ್ರಶ್ನಿಸಿದರು, ಅಲ್ಲದೇ ಅವರನ್ನು ವಿರಾಟ್ ಕೊಹ್ಲಿ ಜೊತೆಗೆ ಹೋಲಿಕೆ ಮಾಡಿದರು. ಆದರೆ 'ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ ಎಂದು ಕೇಳಿದರು. ಇದರಿಂದ ಕೆರಳಿದ ಬಾಬರ್ ಅಜಮ್, ಅದು ನಿಮ್ಮ ತಪ್ಪು ಕಲ್ಪನೆ ಅಷ್ಟೇ. ಆ ವಿಚಾರವನ್ನು ಬಿಟ್ಟುಬಿಡಿ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಿಮ್ಮಂತೆಯೇ ಶಾಟ್ ಹೊಡೆಯುತ್ತಾರೆ. ಆದರೆ ಅವರು ಪಂದ್ಯವನ್ನು ಫಿನಿಶ್ ಮಾಡ್ತಾರೆ. ನೀವ್ಯಾಕೆ ಆ ರೀತಿ ಮ್ಯಾಚ್ ಫಿನಿಶ್ ಮಾಡಲ್ಲ. ಅವರೊಂದಿಗೆ ನಿಮ್ಮನ್ನು ಜನ ಹೋಲಿಕೆ ಮಾಡ್ತಾರೆ. ನಿಮ್ಮ ಅಭಿಪ್ರಾಯವೇನು? ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ.

ಇದರಿಂದ ಉರಿದುಬಿದ್ದ ಬಾಬರ್ ಅಜಮ್, ಈ ಪ್ರಶ್ನೆಯನ್ನು ನೀವೆ ಇಟ್ಟುಕೊಳ್ಳಿ. ಈ ಹೋಲಿಕೆಯನ್ನು ಅಂತ್ಯಗೊಳಿಸಿ, ಬಿಟ್ಟುಬಿಡಿ. ನಾನು ಮ್ಯಾಚ್ ಫಿನಿಶ್ ಮಾಡಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ ಎಂದಿದ್ದಾರೆ.

ಪಾಕಿಸ್ತಾನದ ಅತಿದೊಡ್ಡ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರೂ ಸಹ ಬಾಬರ್ ಅಜಮ್ ಹೀಗೆ ಆಗಾಗ್ಗೆ ಟೀಕೆಗಳಿಗೆ ಒಳಗಾಗುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?