ಸುನೀಲ್ ಗವಾಸ್ಕರ್ 
ಕ್ರಿಕೆಟ್

'ಇದರ ಬಗ್ಗೆ ಅಸೂಯೆ ಪಡುವವರಿಗೆ': ಕೋಟ್ಯಂತರ ರೂಪಾಯಿ ಐಪಿಎಲ್ ಟ್ರೇಡ್ ಬಗ್ಗೆ BCCIಗೆ ಸುನೀಲ್ ಗವಾಸ್ಕರ್ ಸಂದೇಶ

ಹರಾಜಿಗೂ ಮುನ್ನ ಫ್ರಾಚೈಂಸಿಗಳು ಆಟಗಾರರನ್ನು ರಿಲೀಸ್ ಮಾಡುವ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಇದಕ್ಕೂ ಮುನ್ನವೇ ದೇಶದ ನಂಬರ್ 1 ವೇಗದ ಬೌಲಿಂಗ್ ಆಲ್‌ರೌಂಡರ್ ಪಾಂಡ್ಯ ಇದೀಗ ಚರ್ಚೆಯ ವಿಷಯವಾಗಿದ್ದಾರೆ.

ಐಪಿಎಲ್ 2026ರ ಹರಾಜಿಗೆ ಇನ್ನೂ ಸುಮಾರು ನಾಲ್ಕು ತಿಂಗಳು ಬಾಕಿಯಿದ್ದರೂ, ಕೆಲವು ಬೃಹತ್ ವಿನಿಮಯ ಒಪ್ಪಂದಗಳ (mega trade deals) ಕುರಿತು ವ್ಯಾಪಕ ಊಹಾಪೋಹಗಳು ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಆಟಗಾರರ ಹೆಸರು ಇದರಲ್ಲಿ ಕೇಳಿಬರುತ್ತಿದ್ದು, ಹಿಂದಿನ ವರ್ಷಗಳಂತೆಯೇ ಈ ಬಾರಿಯೂ ಅವರ ಕುರಿತು ಹಲವು ವದಂತಿಗಳು ಮತ್ತು ಟ್ರೇಡಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗ, ಐಪಿಎಲ್ ವರ್ಗಾವಣೆಗಳು ಮತ್ತು ವಿನಿಮಯಗಳ ಕುರಿತು ಭಾರತದ ದಿಗ್ಗಜ ಸುನೀಲ್ ಗವಾಸ್ಕರ್ ಮನವಿಯೊಂದನ್ನು ಮಾಡಿದ್ದಾರೆ.

'...ಆಟಗಾರರು ಒಂದು ಫ್ರಾಂಚೈಸಿಯಿಂದ ಮತ್ತೊಂದಕ್ಕೆ ತೆರಳುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಸಹಜವಾಗಿಯೇ, ಆ ಪ್ರಕ್ರಿಯೆಯ ಅವಧಿ (ಟ್ರೇಡ್ ವಿಂಡೋ) ಮುಕ್ತಾಯಗೊಳ್ಳಲು ಇನ್ನೂ ಸ್ವಲ್ಪ ಸಮಯವಿದೆ. ಆದಾಗ್ಯೂ, ಒಬ್ಬ ಆಟಗಾರನ ವರ್ಗಾವಣೆ ವಿಷಯವು ಸಾರ್ವಜನಿಕರಿಗೆ ತಿಳಿದಿದ್ದರೂ, ಟ್ರೇಡ್ ನಡೆದಾಗ ಅದಕ್ಕೆ ಸಂಬಂಧಿಸಿದ ಆರ್ಥಿಕ ವಿವರಗಳು ಕೇವಲ ಆ ಎರಡು ಫ್ರಾಂಚೈಸಿಗಳು, ಆಟಗಾರ ಮತ್ತು ಬಿಸಿಸಿಐಗೆ ಮಾತ್ರ ತಿಳಿದಿರುತ್ತವೆ' ಎಂದು ಸುನಿಲ್ ಗವಾಸ್ಕರ್ 'ಮಿಡ್-ಡೇ'ನಲ್ಲಿ ಬರೆದಿದ್ದಾರೆ.

'ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ಫ್ರಾಂಚೈಸಿ ತನ್ನ ತಂಡಕ್ಕಾಗಿ ನಿಗದಿಪಡಿಸಲಾದ ವೇತನ ಮಿತಿಯನ್ನು (salary cap) ಪಾಲಿಸಿದೆಯೇ ಅಥವಾ ಉಲ್ಲಂಘಿಸಿದೆಯೇ ಎಂಬುದು ಇತರ ಫ್ರಾಂಚೈಸಿಗಳಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಸಂಪೂರ್ಣ ಪಾರದರ್ಶಕತೆಗಾಗಿ ಆ ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸುವುದು ಮುಖ್ಯವಾಗಿದೆ. ಸಂಪೂರ್ಣ ಪಾರದರ್ಶಕತೆಯು ಐಪಿಎಲ್‌ನ ಉನ್ನತ ಮಟ್ಟದ ಘನತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ' ಎಂದಿದ್ದಾರೆ.

'ಐಪಿಎಲ್ ವಿಶ್ವದ ಅತ್ಯುತ್ತಮ ಟಿ20 ಲೀಗ್ ಆಗಿದೆ; ಹೀಗಾಗಿ, ಇದರ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆ ಅಥವಾ ಆರೋಪಗಳಿಗೆ ಆಸ್ಪದವಿರದಂತೆ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಬರೆದಿದ್ದಾರೆ.

ಹರಾಜಿಗೂ ಮುನ್ನ ಫ್ರಾಚೈಂಸಿಗಳು ಆಟಗಾರರನ್ನು ರಿಲೀಸ್ ಮಾಡುವ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಇದಕ್ಕೂ ಮುನ್ನವೇ ದೇಶದ ನಂಬರ್ 1 ವೇಗದ ಬೌಲಿಂಗ್ ಆಲ್‌ರೌಂಡರ್ ಪಾಂಡ್ಯ ಇದೀಗ ಚರ್ಚೆಯ ವಿಷಯವಾಗಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ಐಪಿಎಲ್ 2024 ರಲ್ಲಿ ಫ್ರಾಂಚೈಸಿಗೆ ಮರಳಿದ ನಂತರ ಯಾವುದೂ ಅಂದುಕೊಂಡಂತೆ ಆಗಿಲ್ಲ. ಮುಂಬೈ ಇಂಡಿಯನ್ಸ್ ಕಳೆದ ಮೂರು ಆವೃತ್ತಿಗಳಲ್ಲಿ ಒಮ್ಮೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸಿದೆ ಮತ್ತು ಪಾಂಡ್ಯ ನೇತೃತ್ವದಲ್ಲಿ ತಂಡದ ಪ್ರದರ್ಶನವು ಸ್ಪೂರ್ತಿದಾಯಕವಾಗಿಲ್ಲ. ಐಪಿಎಲ್ 2026ರಲ್ಲಿ, ಮುಂಬೈ 14 ಪಂದ್ಯಗಳಲ್ಲಿ ನಾಲ್ಕು ಜಯಗಳೊಂದಿಗೆ ಕೊನೆಯ ಎರಡನೇ ಸ್ಥಾನದಲ್ಲಿತ್ತು. ಹೀಗಾಗಿ, ಹಾರ್ದಿಕ್ ಪಾಂಡ್ಯ ಅವರನ್ನು ಪಡೆಯಲು ಹಲವಾರು ತಂಡಗಳು ಮುಂಬೈ ಇಂಡಿಯನ್ಸ್ ಜೊತೆ ಸಂಪರ್ಕದಲ್ಲಿವೆ ಎಂದು ವದಂತಿಗಳಿವೆ.

'ಕ್ರಿಕ್‌ಬಜ್' ವರದಿ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಆಸಕ್ತಿ ತೋರುತ್ತಿವೆ. ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ ರಾಯಲ್ಸ್ (RR) ಕೂಡ ಈ ವಿಷಯದಲ್ಲಿ ಸುದ್ದಿಯಲ್ಲಿವೆ. ಆದಾಗ್ಯೂ, ಆಟಗಾರರ ವಿನಿಮಯಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ

ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ H1N1 ಫ್ಲೂ ಆತಂಕ: ಇಬ್ಬರಲ್ಲಿ ಸೋಂಕು ದೃಢ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಬಾಬ್ ಅಂಗಡಿಗಳ ತೆರವಿಗೆ ಆಗ್ರಹ!

'ನನ್ ಕಾರನ್ನೇ ನಿಲ್ಲಿಸ್ತೀಯಾ?': ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ, JDS ನಾಯಕನ ಬಂಧನ, Video