ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2026: ಹಾರ್ದಿಕ್ ಪಾಂಡ್ಯ ರಿಲೀಸ್? ಮತ್ತೊಂದು ವೈಫಲ್ಯದ ನಂತರ ಸ್ಪಷ್ಟ ಸಂದೇಶ ರವಾನಿಸಿದ MI

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಐಪಿಎಲ್ 2026ರಲ್ಲಿ ಉತ್ತಮ ಪ್ರದರ್ಶನ ತೊರುತ್ತಿಲ್ಲ. ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದಾರೆ.

ಹಾರ್ದಿಕ್ ಪಾಂಡ್ಯ ಐಪಿಎಲ್ ವಿನ್ನಿಂಗ್ ನಾಯಕ. ಭಾರತೀಯ ಕ್ರಿಕೆಟ್‌ನಲ್ಲಿ ಕೆಲವರು ಮಾತ್ರ ಆ ಟ್ಯಾಗ್ ಹೊಂದಿದ್ದಾರೆಂದು ಹೇಳಬಹುದು. ಆದಾಗ್ಯೂ, ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮರಳಿದ್ದು ಅಷ್ಟೊಂದು ಯಶಸ್ಸು ತಂದಿಲ್ಲ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಐಪಿಎಲ್ 2026ರಲ್ಲಿ ಉತ್ತಮ ಪ್ರದರ್ಶನ ತೊರುತ್ತಿಲ್ಲ. ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದಾರೆ. ಐಪಿಎಲ್ 2026 ಪ್ಲೇಆಫ್ ರೇಸ್ ಮುಂಬೈ ಈಗ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ನಿನ್ನೆ ಹೈದರಾಬಾದ್ ವಿರುದ್ದ 243 ರನ್ ಗಳ ಬೃಹತ್ ಮೊತ್ತವನ್ನು ಸೇರಿಸಿದರೂ, ಸನ್ ರೈಸರ್ಸ್ ಬ್ಯಾಟುರಗಳ ಅಬ್ಬರದ ನಡುವೆ ಮಂಕಾಗಿ ಸೋಲು ಅನುಭವಿಸಿತು.

ಕ್ರಿಕ್‌ಬಜ್‌ನಲ್ಲಿ ನಡೆದ ಚರ್ಚೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ವಿಮರ್ಶೆ ಮಾಡುವ ಅಗತ್ಯವಿದೆ ಎಂದು ಎಂಪುಮೆಲೆಲೊ "ಪೊಮ್ಮಿ" ಎಂಬಾಂಗ್ವಾ ಹೇಳಿದ್ದಾರೆ. ಅದೇ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಸಹ, "ಮುಂದಿನ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಬಿಡುಗಡೆ ಮಾಡಬೇಕಾದ ಆಟಗಾರರು ಯಾರು" ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

"ನನ್ನ ನಿಲುವು ಹೀಗಿರುತ್ತದೆ: ಮುಂದಿನ ವರ್ಷ ನಿಮ್ಮ ನಾಯಕ ಯಾರು? ಅವರು ನಾಯಕನನ್ನು ಬದಲಾಯಿಸಿದರೆ ಮುಂದಿನ ವರ್ಷ ನಾಯಕ ಯಾರು? ಹಾರ್ದಿಕ್ ಪಾಂಡ್ಯ ಇಲ್ಲದಿದ್ದರೆ, ಅವರನ್ನು ರಿಲೀಸ್ ಮಾಡಿ. ಅವರು ಕಳಪೆ ಪ್ರದರ್ಶನ ನೀಡಿರುವ ವಾತಾವರಣದಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆಂದು ನನಗೆ ತಿಳಿದಿಲ್ಲ. ಅವರ ತಂಡವು ಮೂರು ವರ್ಷಗಳಿಂದ ಕಳಪೆ ಪ್ರದರ್ಶನ ನೀಡಿದೆ" ಎಂದು ಡೌಲ್ ಹೇಳಿದ್ದಾರೆ.

ನಾಯಕತ್ವದ ಹೆಚ್ಚುವರಿ ಹೊರೆಯೊಂದಿಗೆ ಪಾಂಡ್ಯ ಮತ್ತೆ ಫಾರ್ಮ್ ಗೆ ಮರಳಬಹುದೇ ಎಂದು ಕೇಳಿದಾಗ, ಇದು ಅವರನ್ನು ತಂಡದಲ್ಲಿ ಉಳಿಯುವಂತೆ ಮಾಡಬಹುದು ಅಥವಾ ಹೊರ ಹೊಗಬಹುದು. ಅದು ಅವರಿಗೆ 'ನಾನು ವಿಫಲನಾಗಿದ್ದೇನೆ' ಎಂದು ಅನಿಸುವಂತೆ ಮಾಡಬಹುದು. ಅದು ಎರಡೂ ರೀತಿಯಲ್ಲಿಯೂ ಹೋಗಬಹುದು. ಸಂಪೂರ್ಣವಾಗಿ ಫಿಟ್ ಆಗಿರುವಾಗ, ಹಾರ್ದಿಕ್ ಆಟದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ನನ್ನ ಒಂದೇ ಅಂಶವೆಂದರೆ, ಅವರು ನಾಯಕನ ಸ್ಥಾನದಿಂದ ಹಿಂದಿನ ಸೀಟನ್ನು ತೆಗೆದುಕೊಳ್ಳಲು ಮತ್ತು ಮತ್ತೊಮ್ಮೆ ಶ್ರೇಷ್ಠ ಆಟಗಾರ ಆಗಲು ಸಿದ್ಧರಿದ್ದಾರೆಯೇ?" ಎಂದರು.

ಮುಂಬೈ ಇಂಡಿಯನ್ಸ್ ತಂಡ ಬುಧವಾರ 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದ್ದರೂ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2013ರ ಅತ್ಯಾಚಾರ ಪ್ರಕರಣ: ‘Tehelka’ ಮಾಜಿ ಸಂಪಾದಕ ತರುಣ್ ತೇಜಪಾಲ್ ದೋಷಿ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು..!

FCRA: 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ, ಸಾಮಾನ್ಯ ಭಾರತೀಯರೇ ದೊಡ್ಡ ಬೆಲೆ ತೆರಬೇಕಾಗುತ್ತದೆ': Shashi Tharoor

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ, ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್