ರಶೀದ್ ಖಾನ್ 
ಕ್ರಿಕೆಟ್

'ಭಾರತೀಯ ಪೌರತ್ವ' ಪಡೆಯುವಂತೆ ಹಿರಿಯ ಆಟಗಾರನಿಂದ ಆಫರ್! ರಶೀದ್ ಖಾನ್ ಹೇಳಿದ್ದೇನು?

ಹೌದು. ಸ್ಟಾರ್ ಲೆಗ್-ಸ್ಪಿನ್ನರ್ ತಮ್ಮ ಪುಸ್ತಕ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್' ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಎರಡರಿಂದಲೂ ಪೌರತ್ವ ಪಡೆಯಲು ಆಫರ್ ಬಂದಿದ್ದರ ಬಗ್ಗೆ ರಶೀದ್ ಖಾನ್ ಹೇಳಿಕೊಂಡಿದ್ದಾರೆ. ಅಪ್ಘಾನಿಸ್ತಾನದಲ್ಲಿಯೇ ಉಳಿಯುವ ನಿರ್ಧಾರ ಆಯ್ಕೆ ಮಾಡಿಕೊಂಡಿದ್ದನ್ನು ಹಂಚಿಕೊಂಡಿದ್ದಾರೆ.

ಹೌದು. ಸ್ಟಾರ್ ಲೆಗ್-ಸ್ಪಿನ್ನರ್ ತಮ್ಮ ಪುಸ್ತಕ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್' ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. 2023 ರ ಐಪಿಎಲ್ ವೇಳೆ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಭಾರತೀಯ ಕ್ರಿಕೆಟ್‌ನ ಹಿರಿಯ ವ್ಯಕ್ತಿಯೊಬ್ಬರು ಅವರನ್ನು ಭೇಟಿಯಾಗಲು ಬಯಸಿದ್ದಾರೆಂದು ತಂಡದ ಅಧಿಕಾರಿಯೊಬ್ಬರು ಹೇಳಿದರು.

ನಾನು ಅವರ ಬಳಿಗೆ ಹೋಗಿ ಅವರನ್ನು ಸ್ವಾಗತಿಸಿದೆ. ನಾವು ಮಾತನಾಡಲು ಪ್ರಾರಂಭಿಸಿದೆವು . ಆಗ ಅವರು 'ನಿಮ್ಮ ದೇಶದಲ್ಲಿ (ಅಫ್ಘಾನಿಸ್ತಾನ) ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬನ್ನಿ ಭಾರತದಲ್ಲಿಯೇ ಇರಿ. ನಾವು ನಿಮಗೆ ಭಾರತೀಯ ದಾಖಲೆಗಳನ್ನು ನೀಡುತ್ತೇವೆ, ಇಲ್ಲಿಯೇ ವಾಸಿಸುತ್ತೇವೆ, ಇಲ್ಲಿಯೇ ಕ್ರಿಕೆಟ್ ಆಡುತ್ತೇವೆ ಎಂದು ಹೇಳುತ್ತಿರುವುದನ್ನು ಕೇಳಿ ನನಗೆ ಆಶ್ಚರ್ಯವಾಯಿತು ಮತ್ತು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಆದರೆ ನಾನು ಮುಗುಳ್ನಕ್ಕು, 'ತುಂಬಾ ಧನ್ಯವಾದಗಳು. ನಾನು ನನ್ನ ದೇಶವಾದ ಅಫ್ಘಾನಿಸ್ತಾನಕ್ಕಾಗಿ ಆಡುತ್ತಿದ್ದೇನೆ' ಎಂದು ಹೇಳಿದೆ ಎಂದು ಹೇಳಿಕೊಂಡಿದ್ದಾರೆ.

ಇಂತಹ ಆಫರ್ ಭಾರತದಿಂದ ಮಾತ್ರ ಬಂದಿಲ್ಲ. ಆಸ್ಟ್ರೇಲಿಯಾ ಮತ್ತು ಭಾರತ ಎರಡರಿಂದಲೂ ಪೌರತ್ವ ಮತ್ತು ಆಟಕ್ಕೆ ಆಫರ್ ಬಂದಿತ್ತು. ನಾನು ನನ್ನ ದೇಶಕ್ಕೆ ಮಾತ್ರ, ಬೇರೆ ಯಾವುದೇ ದೇಶಕ್ಕೂ ಆಡುವುದಿಲ್ಲ'" ಎಂದು ಬಲವಾಗಿ ಹೇಳಿದ್ದಾಗಿ ತಿಳಿಸಿದ್ದಾರೆ.

2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಆಡುತ್ತಿದ್ದಾಗ ನಡೆದ ಇದೇ ರೀತಿಯ ಘಟನೆಯನ್ನು ನೆನಪಿಸಿಕೊಂಡರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಗೆಲ್ಲುವ ಪ್ರದರ್ಶನದ ನಂತರ,ಅವರು ಭಾರತದ ಪೌರತ್ವ ಪಡೆಯುವತೆ ಭಾರತದ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳು ಕೇಳಿಬಂದಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಯುದ್ಧ ಅಂತ್ಯ; ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ, Hormuz ಎಲ್ಲರಿಗೂ ಮುಕ್ತ: ಟ್ರಂಪ್ ಘೋಷಣೆ

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್; ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

1st ODI: 'ಗೌತಮ್ ಗಂಭೀರ್ ಅವರೇ ಹೇಳಿದ್ದು..'; ಭಾರತದ ವಿರುದ್ಧ 2ನೇ ಅತಿ ವೇಗದ ಶತಕ ಹಿಂದಿನ ಗುಟ್ಟು ರಟ್ಟು ಮಾಡಿದ Gurbaz

ಕೊನೆಗೂ 131 ದಿನಗಳ ನಂತರ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ನಿಗದಿ; ಇಲ್ಲಿದೆ ಮಾಹಿತಿ..

1st ODI: ಆಫ್ಘನ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಕೊಹ್ಲಿ, ಧವನ್ ರೆಕಾರ್ಡ್ ಪತನ; ಈ ದಾಖಲೆ ಮಾಡಿದ ಮೊದಲ ಆಟಗಾರ Shubman Gill

SCROLL FOR NEXT