ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ 
ಕ್ರಿಕೆಟ್

India vs Sri Lanka 1st Test: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗಿಲ್, ಭಾರತದ ಪ್ಲೇಯಿಂಗ್ XIನಿಂದ ಸರ್ಫರಾಜ್ ಖಾನ್ ಔಟ್!

ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ; ಪಿಚ್ ಮತ್ತು ಹವಾಮಾನ ಎರಡೂ ಚೆನ್ನಾಗಿ ಕಾಣುತ್ತಿವೆ, ಹಾಗಾಗಿ ಇದು ನಮಗೆ ಉತ್ತಮ ಕ್ರಿಕೆಟ್ ದಿನವಾಗಲಿದೆ ಎಂದು ಭಾವಿಸುತ್ತೇನೆ ಎಂದು ನಾಯಕ ಶುಭಮನ್ ಗಿಲ್ ಟಾಸ್ ವೇಳೆ ಹೇಳಿದರು.

ಶನಿವಾರ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವು ತನ್ನ ಪರಿಚಿತ ಆಡುವ ಬಳಗವನ್ನೇ ಕಾಯ್ದುಕೊಂಡಿದ್ದು, ಸರ್ಫರಾಜ್ ಖಾನ್ ಅಂತಿಮ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಹಿಂದಿನ ಟೆಸ್ಟ್ ಪಂದ್ಯದ ತಂಡವನ್ನೇ ಬಹುತೇಕ ಹಾಗೆಯೇ ಉಳಿಸಿಕೊಂಡಿರುವ ಪ್ರವಾಸಿ ತಂಡವು, ಗಾಯಗೊಂಡಿರುವ ಸಾಯಿ ಸುದರ್ಶನ್ ಅವರ ಬದಲಿಗೆ ದೇವದತ್ತ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಭಾರತವು ಕುಲದೀಪ್ ಯಾದವ್, ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ಎಂಬ ಮೂವರು ಸ್ಪಿನ್ನರ್‌ಗಳನ್ನು ಹಾಗೂ ವೇಗದ ಬೌಲಿಂಗ್ ಆಯ್ಕೆಗಳಾಗಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ತಂಡದಲ್ಲಿ ಒಳಗೊಂಡಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶ್ರೀಲಂಕಾ ಪರವಾಗಿ ಕೇಶಾರ ನುವಂತ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

'ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ; ಪಿಚ್ ಮತ್ತು ಹವಾಮಾನ ಎರಡೂ ಚೆನ್ನಾಗಿ ಕಾಣುತ್ತಿವೆ, ಹಾಗಾಗಿ ಇದು ನಮಗೆ ಉತ್ತಮ ಕ್ರಿಕೆಟ್ ದಿನವಾಗಲಿದೆ ಎಂದು ಭಾವಿಸುತ್ತೇನೆ. ಕಳೆದ ಪಂದ್ಯದಲ್ಲಿ ಆಡಿದ ಅದೇ ಆಟಗಾರರ ತಂಡವನ್ನೇ (ಪ್ಲೇಯಿಂಗ್ ಇಲೆವೆನ್) ನಾವು ಕಣಕ್ಕಿಳಿಸುತ್ತಿದ್ದೇವೆ. ನಮ್ಮಲ್ಲಿ ಐವರು ಬೌಲರ್‌ಗಳಿದ್ದಾರೆ - ಇಬ್ಬರು ವೇಗದ ಬೌಲರ್‌ಗಳು ಮತ್ತು ಮೂವರು ಸ್ಪಿನ್ನರ್‌ಗಳು. ದೇಶವನ್ನು ಮುನ್ನಡೆಸುವ ಅವಕಾಶ ಸಿಗುವುದು ಯಾವಾಗಲೂ ದೊಡ್ಡ ಗೌರವದ ವಿಷಯ, ಆದರೆ ಈ ಸಂದರ್ಭದಲ್ಲಿ ಅದು ಇನ್ನೂ ವಿಶೇಷವಾಗಿದೆ. ಇದು ನಮಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ನಮ್ಮ 600ನೇ ಟೆಸ್ಟ್ ಪಂದ್ಯವೂ ಹೌದು, ಆದ್ದರಿಂದ ನಾನು ಇದನ್ನು ಎದುರು ನೋಡುತ್ತಿದ್ದೇನೆ' ಎಂದು ಟಾಸ್ ವೇಳೆ ಗಿಲ್ ಹೇಳಿದರು.

ಶ್ರೀಲಂಕಾ ತಂಡವು ಪಾಥುಮ್ ನಿಸ್ಸಂಕ ಅವರ ಬದಲಿಗೆ ನಿಶಾನ್ ಮದುಷ್ಕ ಅವರನ್ನು ಸೇರಿಸಿಕೊಂಡಿದೆ; ಹಾಗೆಯೇ ಕುಸಾಲ್ ಮೆಂಡಿಸ್ ಅವರ ಅನುಪಸ್ಥಿತಿಯಲ್ಲಿ ನಿರೋಶನ್ ಡಿಕ್ವೆಲ್ಲಾ ಆತಿಥೇಯ ತಂಡದ ವಿಕೆಟ್-ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

'ಪಿಚ್ ಉತ್ತಮವಾಗಿ ಕಾಣುತ್ತಿದೆ. ನಾನೂ ಕೂಡ ಬ್ಯಾಟಿಂಗ್ ಆಯ್ಕೆ ಮಾಡಲು ಬಯಸಿದ್ದೆ. ಇದು ಸಾಕಷ್ಟು ಒಣಗಿದಂತೆಯೂ ಇದೆ. ತಂಡದಲ್ಲಿ ಇಬ್ಬರು ವೇಗದ ಬೌಲರ್‌ಗಳು, ಇಬ್ಬರು ಸ್ಪಿನ್ನರ್‌ಗಳು ಹಾಗೂ ನಾನೂ ಸೇರಿದಂತೆ ಇಬ್ಬರು ಆಲ್-ರೌಂಡರ್‌ಗಳು (ಸೋನಲ್ ದಿನುಷಾ ಅವರೊಂದಿಗೆ) ಇದ್ದಾರೆ. ಇದೊಂದು ಐಕಾನಿಕ್ ಮೈದಾನ; ಈ ಟೆಸ್ಟ್ ಪಂದ್ಯದ ಭಾಗವಾಗಲು ಮತ್ತು ಇಲ್ಲಿ ಆಡಲು ನನಗೆ ತುಂಬಾ ಸಂತೋಷವಾಗುತ್ತಿದೆ' ಎಂದು ನಾಯಕ ಧನಂಜಯ ಡಿ ಸಿಲ್ವಾ ಹೇಳಿದರು.

ಉಭಯ ತಂಡಗಳ ಆಡುವ ಹನ್ನೊಂದರ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮದುಷ್ಕಾ, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕೇಶಾರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫರ್ನಾಂಡೊ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು

ಬೆಂಗಳೂರು: ಟೆಕ್ಕಿ ಪತ್ನಿ ಹತ್ಯೆಗೈದು ತಾನೂ ನೇಣಿಗೆ ಶರಣಾದ ಇಂಜಿನಿಯರ್; ತಾಯಿಗೆ ಕಳಿಸಿದ್ದ ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ