ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ ವೈಭವ್ ಸೂರ್ಯವಂಶಿ 
ಕ್ರಿಕೆಟ್

ವಿರಾಟ್ ಕೊಹ್ಲಿಯಿಂದ ಪಡೆದ ಉಡುಗೊರೆಯನ್ನು ಲೈವ್ ವೇಳೆಯೇ ಎತ್ತಿ ತೋರಿಸಿದ ವೈಭವ್ ಸೂರ್ಯವಂಶಿ; ವಿಡಿಯೋ ವೈರಲ್

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅವರು ರಾಜಸ್ಥಾನ್ ರಾಯಲ್ಸ್ 15 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ ತಂಡದ 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2026ರ ಪಂದ್ಯದ ಸಮಯದಲ್ಲಿ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಅವರಿಂದ ಆಟೋಗ್ರಾಫ್ ಪಡೆದ ಕ್ಯಾಪ್ ಅನ್ನು ಪ್ರದರ್ಶಿಸಿದ್ದಾರೆ. ಆರ್‌ಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ನಂತರ, ಸೂರ್ಯವಂಶಿ ಕೊಹ್ಲಿಯೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದರು ಮತ್ತು ಭಾರತದ ಮಾಜಿ ನಾಯಕ ಆರ್‌ಆರ್ ಕ್ಯಾಪ್‌ ಮೇಲೆ ಸಹಿ ಮಾಡಿ ವೈಭವ್ ಸೂರ್ಯವಂಶಿ ಅವರಿಗೆ ನೀಡಿದರು. ಆರ್‌ಆರ್ ಫ್ರಾಂಚೈಸಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕ್ಯಾಪ್‌ನ ಚಿತ್ರಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದೆ.

ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ RR ಪಂದ್ಯದಲ್ಲಿ, ಸೂರ್ಯವಂಶಿ ಅದೇ ಕ್ಯಾಪ್ ಧರಿಸಿ ಕಾಣಿಸಿಕೊಂಡರು ಮತ್ತು ನೇರ ಪ್ರಸಾರದ ಸಮಯದಲ್ಲಿ ಅವರು ಅದನ್ನು ತೋರಿಸಿದರು.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅವರು ರಾಜಸ್ಥಾನ್ ರಾಯಲ್ಸ್ 15 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ಅವರನ್ನು 'ಅದ್ಭುತ ಪ್ರತಿಭೆ' ಎಂದು ಕರೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 54 ರನ್‌ಗಳ ಭರ್ಜರಿ ಜಯದ ನಂತರ ಜಿಯೋಸ್ಟಾರ್‌ನ 'ಬಿಲೀವ್' ಶೋನಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ಲೀಗ್‌ನಲ್ಲಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆಗಳನ್ನು ವಿಶ್ಲೇಷಿಸುವಾಗ, ವಿಶೇಷವಾಗಿ 15 ವರ್ಷದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ತಂತ್ರ ಮತ್ತು ಕ್ರೀಸ್‌ನಲ್ಲಿನ ಶಾಂತತೆ ಅದ್ಭುತವಾಗಿದೆ. ಅಭಿವೃದ್ಧಿಯ ಈ ಹಂತದಲ್ಲಿ ಸೂರ್ಯವಂಶಿಯ ಸ್ವಾಭಾವಿಕ ಸಾಮರ್ಥ್ಯವು ಅವರನ್ನು ಇತರರಿಂದ ಪ್ರತ್ಯೇಕಿಸುತ್ತದೆ ಎಂದು ಒತ್ತಿ ಹೇಳಿದರು.

'ಅವರು ಅದ್ಭುತ ಪ್ರತಿಭೆ ಮತ್ತು ಆತನನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ಆಟಗಾರನ ನಯವಾದ ಬ್ಯಾಟಿಂಗ್ ಶೈಲಿ, ಸಹಜ ಲಯ ಮತ್ತು ಚೆಂಡನ್ನು ಎದುರಿಸುವ ಮೊದಲು ಆತ ಮೊಮೆಂಟಮ್ ಅನ್ನು ನಿರ್ಮಿಸುವ ರೀತಿ ಉತ್ತಮವಾಗಿದೆ. ಈ ಆಟಗಾರನಿಗೆ ಉತ್ತಮ ಸಾಮರ್ಥ್ಯವಿದೆ ಮತ್ತು ಮುಂದೆ ಉಜ್ವಲ ಭವಿಷ್ಯವಿದೆ' ಎಂದು ಅಯ್ಯರ್ ಹೇಳಿದರು.

ಸದ್ಯ ನಡೆಯುತ್ತಿರುವ 2026ರ ಆವೃತ್ತಿಯಲ್ಲಿ, ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಸೂರ್ಯವಂಶಿ ಆರು ಪಂದ್ಯಗಳಲ್ಲಿ 236.53 ಸ್ಟ್ರೈಕ್ ರೇಟ್‌ನಲ್ಲಿ 246 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!