ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ 
ಕ್ರಿಕೆಟ್

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video

ಗುಜರಾತ್ ನೀಡಿದ 206 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಜಾಕೋಬ್ ಬೆಥೆಲ್ ಅವರನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್, ಕೊಹ್ಲಿ ಜೊತೆ ಸೇರುತ್ತಿದ್ದಂತೆ ಆಟದ ಗತಿ ಬದಲಾಯಿತು.

ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಆರ್ ಸಿಬಿ ಗುಜರಾತ್ ನೀಡಿದ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ದಾಖಲಿಸಿದೆ.

ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಸಂಭ್ರಮಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ.ಇವರಿಬ್ಬರ ನಡುವಿನ ಪ್ರೀತಿ, ಒಬ್ಬರಿಗೊಬ್ಬರು ಬೆನ್ನೆಲುವಾಗಿ ನಿಲ್ಲುವುದು, ಪಂದ್ಯದಲ್ಲಿ ಹುರಿದುಂಬಿಸುವುದು, ಸಂಗಾತಿಯ ಸಾಧನೆ ಕಂಡು ಸಂತೋಷಪಡುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಹೌದು. ಗುಜರಾತ್ ನೀಡಿದ 206 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಜಾಕೋಬ್ ಬೆಥೆಲ್ ಅವರನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್, ಕೊಹ್ಲಿ ಜೊತೆ ಸೇರುತ್ತಿದ್ದಂತೆ ಆಟದ ಗತಿ ಬದಲಾಯಿತು. ಈ ಜೋಡಿ ವೇಗವಾಗಿ ಸ್ಕೋರ್ ಹೆಚ್ಚಿಸಿತು. ಏಳು ಓವರ್‌ಗಳಲ್ಲಿ 70 ರನ್ ಗಳಿಗೆ ಕೊಂಡೊಯ್ಯಿತು.

ಈ ಜೋಡಿ ಬೇರ್ಪಡಿಸಲು ತಿಣುಕಾಡಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ರಶೀದ್ ಖಾನ್ ಗೆ ಬೌಲಿಂಗ್ ಕೊಟ್ಟರು. ಆದರೆ ಕೊಹ್ಲಿ ಆ ಎಸೆತವನ್ನು ಬೌಂಡರಿ ಯಾಚೆಗೆ ಅಟ್ಟಿದರು.

ಈ ಶಾಟ್ ಅಭಿಮಾನಿಗಳಿಗೆ ಪುಲ್ ಖುಷಿ ನೀಡಿತು. ಸ್ಟ್ಯಾಂಡ್‌ ನಲ್ಲಿ ಕುಳಿತವರು ಕುಣಿದು ಕುಪ್ಪಳಿಸಿದರು. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡಾ ಕುಳಿತ್ತಲೇ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಅನುಷ್ಕಾ ಅವರ ಪ್ರತಿಕ್ರಿಯೆ ಈಗ ನಮ್ಮೆಲ್ಲರ ಪ್ರತಿಕ್ರಿಯೆಯಾಗಿದೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ವಿರಾಟ್‌ನ ಅತಿದೊಡ್ಡ ಚಿಯರ್‌ಲೀಡರ್" ಎಂದು ಬರೆದಿದ್ದಾರೆ. ವಿರುಷ್ಕಾ ಕ್ಷಣಗಳು ಎಂದಿಗೂ ಮಾಸಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಇದಕ್ಕಾಗಿಯೇ ನಾವು ನಮ್ಮ ಇಂಟರ್ನೆಟ್ ಬಿಲ್‌ ಪಾವತಿಸುತ್ತೇವೆ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!