ದಕ್ಷಿಣ ಆಫ್ರಿಕಾದ ಅತ್ಯಂತ ಜನಪ್ರಿಯ ಟಿ20 ಲೀಗ್ SAT20 ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಒಡೆತನ ಕಾವ್ಯ ಮಾರನ್ ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ. ಈ ಹಿಂದೆ ದಿ ಹಂಡ್ರೆಡ್ 2026 ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡಕ್ಕಾಗಿ ಪಾಕಿಸ್ತಾನದ ಲೆಗ್-ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಖರೀದಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದ ಬೌಲರ್ ಖರೀದಿಸುವ ಮೂಲಕ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಹಾಲಿ SA20 ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮುಂಬರುವ ಋತುವಿಗಾಗಿ ತಮ್ಮ ತಂಡವನ್ನು ಮತ್ತಷ್ಟು ಬಲಪಡಿಸಿದೆ. ಸನ್ ಗ್ರೂಪ್ ಸಹ-ಮಾಲೀಕ ಕಾವ್ಯ ಮಾರನ್ ಒಡೆತನದ ಈ ಫ್ರಾಂಚೈಸಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಖರೀದಿಸಿತ್ತು. ಅಲ್ಲದೆ ಬಾಂಗ್ಲಾದೇಶದ ಲೆಗ್-ಸ್ಪಿನ್ನರ್ ರಿಷದ್ ಹುಸೇನ್ ನನ್ನು ಕೂಡ ಸೇರಿಸಿಕೊಂಡಿದೆ. ಇದು ಭಾರತೀಯ ಅಭಿಮಾನಿಗಳು ಕೆರಳುವಂತೆ ಮಾಡಿದೆ.
ಮಿಚೆಲ್ ಮಾರ್ಷ್ ಸೇರ್ಪಡೆಯಿಂದಾಗಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಮಧ್ಯಮ ಕ್ರಮಾಂಕ ಇನ್ನಷ್ಟು ಅಪಾಯಕಾರಿಯಾಗಿದೆ. ತಂಡವು ಈಗಾಗಲೇ ಕ್ವಿಂಟನ್ ಡಿ ಕಾಕ್, ಟ್ರಿಸ್ಟನ್ ಸ್ಟಬ್ಸ್, ಅನ್ರಿಚ್ ನಾರ್ಟ್ಜೆ, ಆಡಮ್ ಮಿಲ್ನೆ ಮತ್ತು ಮಾರ್ಕೊ ಜಾನ್ಸೆನ್‌ರಂತಹ ಪಂದ್ಯ ಗೆಲ್ಲುವ ಟಿ20 ಆಟಗಾರರನ್ನು ಹೊಂದಿದೆ. ಸನ್‌ರೈಸರ್ಸ್ 2024 ರ ಟಿ20 ವಿಶ್ವಕಪ್‌ನಲ್ಲಿ ರಿಷದ್ ಹುಸೇನ್ ಅದ್ಭುತ ಪ್ರದರ್ಶನ ನೀಡಿ 14 ವಿಕೆಟ್‌ಗಳನ್ನು ಕಬಳಿಸಿದ್ದನು. ಅಫ್ಘಾನಿಸ್ತಾನದ ಎಎಂ ಗಜನ್‌ಫರ್ ಬದಲಿಗೆ ಆತನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಎಸ್‌ಎ20 ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ ಆಡಿದ ನಾಲ್ಕು ಋತುಗಳಲ್ಲಿ ತಂಡವು ಮೂರು ಪ್ರಶಸ್ತಿಗಳನ್ನು ಗೆದ್ದಿದೆ. ಮುಂದಿನ ಋತುವಿನ ಪಂದ್ಯಾವಳಿ ಜನವರಿ 17ರಂದು ಪ್ರಾರಂಭವಾಗಲಿದೆ.