ಮುಂಬೈಗೆ ಭರ್ಜರಿ ಜಯ 
ಕ್ರಿಕೆಟ್

IPL 2026: GT ವಿರುದ್ಧ MI ಭರ್ಜರಿ ಜಯ, ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ Shubman Gill ಪಡೆ!

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 99 ರನ್ ಗಳ ಹೀನಾಯ ಸೋಲುಕಂಡಿದೆ.

ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 99 ರನ್ ಗಳ ಅಮೋಘ ಜಯಗಳಿಸಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 99 ರನ್ ಗಳ ಹೀನಾಯ ಸೋಲುಕಂಡಿದೆ.

ಮುಂಬೈ ನೀಡಿದ್ದ 200 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ತಂಡ 15.5 ಓವರ್ ನಲ್ಲಿ ಕೇವಲ 100 ರನ್ ಗಳಿಸಿ ಆಲೌಟ್ ಆಯಿತು.

ರನ್ ಗಳಿಸಲು ತಿಣುಕಾಡಿದ ಗುಜರಾತ್

ಮುಂಬೈ ನೀಡಿದ 200 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಆರಂಭದಿಂದಲೇ ರನ್ ಗಳಿಸಲು ತಿಣುಕಾಡಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಶೂನ್ಯಕ್ಕೆ ಔಟಾಗಿ ಗುಜರಾತ್ ಗೆ ಆರಂಭಿಕ ಆಘಾತ ನೀಡಿದರು. ಬಳಿಕ ಗುಜರಾತ್ ಯಾವೊಬ್ಬ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ.

ಗುಜರಾತ್ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎಂದರೆ ವಾಷಿಂಗ್ಟನ್ ಸುಂದರ್ ಗಳಿಸಿದ 26 ರನ್ ಗಳೇ ಗುಜರಾತ್ ಪರ ಆಟಗಾರನೊಬ್ಬ ಗಳಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.

ನಾಯಕ ಶುಭ್ ಮನ್ ಗಿಲ್ (14), ಜಾಸ್ ಬಟ್ಲರ್ (5), ಗ್ಲೇನ್ ಫಿಲಿಪ್ಸ್ (6), ರಾಹುಲ್ ತೆವಾಟಿಯಾ (8), ರಷೀದ್ ಖಾನ್ (4), ಶಾರುಖ್ ಖಾನ್ (17), ಕಗಿಸೋ ರಬಾಡಾ (12) ಮತ್ತು ಮಹಮದ್ ಸಿರಾಜ್ (0) ರನ್ ಗಳಿಸುವಲ್ಲಿ ಸಂಪೂರ್ಣ ವಿಫಲರಾದರು. ಪರಿಣಾಮ ಮುಂಬೈ ಎದುರು 99 ರನ್ ಗಳ ಹೀನಾಯ ಸೋಲು ಕಂಡಿತು.

ಮುಂಬೈ ಪರ ಅಶ್ವನಿ ಕುಮಾರ್ 4 ವಿಕೆಟ್ ಕಬಳಿಸಿದರೆ, ಘಜನ್ಱರ್, ಮಿಚೆಲ್ ಸ್ಯಾಂಥ್ನರ್ ತಲಾ 2 ವಿಕೆಟ್ ಪಡೆದರು. ಮುಂಬೈಗೆ ಸಕಾರಾತ್ಮಕ ಅಂಶ ಎಂದರೆ ಇಷ್ಟು ದಿನ ವಿಕೆಟ್ ಇಲ್ಲದೇ ಬಳಲುತ್ತಿದ್ದ ಜಸ್ ಪ್ರೀತ್ ಬುಮ್ರಾ ಇಂದು ಸಾಯಿ ಸುದರ್ಶನ್ ರ ವಿಕೆಟ್ ಪಡೆದು ತಮ್ಮ ವಿಕೆಟ್ ಕೊರತೆ ನೀಗಿಸಿಕೊಂಡರು. ನಾಯಕ ಹಾರ್ದಿಕ್ ಪಾಂಡ್ಯಾ ಕೂಡ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!