ದಿನೇಶ್ ಕಾರ್ತಿಕ್ 
ಕ್ರಿಕೆಟ್

'ನಾವು 175 ರನ್‌ಗಳು 190 ಆಗಿ ಕಾಣುವಂತೆ ಮಾಡಿದೆವು': ಡೆಲ್ಲಿ ವಿರುದ್ಧ ಸೋತರೂ ತಂಡವನ್ನು ಶ್ಲಾಘಿಸಿದ RCB ಮೆಂಟರ್ ದಿನೇಶ್ ಕಾರ್ತಿಕ್

RCB ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ (GT) ಅನ್ನು ಎದುರಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರ ಪ್ರಕಾರ, ತಮ್ಮ ತಂಡವು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಕೊನೆಯ ಓವರ್‌ನಲ್ಲಿ ಸೋತರೂ 175 ರನ್‌ಗಳ ಮೊತ್ತವು 190 ಆಗಿ ಭಾಸವಾಗುವಂತೆ ಮಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಫಿಲ್ ಸಾಲ್ಟ್ 63 ರನ್‌ಗಳೊಂದಿಗೆ ತಂಡಕ್ಕೆ ನೆರವಾದರೂ, ಡಿಸಿ ತಂಡದ ಬೌಲರ್‌ಗಳು ಕೊನೆಯ ಐದು ಓವರ್‌ಗಳಲ್ಲಿ ಕೇವಲ 29 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ಈ ಗುರಿ ಬೆನ್ನತ್ತಿಡ ಡೆಲ್ಲಿ ತಂಡವನ್ನು ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ಕಾಡಿದರು. ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ ಪಡೆಯುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಿದರು. ಆದಾಗ್ಯೂ, ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಆಕರ್ಷಕ ಅರ್ಧಶತಕಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೆರವಾದವು. ಅಂತಿಮ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಎರಡು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

'ನಾವು 175 ರನ್‌ಗಳನ್ನು 190 ರನ್‌ಗಳಂತೆ ಭಾವಿಸುವಂತೆ ಮಾಡಿದ್ದೇವೆ. ಅಷ್ಟೇ ನೀವು ಮಾಡಲು ಸಾಧ್ಯ; ಯಾವುದೇ ಹಂತದಲ್ಲಿಯೂ ನಾವು ಸೋತಿದ್ದೇವೆ ಎಂದು ನಮಗೆ ಅನಿಸಲಿಲ್ಲ. ನಮ್ಮಲ್ಲಿರುವದರೊಂದಿಗೆ ಹೋರಾಡಲು ನಾವು ಬಯಸಿದ್ದೆವು. ತೋರಿಸಿದ ಹೋರಾಟದ ಮನೋಭಾವ ತಂಡವಾಗಿ ನಮಗೆ ತುಂಬಾ ಉತ್ತೇಜನಕಾರಿಯಾಗಿದೆ' ಎಂದು ಅವರು X ನಲ್ಲಿ ಫ್ರಾಂಚೈಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

'ಬ್ಯಾಟಿಂಗ್ ಮಾಡಲು ಇದು ಕಠಿಣವಾದ ಪಿಚ್ ಆಗಿತ್ತು ಮತ್ತು ನಾವು ಇನಿಂಗ್ಸ್‌ನ ಸುಮಾರು ಶೇ 75ರಷ್ಟು ಚೆನ್ನಾಗಿ ಆಡಿದೆವು. ಆದರೆ ಹೌದು, ಕೊನೆಯ ಐದು ಓವರ್‌ಗಳಲ್ಲಿ ನಾವು ಬಯಸಿದಷ್ಟು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ನಾವು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆವು. ಉತ್ತಮವಾಗಿ ಫೀಲ್ಡಿಂಗ್ ಕೂಡ ಮಾಡಿದೆವು, ನಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡಿದೆವು. ಆಟಗಾರರು ತಂಡದ ಬಗ್ಗೆ ಹೊಂದಿರುವ ರೀತಿಯ ಬದ್ಧತೆಯನ್ನು ತೋರಿಸಿದೆವು' ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

'ಕೃನಾಲ್ ಪಾಂಡ್ಯ ಮತ್ತು ಜಾಶ್ ಹೇಜಲ್‌ವುಡ್ ಅವರ ಓವರ್‌ಗಳು ತುಂಬಾ ಚೆನ್ನಾಗಿದ್ದವು. 19ನೇ ಓವರ್ ಅನ್ನು ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿದೆವು. ಆದರೆ ಕೊನೆಯಲ್ಲಿ, ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಬಂದು ಅದನ್ನು ಸಂಪೂರ್ಣವಾಗಿ ಹೊಡೆದರು. ಮತ್ತು ಅದು T20 ಪಂದ್ಯದಲ್ಲಿ ಸಂಭವಿಸುತ್ತದೆ' ಎಂದರು.

ಸೋಲಿನ ಹೊರತಾಗಿಯೂ, RCB ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ (GT) ಅನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2-3 ದಿನಗಳಲ್ಲಿ ಸೋಲಿಸುತ್ತೇವೆಂದಿದ್ದರು, 40 ದಿನಗಳ ಸಂಘರ್ಷ ನಂತರವೂ ಅಚಲವಾಗಿ ನಿಂತಿದ್ದೇವೆ: ಯುದ್ಧದಲ್ಲಿ ಗೆದ್ದಿದ್ದು ನಾವೇ; ಅಮೆರಿಕಾ ಕುರಿತು ಇರಾನ್ ಲೇವಡಿ

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಲು ಸರ್ಕಾರ ಮುಂದು, AIB ನೀತಿಯಿಂದ ದರ ಶೇ.20ರಷ್ಟು ಏರಿಕೆ ಸಾಧ್ಯತೆ..!

ಸಿಎಂ ಸಿದ್ದರಾಮಯ್ಯ ಆಪ್ತ ಸೈಫುಲ್ಲಾ ಸಾಬ್ ನಿಧನ

ಹಾರ್ಮುಜ್'ನಲ್ಲಿ ಮುಂದುವರೆದ ಉದ್ವಿಗ್ನತೆ: ಶಾಂತಿ ಒಪ್ಪಂದ ಇನ್ನೂ ಅಂತಿಮ ಹಂತ ತಲುಪಿಲ್ಲ: ಟ್ರಂಪ್'ಗೆ ತಿವಿದ ಇರಾನ್

Thala: ಸಹಾಯಕ ಸಿಬ್ಬಂದಿ ಬಿಟ್ಟುಕೊಡದೆ ಮತ್ತೆ ಅಭಿಮಾನಿಗಳ ಹೃದಯ ಗೆದ್ದ ಮಹೇಂದ್ರ ಸಿಂಗ್ ಧೋನಿ! Video

SCROLL FOR NEXT