ವೈಭವ್ ಸೂರ್ಯವಂಶಿ  
ಕ್ರಿಕೆಟ್

'ಕೊನೆಗೂ ನನ್ನ ಸಿದ್ಧಾಂತ ತಪ್ಪಾಗಲಿಲ್ಲ': ವೈಭವ್ ಸೂರ್ಯವಂಶಿ ಕುರಿತು ಮಾಜಿ ಆಟಗಾರ ಇರ್ಫಾನ್ ಪಠಾಣ್ ಪೋಸ್ಟ್!

ಏಪ್ರಿಲ್ 10 ರಂದು ಇರ್ಫಾನ್ X ನಲ್ಲಿನ ಪೋಸ್ಟ್‌ನಲ್ಲಿ, ಈ ಯುವ ಬ್ಯಾಟಿಂಗ್ ಸೆನ್ಸೇಶನ್ ದೊಡ್ಡ ಬೌಲರ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಿಕೊಂಡಿದ್ದಾನೆಯೇ ಎಂದು ಆಶ್ಚರ್ಯಪಟ್ಟಿದ್ದರು.

ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತರ ಕೆಲವು ಉನ್ನತ ಬೌಲರ್‌ಗಳನ್ನು ಎದುರಿಸಿ ಎಲ್ಲರ ಗಮನ ಸಳೆದಿದ್ದರು. ಆದಾಗ್ಯೂ, ಐಪಿಎಲ್ 2026ರ ಆರೆಂಜ್ ಕ್ಯಾಪ್ ಮಾಲೀಕರಾದ ಅವರು ಸನ್‌ರೈಸರ್ಸ್ ಹೈದರಾಬಾದ್‌ನ ಪ್ರಫುಲ್ ಹಿಂಗೆ ಅವರ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಸೋಮವಾರ ನಡೆದ ಪಂದ್ಯದಲ್ಲಿ ಸೂರ್ಯವಂಶಿ ಡಕೌಟ್ ಆಗಿದ್ದು ಸಾಮಾಜಿಕ ಮಾಧ್ಯಮದ ಜಗತ್ತನ್ನು ದಿಗ್ಭ್ರಮೆಗೊಳಿಸಿತು.

SRH ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿಲ್ಲ ಎಂಬ ಮಾತುಗಳಿಗೆ ಅಪವಾದ ಎಂಬಂತೆ ಚೊಚ್ಚಲ ಪಂದ್ಯದಲ್ಲಿ ಇಬ್ಬರು ಯುವ ಆಟಗಾರರು ತಂಡದ ಗೆಲುವಿಗೆ ಕಾರಣರಾದರು. ವೈಭವ್ ಸೂರ್ಯವಂಶಿ ಶೂನ್ಯಕ್ಕೆ ನಿರ್ಗಮಿಸಿದ್ದು, ಇದೀಗ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ತಾವು ಈ ಹಿಂದೆ ಹೇಳಿದ್ದನ್ನು ಮತ್ತೆ ಉಲ್ಲೇಖಿಸಿ, ತಮ್ಮ 'ಸಿದ್ಧಾಂತ' ತಪ್ಪಾಗಲಿಲ್ಲ ಎಂದಿದ್ದಾರೆ.

ಏಪ್ರಿಲ್ 10 ರಂದು ಇರ್ಫಾನ್ X ನಲ್ಲಿನ ಪೋಸ್ಟ್‌ನಲ್ಲಿ, ಈ ಯುವ ಬ್ಯಾಟಿಂಗ್ ಸೆನ್ಸೇಶನ್ ದೊಡ್ಡ ಬೌಲರ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಿಕೊಂಡಿದ್ದಾನೆಯೇ ಎಂದು ಆಶ್ಚರ್ಯಪಟ್ಟಿದ್ದರು. ವೈಭವ್ ಸೂರ್ಯವಂಶಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ವಿಶ್ವದ ಕೆಲವು ದೊಡ್ಡ ಬೌಲರ್‌ಗಳ ಎಸೆತವನ್ನು ಸುಲಭವಾಗಿಯೇ ಬೌಂಡರಿಗೆ ಅಟ್ಟುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಹೆಚ್ಚು T20 ಪಂದ್ಯಗಳನ್ನು ಆಡದ ವಿದರ್ಭದ ಯುವ ಬೌಲರ್ ಪ್ರಫುಲ್ ಹಿಂಗೆ ವಿರುದ್ಧ ಅದೇ ಸಾಧನೆ ಮಾಡಲು ವಿಫಲರಾದರು.

ಸೋಮವಾರ ಇರ್ಫಾನ್ X ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, 'ಆದ್ದರಿಂದ ವೈಭವ್ ಸೂರ್ಯವಂಶಿ ಬಗ್ಗೆ ನನ್ನ ಸಿದ್ಧಾಂತ ತಪ್ಪಾಗಿಲ್ಲ' ಎಂದು ಹಳೆಯ ಪೋಸ್ಟ್‌ ಅನ್ನು ರೀಶೇರ್ ಮಾಡಿಕೊಂಡಿದ್ದಾರೆ.

ಆದಾಗ್ಯೂ, ಇರ್ಫಾನ್ ಅವರ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದು, ಬೌಲರ್ ಯಾರೇ ಆಗಿರಲಿ, ವೇಗವಾಗಿ ರನ್ ಗಳಿಸಲು ವೈಭವ್ ಉತ್ಸುಕರಾಗಿದ್ದಾರೆ ಎಂದು ಅವರ ಅಭಿಮಾನಿಗಳು ವಾದಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ನೀಡದ್ದ ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೋಡಿ ಮೈದಾನಕ್ಕೆ ಇಳಿದರು. ಇತ್ತೀಚೆಗೆ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜಾಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ 26 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 78 ರನ್ ಗಳಿಸಿದ್ದ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.

ವೈಭವ್ ಅವರ ವಿಕೆಟ್ ಕಿತ್ತ ಪ್ರಫುಲ್ ಅವರನ್ನು SRH ತಂಡ ₹30 ಲಕ್ಷಕ್ಕೆ ಹರಾಜಿನ ಸಮಯದಲ್ಲಿ ಖರೀದಿಸಿತ್ತು. ಮೊದಲನೇ ಓವರ್‌ನಲ್ಲಿಯೇ ಹಿಂಗೆ ಅವರು ಧ್ರುವ್ ಜುರೆಲ್, ದಕ್ಷಿಣ ಆಫ್ರಿಕಾದ ಲುವಾನ್ ಡ್ರೆ ಪ್ರಿಟೋರಿಯಸ್ ಅವರ ವಿಕೆಟ್ ಪಡೆದು, ಐಪಿಎಲ್ ಇತಿಹಾಸದಲ್ಲಿಯೇ ಪದಾರ್ಪಣೆ ಮಾಡಿದ ಪಂದ್ಯದ ಮೊದಲ ಓವರ್‌ನಲ್ಲಿಯೇ ಮೂರು ವಿಕೆಟ್ ಕಿತ್ತ ಭಾರತೀಯ ವೇಗಿ ಎಂಬ ದಾಖಲೆ ಬರೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ: ನಿತೀಶ್ ಆಡಳಿತ ಅಂತ್ಯ, ಮೊದಲ ಬಿಜೆಪಿ CM ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

10 ಬಾರಿ ಬಿಹಾರ CM ಆಗಿದ್ದ ನಿತೀಶ್ ಕುಮಾರ್ ಯುಗಾಂತ್ಯ: ಕೊನೆಗೂ ರಾಜೀನಾಮೆ; ನಾಳೆ BJP ಮುಖ್ಯಮಂತ್ರಿ ಪ್ರಮಾಣ

ಅಮೆರಿಕ-ಇರಾನ್ ಸಂಘರ್ಷ: ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಬ್ರೇಕ್ ಹಾಕಿದ ಇಟಲಿ!

ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮೇ 1 ರಿಂದ ಮರಾಠಿ ಕಡ್ಡಾಯ; ಕಲಿಯದಿದ್ದರೆ ಲೈಸೆನ್ಸ್ ರದ್ದು!

ಕಳಪೆ ಬ್ಯಾಟಿಂಗ್, Suryakumar Yadav ನಾಯಕತ್ವಕ್ಕೆ ಕುತ್ತು?; ಹೊಸ ಟಿ20 ನಾಯಕನ ಹುಡುಕಾಟದಲ್ಲಿ BCCI!

SCROLL FOR NEXT