ವಿರಾಟ್ ಕೊಹ್ಲಿ - ಸಂಜೀವ್ ಗೋಯೆಂಕಾ 
ಕ್ರಿಕೆಟ್

IPL 2026: RCB ವಿರುದ್ಧ LSG ಸೋಲು; ನಗುತ್ತಲೇ ವಿರಾಟ್ ಕೊಹ್ಲಿ ಜೊತೆ ಸಂಭಾಷಣೆ ನಡೆಸಿದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ!

ವೇಗಿಗಳಾದ ಜಾಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳ ಬೆವರಿಳಿಸಿದರು.

ಬುಧವಾರ ನಡೆದ ಐಪಿಎಲ್ 2026ರ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಜತ್ ಪಾಟೀದಾರ್ ನೇತೃತ್ವದ ತಂಡವು ಎಲ್‌ಎಸ್‌ಜಿ ವಿರುದ್ಧ ಐದು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಲಕ್ನೋವನ್ನು 146 ರನ್‌ಗಳಿಗೆ ಆಲೌಟ್ ಮಾಡಿತು ಮತ್ತು ವಿರಾಟ್ ಕೊಹ್ಲಿ ಅವರ 49 ರನ್‌ಗಳ ನೆರವಿನಿಂದ ಕೇವಲ 15.1 ಓವರ್‌ಗಳಲ್ಲಿಯೇ ಗೆಲುವಿನ ದಡ ಸೇರಿತು. ಪಂದ್ಯದ ನಂತರ, ಭಾರತ ಮತ್ತು ಆರ್‌ಸಿಬಿ ಸ್ಟಾರ್ ಆಟಗಾರ ಕೊಹ್ಲಿ ಜೊತೆಗೆ ಗೋಯೆಂಕಾ ಮೈದಾನದಲ್ಲಿ ಸಂವಾದ ನಡೆಸಿದರು.

ವೇಗಿಗಳಾದ ಜಾಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಆಕರ್ಷಕ ಬೌಲಿಂಗ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳ ಬೆವರಿಳಿಸಿದರು. ಅಂತಿಮವಾಗಿ ಆರ್‌ಸಿಬಿ, ಎಲ್‌ಎಸ್‌ಜಿಯನ್ನು ಐದು ವಿಕೆಟ್‌ಗಳಿಂದ ಸೋಲಿಸಿತು.

ಪಂದ್ಯಕ್ಕೂ ಮುನ್ನ ಊಹಿಸಿದ್ದಕ್ಕಿಂತ ಸ್ವಲ್ಪ ನಿಧಾನಗತಿಯ ಪಿಚ್‌ನಿಂದಾಗಿ, ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ 147 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಕೊಂಚ ಹಿನ್ನಡೆಯಾದಂತೆ ಕಂಡುಬಂತು. ಆದರೆ, ವಿರಾಟ್ ಕೊಹ್ಲಿ (49) ಮತ್ತು ನಾಯಕ ರಜತ್ ಪಾಟೀದಾರ್ (27) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.

ಚೇಸಿಂಗ್ ಸಮಯದಲ್ಲಿ ಕೊಹ್ಲಿ ವಿಶಿಷ್ಟ ಇನಿಂಗ್ಸ್ ಆಡಿದರು. ಆರಂಭದಲ್ಲಿ 200ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಫಿಲ್ ಸಾಲ್ಟ್ ಔಟಾದ ಬಳಿತ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 57 ರನ್‌ಗಳ ಜೊತೆಯಾಟವಾಡಿದರು.

ಆರ್‌ಸಿಬಿ ಪರವಾಗಿ ರಸಿಕ್ ಸಲಾಂ ದಾರ್ (4/24), ಭುವನೇಶ್ವರ್ ಕುಮಾರ್ (3/27) ಮತ್ತು ಜಾಶ್ ಹೇಜಲ್‌ವುಡ್ (1/20) ಅವರ ಅಸಾಧಾರಣ ಸ್ಪೆಲ್‌ಗಳ ಮೂಲಕ ಆರ್‌ಸಿಬಿ ಎಲ್‌ಎಸ್‌ಜಿ ಮೇಲೆ ಮೇಲುಗೈ ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಕ್ಷ ಇಬ್ಭಾಗದ ಭೀತಿಯ ನಡುವೆ INDI ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸಲಿರುವ ಮಮತಾ ಬ್ಯಾನರ್ಜಿ

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

ಲೈವ್ ಸ್ಟ್ರೀಮಿಂಗ್ ಮಾಡಲು ಬಂದ Drone ಗೂ ಕಾಟ ಕೊಟ್ಟ Rishabh Pant, ಸಿಬ್ಬಂದಿ ಕಕ್ಕಾಬಿಕ್ಕಿ! Video

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೆ ಜಾತಿ ನಿಂದನೆ, ಅವಹೇಳನ ಆರೋಪ, ವ್ಯಕ್ತಿಯ ಬಂಧನ!

India vs Afghanistan: 564 ರನ್ ಗೆ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್, 2ನೇ ದಿನದಾಟದಂತ್ಯಕ್ಕೆ ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!

SCROLL FOR NEXT