ದಾಸುನ್ ಶಾನಕ 
ಕ್ರಿಕೆಟ್

ಶ್ರೀಲಂಕಾ ಕ್ರಿಕೆಟಿಗ ದಾಸುನ್ ಶಾನಕ ಒಂದು ವರ್ಷ ನಿಷೇಧ!

ಶಾನಕ ಅವರ PSL ಒಪ್ಪಂದವು 75 ಲಕ್ಷ PKR ಆಗಿತ್ತು, ಆದರೆ IPL ಸೇರ್ಪಡೆಯಿಂದ ಅವರಿಗೆ ಹೆಚ್ಚಿನ ಆರ್ಥಿಕ ಲಾಭವಾಗಿತ್ತು ಎಂದು ವರದಿಯಾಗಿದೆ.

ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) ಗೆ ಕೈ ಕೊಟ್ಟು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೈ ಹಿಡಿದಿದ್ದ ಶ್ರೀಲಂಕಾ ಕ್ರಿಕೆಟಿಗ ದಾಸುನ್ ಶಾನಕ (DASUN SHANAKA) ಇದೀಗ ಒಂದು ವರ್ಷ ನಿಷೇಧ ಶಿಕ್ಷೆ ಎದುರಿಸುವಂತಾಗಿದೆ.

ಹೌದು.. ಲಂಕಾ ಸ್ಟಾರ್ ಕ್ರಿಕೆಟಿಗ ದಾಸುನ್ ಶಾನಕ ಅವರನ್ನು 2027ರ PSLನಿಂದ ನಿಷೇಧಿಸಲಾಗಿದೆ. PSL ತೊರೆದು ಐಪಿಎಲ್ ನಲ್ಲಿ ಆಡುವ ಮೂಲಕ ಶಾನಕ ಒಪ್ಪಂದ ಮುರಿದಿದ್ದಾರೆ ಎಂದು ಆರೋಪಿಸಿ ಪಿಸಿಬಿ ಅಧಿಕೃತವಾಗಿ ನಿಷೇಧಿಸಿದೆ.

2026ರ ಸೀಸನ್‌ನಲ್ಲಿ (PSL 11) ಲಾಹೋರ್ ಕಲಂದರ್ಸ್ ತಂಡದಿಂದ ಅವರು ಇದ್ದಕ್ಕಿದ್ದಂತೆ ಹೊರಬಂದಿದ್ದಕ್ಕಾಗಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದು ಆಟಗಾರರ ನೋಂದಣಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು PCB ತಿಳಿಸಿದೆ.

ಮೂಲಗಳ ಪ್ರಕಾರ ಐಪಿಎಲ್ 2026ರಲ್ಲಿ ಸ್ಯಾಮ್ ಕರನ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಲು ಶಾನಕ PSLನಿಂದ ಹಿಂದೆ ಸರಿದಿದ್ದರು ಎನ್ನಲಾಗಿದೆ. ಶಾನಕ ನೀಡಿದ ಕಾರಣಗಳು ಒಪ್ಪಂದದ ಚೌಕಟ್ಟಿನೊಳಗೆ ಬರುವುದಿಲ್ಲ ಎಂದು ಮಂಡಳಿ ಹೇಳಿದೆ.

ಶಾನಕ ಹೇಳಿದ್ದೇನು?

ಇನ್ನು ನಿಷೇಧದ ಹೊರತಾಗಿಯೂ, ಶಾನಕ ಅವರು ಪಾಕಿಸ್ತಾನಿ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ಸಮುದಾಯಕ್ಕೆ ಕ್ಷಮೆಯಾಚಿಸಿದ್ದಾರೆ. ಅವರು ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಲಾಭ

ಶಾನಕ ನಿರ್ಧಾರದ ಹಿಂದೆ ಆರ್ಥಿಕ ಲಾಭ ಕೆಲಸ ಮಾಡಿದೆ ಎನ್ನಲಾಗಿದೆ. ಶಾನಕ ಅವರ PSL ಒಪ್ಪಂದವು 75 ಲಕ್ಷ PKR ಆಗಿತ್ತು, ಆದರೆ IPL ಸೇರ್ಪಡೆಯಿಂದ ಅವರಿಗೆ ಹೆಚ್ಚಿನ ಆರ್ಥಿಕ ಲಾಭವಾಗಿತ್ತು ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಅವರಿಗೂ ಸಹ ಇದೇ ಕಾರಣಕ್ಕಾಗಿ ಪಿಸಿಬಿ ಎರಡು ವರ್ಷಗಳ ನಿಷೇಧ ಹೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌!