ವಿರಾಟ್ ಕೊಹ್ಲಿ 
ಕ್ರಿಕೆಟ್

'ಯಾವುದೇ ತಂಡದ ಪರ ಆಡುವಾಗಲೂ...': ವಿರಾಟ್ ಕೊಹ್ಲಿ ಕುರಿತು ವಿವಿಎಸ್ ಲಕ್ಷ್ಮಣ್ ಆಡಿದ ಮಾತುಗಳು ವೈರಲ್!

ಭಾರತೀಯ ಆಟಗಾರರಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಲಕ್ಷ್ಮಣ್ ಅವರು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಅನ್ನು ಸಮರ್ಥಿಸಿಕೊಂಡರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು, ಭಾರತದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಮಾದರಿ ವೃತ್ತಿಪರ ಹಾಗೂ ಇತರರಿಗೆ ಸ್ಫೂರ್ತಿಯ ಸೆಲೆ ಎಂದು ಬಣ್ಣಿಸಿದರು. ಕೊಹ್ಲಿ ತಮಗಾಗಿ ಯಾವಾಗಲೂ ಅತ್ಯುನ್ನತ ಮಾನದಂಡಗಳನ್ನು ನಿಗದಿಪಡಿಸಿಕೊಳ್ಳುತ್ತಾರೆ ಮತ್ತು ತಾವು ಆಡುವ ಪ್ರತಿ ಪಂದ್ಯದಲ್ಲೂ ಅವುಗಳನ್ನು ತಲುಪಲು ಶ್ರಮಿಸುತ್ತಾರೆ; ಆ ಮೂಲಕ ಯುವ ಕ್ರಿಕೆಟಿಗರು ಹಾಗೂ ಸಹ ಆಟಗಾರರು ತಮ್ಮನ್ನು ಅನುಸರಿಸುವಂತೆ ಪ್ರೇರೇಪಿಸುತ್ತಾರೆ ಎಂದು ಲಕ್ಷ್ಮಣ್ ಪ್ರತಿಪಾದಿಸಿದರು.

'ವಿರಾಟ್ ಒಬ್ಬ ಮಾದರಿ ವೃತ್ತಿಪರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ತಮಗಾಗಿ ನಿಗದಿಪಡಿಸಿಕೊಳ್ಳುವ ಮಾನದಂಡಗಳನ್ನು ಪೂರೈಸಲು, ತಾವು ಪ್ರತಿನಿಧಿಸುವ ಯಾವುದೇ ತಂಡದ ಪರ ಆಡುವಾಗಲೂ ಅವರು ಸದಾ ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಅವರು ಒಬ್ಬ ಶ್ರೇಷ್ಠ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಹಾಗೂ ಅನೇಕ ಯುವಕರು ಅಥವಾ ಆಟಗಾರರು ಅವರನ್ನು ಅನುಸರಿಸಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಬೆಂಗಳೂರಿನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ್ ತಿಳಿಸಿದರು.

ಭಾರತೀಯ ಆಟಗಾರರಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಲಕ್ಷ್ಮಣ್ ಅವರು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಅನ್ನು ಸಮರ್ಥಿಸಿಕೊಂಡರು. ಗಾಯಗಳು ಕ್ರಿಕೆಟಿಗನ ವೃತ್ತಿಜೀವನದ ಅನಿವಾರ್ಯ ಭಾಗ. ಅದಕ್ಕಾಗಿ CoE ಅನ್ನು ದೂಷಿಸುವುದು ಅಥವಾ ಬಲಿಪಶುಗಳನ್ನು ಹುಡುಕುವ ಬದಲು, ಆಟಗಾರರ ಮೇಲೆ ನಿಗಾ ವಹಿಸುವುದು ಮತ್ತು ಅವರ ನಿರ್ವಹಣೆಯನ್ನು ಸೂಕ್ತವಾಗಿ ಕೈಗೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸದ್ಯ ಹಲವಾರು ಪ್ರಮುಖ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಜಸ್ಪ್ರೀತ್ ಬುಮ್ರಾ, ಸಾಯಿ ಸುದರ್ಶನ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ ಸೇರಿದ್ದಾರೆ.

'CoE ಕೇವಲ ಪುನರ್ವಸತಿ ಕೇಂದ್ರವಲ್ಲ. ಕ್ರಿಕೆಟಿಗರು ಶ್ರೇಷ್ಠತೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಇದು ಇನ್ನೂ ದೊಡ್ಡ ಪಾತ್ರವನ್ನು ವಹಿಸಬೇಕಿದೆ' ಎಂದು ಲಕ್ಷ್ಮಣ್ ಹೇಳಿದರು.

CoEನಲ್ಲಿನ 'ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ' (SSM) ಹುದ್ದೆ ಖಾಲಿ ಇರುವ ಬಗ್ಗೆಯೂ ಮಾತನಾಡಿದ ಲಕ್ಷ್ಮಣ್, ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಕಂಡುಕೊಳ್ಳುವಲ್ಲಿ ಬಿಸಿಸಿಐ (BCCI) ತೊಂದರೆಗಳನ್ನು ಎದುರಿಸುತ್ತಿದೆ. ಈ ಹುದ್ದೆಗೆ ಕೇವಲ ಘನತೆ ಮತ್ತು ಅನುಭವವಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟಿಗರು ಹಾಗೂ ಅವರ ಅಗತ್ಯಗಳ ಕುರಿತಾದ ತಿಳುವಳಿಕೆಯೂ ಅಗತ್ಯ ಎಂದು ತಿಳಿಸಿದರು.

'ನಿತಿನ್ ಪಟೇಲ್ ನಿರ್ಗಮನದ ನಂತರ, ಅವರ ಸ್ಥಾನವನ್ನು ತುಂಬಲು ನಮಗೆ ಸಾಧ್ಯವಾಗಲಿಲ್ಲ. ಎಲ್ಲವೂ ಅಂತಿಮಗೊಂಡಿತ್ತು; ಆದರೆ ಆಂಡ್ರ್ಯೂ (ಲೀಪಸ್) ಕೌಟುಂಬಿಕ ಕಾರಣಗಳನ್ನು ನೀಡಿ ಹಿಂದೆ ಸರಿದರು' ಎಂದು ಲಕ್ಷ್ಮಣ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!