ದೀಪ್ತಿ ಶರ್ಮಾ 
ಕ್ರಿಕೆಟ್

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ!

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ಥೈಲ್ಯಾಂಡ್ ವಿರುದ್ಧ 94 ರನ್‌ಗಳ ಜಯ ಸಾಧಿಸಿದೆ...

ದುಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ಥೈಲ್ಯಾಂಡ್ ವಿರುದ್ಧ 94 ರನ್‌ಗಳ ಜಯ ಸಾಧಿಸಿದ ಸಂದರ್ಭದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರು ಈಗ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು (171) ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾರೆ.

ಈ ಐತಿಹಾಸಿಕ ಪಂದ್ಯವು ದೀಪ್ತಿ ಶರ್ಮಾ ಅವರ ವೃತ್ತಿಜೀವನದ 150ನೇ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿದೆ. ಇದರೊಂದಿಗೆ, ಅವರು ಹರ್ಮನ್ಪ್ರೀತ್ ಕೌರ್ (203 ಪಂದ್ಯಗಳು) ಮತ್ತು ಸ್ಮೃತಿ ಮಂಧಾನ (172 ಪಂದ್ಯಗಳು) ನಂತರ 150 T20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಮಹಿಳಾ ಕ್ರಿಕೆಟಿಗರಾದರು. ವಿಶ್ವ ಕ್ರಿಕೆಟ್‌ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 12ನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ

ತಾಯಿ ಸ್ಮರಣಾರ್ಥ ಸುದೀಪ್ ಮಹತ್ವದ ಕಾರ್ಯ: ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಆಟೋ ನೀಡಿದ ಕಿಚ್ಚ!

ಕೆಆರ್‌ಐಡಿಎಲ್‌ ಗುತ್ತಿಗೆದಾರರಿಂದ 7% ಕಮಿಷನ್ ಕಲೆಕ್ಷನ್: ಪುತ್ತೂರು ಕಾಂಗ್ರೆಸ್‌ ಶಾಸಕನಿಂದ ಗಂಭೀರ ಆರೋಪ; ಸಿಎಂ ಗೆ ಪತ್ರ!

Duleep Trophy: 57 ವರ್ಷಗಳ ದಾಖಲೆ ಮುರಿದು, ಕೇವಲ 8 ರನ್ ಅಂತರದಲ್ಲಿ ಎಡವಿದ Vaibhav Sooryavanshi!

ಕಾವೇರಿ ನೀರಿನ ವಿವಾದ: ಕರ್ನಾಟಕದಿಂದ 9,000 ಕ್ಯೂಸೆಕ್ ನೀರು ಬಿಡುಗಡೆಯಾದರೂ, ಕೊರತೆ ಇದೆ-ತಮಿಳುನಾಡು; ಸೆ.15 ಕ್ಕೆ ಮತ್ತೆ ವಿಚಾರಣೆ