ಅಕ್ರಮ ಪಾರ್ಕಿಂಗ್, ಬಹಿರಂಗ ಮೂತ್ರವಿಸರ್ಜನೆ; 'ಯೆಲ್ಲೋ ಸ್ಪಾಟ್' ಆದ ಶೇಷಾದ್ರಿ ರಸ್ತೆ?

ಮಹಾರಾಣಿ ವಿಶ್ವವಿದ್ಯಾಲಯ, ಸಿಎಂಎಸ್ ಬಿಸಿನೆಸ್ ಸ್ಕೂಲ್, ರೇಸ್ ಕೋರ್ಸ್, ಫ್ರೀಡಂ ಪಾರ್ಕ್ ಹಾಗೂ ಹಲವು ವಾಣಿಜ್ಯ ಪ್ರದೇಶಗಳ ನಡುವೆ ಇರುವ ಶೇಷಾದ್ರಿ ರಸ್ತೆ ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಒಂದಾಗಿದೆ.
Bengaluru's Seshadri Road raise alarm
ಶೇಷಾದ್ರಿ ರಸ್ತೆಯಲ್ಲಿ ನಾಗರಿಕ ಸಮಸ್ಯೆಗಳು
Updated on

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಹಾಗೂ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ಸುತ್ತುವರಿದಿರುವ ಶೇಷಾದ್ರಿ ರಸ್ತೆ (Seshadri Road) ದಿನದಿಂದ ದಿನಕ್ಕೆ ನಾಗರಿಕ ಸಮಸ್ಯೆಗಳ ತಾಣವಾಗಿ ಮಾರ್ಪಡುತ್ತಿದೆ.

ಗುಂಡಿಗಳಿಂದ ಕೂಡಿದ ಪಾದಚಾರಿ ಮಾರ್ಗಗಳು, ಅಕ್ರಮ ವಾಹನ ನಿಲುಗಡೆ ಮತ್ತು ಬಹಿರಂಗ ಮೂತ್ರವಿಸರ್ಜನೆ ಈ ರಸ್ತೆಯನ್ನು 'ಯೆಲ್ಲೋ ಸ್ಪಾಟ್' ಆಗಿ ಪರಿವರ್ತಿಸುತ್ತಿದ್ದು, ನಗರ ಆಡಳಿತ, ಜಾರಿ ಸಂಸ್ಥೆಗಳು ಹಾಗೂ ನಾಗರಿಕರ ಜವಾಬ್ದಾರಿಯ ಕೊರತೆಯನ್ನು ಎತ್ತಿ ತೋರಿಸುತ್ತಿವೆ.

ಮಹಾರಾಣಿ ವಿಶ್ವವಿದ್ಯಾಲಯ, ಸಿಎಂಎಸ್ ಬಿಸಿನೆಸ್ ಸ್ಕೂಲ್, ರೇಸ್ ಕೋರ್ಸ್, ಫ್ರೀಡಂ ಪಾರ್ಕ್ ಹಾಗೂ ಹಲವು ವಾಣಿಜ್ಯ ಪ್ರದೇಶಗಳ ನಡುವೆ ಇರುವ ಶೇಷಾದ್ರಿ ರಸ್ತೆ ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಒಂದಾಗಿದೆ.

ಪ್ರತಿದಿನ ಸಾವಿರಾರು ಮಂದಿ, ವಿಶೇಷವಾಗಿ ವಿದ್ಯಾರ್ಥಿಗಳು, ಈ ರಸ್ತೆಯನ್ನು ಬಳಸುತ್ತಾರೆ. ಆದರೆ ಹಾಳಾಗಿರುವ ಹಾಗೂ ಅಸ್ವಚ್ಛ ಪಾದಚಾರಿ ಮಾರ್ಗಗಳು ಮತ್ತು ಅಕ್ರಮವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾದ ವಾಹನಗಳಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

Bengaluru's Seshadri Road raise alarm
Video: ಬೀದರ್ BRIMS ಆಸ್ಪತ್ರೆ ಎಮರ್ಜೆನ್ಸಿ ವಾರ್ಡ್‌ಗೆ ಬೈಕ್ ನುಗ್ಗಿಸಿದ ಯುವಕರು; ರೋಗಿಗಳಲ್ಲಿ ಆತಂಕ!

ಸಮನ್ವಯದ ಕೊರತೆಯೇ ಮೂಲ ಕಾರಣ

CIVIC-Bangalore ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಮಾತನಾಡಿ, "ಇಂತಹ ಸಮಸ್ಯೆಗಳ ಮೂಲ ಕಾರಣ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ. ವಾರ್ಡ್ ಸಮಿತಿಗಳು ಹಾಗೂ ಏರಿಯಾ ಸಭೆಗಳಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ" ಎಂದು ಹೇಳಿದರು.

74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ 12ನೇ ಅನುಸೂಚಿಯಡಿ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿರುವ 18 ಪ್ರಮುಖ ನಗರಪಾಲಿಕೆ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬೆಂಗಳೂರಿನ ಸ್ಥಳೀಯ ಆಡಳಿತ ವ್ಯವಸ್ಥೆ ಇನ್ನೂ ಸಮರ್ಥವಾಗಿಲ್ಲ. ಆಡಳಿತ ವ್ಯವಸ್ಥೆಯನ್ನು ಬಲಪಡಿಸಿದರೆ ಮಾತ್ರ ಇಂತಹ ನಾಗರಿಕ ಸಮಸ್ಯೆಗಳನ್ನು ಆರಂಭದಲ್ಲೇ ನಿಯಂತ್ರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಉಚಿತ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಒತ್ತಾಯ

ಶೇಷಾದ್ರಿ ರಸ್ತೆಯಲ್ಲಿ ಪೇ-ಆಂಡ್-ಯೂಸ್ (ಶುಲ್ಕ ಪಾವತಿಸಿ ಬಳಸುವ) ಸಾರ್ವಜನಿಕ ಶೌಚಾಲಯ ಕೇವಲ 50 ಮೀಟರ್ ದೂರದಲ್ಲಿದ್ದರೂ, ಬಹಿರಂಗ ಮೂತ್ರವಿಸರ್ಜನೆ ಸಮಸ್ಯೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿಗೆ ಆಗಮಿಸುವ ಸಾರ್ವಜನಿಕರು ಉಚಿತ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಸಮಸ್ಯೆ ತಗ್ಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bengaluru's Seshadri Road raise alarm
BPL ಕಾರ್ಡ್ ಪಡೆಯಲು ವಾರ್ಷಿಕ ಆದಾಯದ ಮಿತಿ 3 ಲಕ್ಷ ರೂ ಗೆ ಹೆಚ್ಚಿಸಲು ಕ್ರಮ- ಸಚಿವ ಕೆ.ಹೆಚ್ ಮುನಿಯಪ್ಪ!

ಮಾಸಿಕ ಪಾಸ್ ವ್ಯವಸ್ಥೆ ಪರಿಹಾರವಾಗಬಹುದು

ಸ್ವಚ್ಛ ಸರ್ವೇಕ್ಷಣ ತಜ್ಞ ವಿ. ರಾಮಪ್ರಸಾದ್ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಲಿಲ್ಲ. "ಯಾವುದೇ ಪ್ರದೇಶ 'ಯೆಲ್ಲೋ ಸ್ಪಾಟ್' ಆಗಿ ಗುರುತಾದರೆ, ಆರೋಗ್ಯ ನಿರೀಕ್ಷಕರು ಹಾಗೂ ಮುಖ್ಯ ಮಾರ್ಷಲ್ ಜವಾಬ್ದಾರಿ ಹೊತ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಶೌಚಾಲಯದ ಶುಲ್ಕವೇ ಸಮಸ್ಯೆಯಾಗಿದ್ದರೆ, ಮಾಸಿಕ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಇದರಿಂದ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ದೊರೆಯುತ್ತದೆ ಮತ್ತು ಶೌಚಾಲಯ ನಿರ್ವಹಕರಿಗೂ ಸ್ಥಿರ ಆದಾಯ ಲಭಿಸುತ್ತದೆ" ಎಂದು ಅವರು ಹೇಳಿದರು.

ಜನರ ಮನೋಭಾವ ಬದಲಾಗಬೇಕು: ಜಿಬಿಎ ಅಧಿಕಾರಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಯೊಬ್ಬರು, "ಅಕ್ರಮ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಸಂಚಾರ ಪೊಲೀಸರು ಮತ್ತು ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬಹಿರಂಗ ಮೂತ್ರವಿಸರ್ಜನೆ ಸಂಪೂರ್ಣವಾಗಿ ನಿಲ್ಲಬೇಕಾದರೆ ಸ್ವಚ್ಛತೆಯ ಬಗ್ಗೆ ಜನರ ಮನೋಭಾವದಲ್ಲಿ ಬದಲಾವಣೆ ಬರಬೇಕು," ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com