ದೇವದತ್ ಪಡಿಕ್ಕಲ್ - ರಿಷಭ್ ಪಂತ್ 
ಕ್ರಿಕೆಟ್

ದೇವದತ್ ಪಡಿಕ್ಕಲ್‌ಗೆ ಬೌಲಿಂಗ್ ನೀಡಿದ ಶುಭಮನ್ ಗಿಲ್; ರಿಷಭ್ ಪಂತ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ವೀಕ್ಷಕರು!

ದಿನದಾಟದ ಅಂತ್ಯದ ವೇಳೆಗೆ, ಆತಿಥೇಯ ತಂಡದ ನಾಯಕ ಧನಂಜಯ ಡಿ ಸಿಲ್ವಾ (31) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸೋನಲ್ ದಿನುಷಾ (25) ಕ್ರೀಸ್‌ನಲ್ಲಿದ್ದರು.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಕನ್ನಡಿಗ ದೇವದತ್ತ ಪಡಿಕ್ಕಲ್ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮಾಡಿದ ತಮಾಷೆಯ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಗಾಲೆಯಲ್ಲಿ ನಡೆದ ಪಂದ್ಯದಲ್ಲಿ ಭಾರತವು ಶ್ರೀಲಂಕಾಕ್ಕೆ 372 ರನ್‌ಗಳ ಗುರಿಯನ್ನು ನೀಡುವ ಮೂಲಕ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದೆ. ಪ್ರವಾಸಿ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವಲ್ಲಿ ಪಂತ್ 66 ರನ್ ಗಳಿಸಿದರೆ, ಪಡಿಕ್ಕಲ್ 44 ರನ್‌ಗಳ ಕೊಡುಗೆ ನೀಡಿದ್ದಾರೆ. ಬಳಿಕ ಬಲಿಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಭಾರತ, ದಿನದ ಅಂತ್ಯಕ್ಕೆ ಶ್ರೀಲಂಕಾವನ್ನು 84/4 ಕ್ಕೆ ಕಟ್ಟಿಹಾಕಿದೆ. ಪಂದ್ಯದ ನಡುವೆ, ದಿನದ ಅಂತಿಮ ಓವರ್ ಎಸೆಯಲು ಗಿಲ್ ಚೆಂಡನ್ನು ಪಡಿಕ್ಕಲ್ ಅವರಿಗೆ ನೀಡಿದಾಗ, ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಪಂತ್ ತಮಾಷೆಯ ಮಾತಿನ ಮೂಲಕ ಎಲ್ಲರ ಗಮನ ಸೆಳೆದರು.

ಪಡಿಕ್ಕಲ್ ಬೌಲಿಂಗ್ ಮಾಡಲು ಸಿದ್ಧರಾಗುತ್ತಿದ್ದಾಗ, 'ಕ್ಯಾರಮ್ ಬಾಲ್' ಎಸೆಯಬೇಕು ಎಂದು ಪಂತ್ ಅವರಿಗೆ ಹೇಳುತ್ತಿರುವುದು ಸ್ಟಂಪ್ ಮೈಕ್‌ನಲ್ಲಿ ಕೇಳಿಸಿತು. 'ದೇವ್, ಕ್ಯಾರಮ್ ಬಾಲ್ ಹಾಕು ಗುರು, ಕಮಾನ್' ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸ್ಟಂಪ್ ಮೈಕ್ರೊಫೋನ್‌ನಲ್ಲಿ ಸೆರೆಯಾದ ಪಂತ್ ಅವರ ಮಾತುಗಳು ಅಭಿಮಾನಿಗಳನ್ನು ಆಗಾಗ್ಗೆ ರಂಜಿಸಿವೆ; ಈ ಬಾರಿಯೂ ಅದಕ್ಕೆ ಹೊರತಾಗಿರಲಿಲ್ಲ. ಇನ್ನು ಪಡಿಕ್ಕಲ್ ಅವರ ಓವರ್‌ನ ವಿಷಯಕ್ಕೆ ಬಂದರೆ, ಸೋನಲ್ ದಿನುಷಾ ಅವರು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅವರನ್ನು ಸ್ವಾಗತಿಸಿದರು. ಆದಾಗ್ಯೂ, ಪಾರ್ಟ್-ಟೈಮ್ ಬೌಲರ್ ಆಗಿರುವ ಪಡಿಕ್ಕಲ್, ಉಳಿದ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು.

ಮಂಗಳವಾರ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ, ರಿಷಬ್ ಪಂತ್ ಅವರ ಅತ್ಯುತ್ತಮ 66 ರನ್‌ಗಳ ನೆರವಿನೊಂದಿಗೆ ಭಾರತದ ಬೌಲರ್‌ಗಳು ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿ ಶ್ರೀಲಂಕಾವನ್ನು 4 ವಿಕೆಟ್‌ಗೆ 84 ರನ್‌ಗಳಿಗೆ ಕಟ್ಟಿಹಾಕಿದರು; ಇದರೊಂದಿಗೆ ಭಾರತ ತಂಡವು ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕಿದೆ.

ದಿನದಾಟದ ಅಂತ್ಯದ ವೇಳೆಗೆ, ಆತಿಥೇಯ ತಂಡದ ನಾಯಕ ಧನಂಜಯ ಡಿ ಸಿಲ್ವಾ (31) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸೋನಲ್ ದಿನುಷಾ (25) ಕ್ರೀಸ್‌ನಲ್ಲಿದ್ದರು.

ಗಾಲೆ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಚೇಸ್ ಮಾಡಿದ ಅತಿದೊಡ್ಡ ಮೊತ್ತವು 2022ರಲ್ಲಿ ಪಾಕಿಸ್ತಾನ ಗಳಿಸಿದ 344 ರನ್‌ಗಳಾಗಿದ್ದು, 1998ರಿಂದೀಚೆಗೆ ಈ ಮೈದಾನದಲ್ಲಿ 200ಕ್ಕೂ ಹೆಚ್ಚಿನ ಗುರಿಯನ್ನು ಕೇವಲ ಎರಡು ಬಾರಿ ಮಾತ್ರ ಯಶಸ್ವಿಯಾಗಿ ತಲುಪಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ