U19 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಾಯಕರು ಹಸ್ತಲಾಘವ ಮಾಡಲಿಲ್ಲ. 
ಕ್ರಿಕೆಟ್

U19 World Cup 2026, IND vs PAK: ಪಾಕ್ ನಾಯಕನ ಕೈಲುಕದ ಭಾರತ ನಾಯಕ ಆಯುಷ್ ಮ್ಹಾತ್ರೆ!

ಭಾರತ ಬಹುತೇಕ ಸೆಮಿಫೈನಲ್‌ ತಲುಪಿದ್ದರೂ, ಭಾರಿ ಅಂತರದ ಸೋಲನ್ನು ತಪ್ಪಿಸಬೇಕಾಗಿದೆ. ಈಮಧ್ಯೆ, ಪಾಕಿಸ್ತಾನವು ಭಾರತವನ್ನು ಬೇಗನೆ ಕಟ್ಟಿಹಾಕಿ 30 ಓವರ್‌ಗಳ ಒಳಗೆ ಬೆನ್ನಟ್ಟಿದರೆ, ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.

ಹಿರಿಯರ ತಂಡವೇ ಆಗಿರಲಿ, ಮಹಿಳಾ ತಂಡವೇ ಆಗಿರಲಿ ಯೂತ್ ಏಕದಿನ ಪಂದ್ಯಗಳೇ ಆಗಿರಲಿ, ಭಾರತವನ್ನು ಪ್ರತಿನಿಧಿಸಿದರೆ ಪಾಕಿಸ್ತಾನದ ಸಹ ಆಟಗಾರರೊಂದಿಗೆ ಕೈಕುಲುಕುವುದು ದೂರದ ಮಾತು. 2025ರ ಏಷ್ಯಾಕಪ್ ನಂತರ ಭಾರತವು ಹಲವು ಬಾರಿ ಮುಖಾಮುಖಿಯಾದ ಪಾಕ್ ಆಟಗಾರರ ಜೊತೆಗೆ ಕೈಕುಲುಕಿಯೇ ಇಲ್ಲ. ಇದೀಗ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ 2026ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ಅಂಡರ್-19 ಸೂಪರ್ ಸಿಕ್ಸ್ ಪಂದ್ಯದಲ್ಲೂ ಹ್ಯಾಂಡ್‌ಶೇಕ್ ಇಲ್ಲದೆ ಮುಂದುವರೆದಿದೆ.

ಟಾಸ್ ಸಮಯದಲ್ಲಿ, ಇಬ್ಬರೂ ನಾಯಕರು ಪರಸ್ಪರ ಕೈಕುಲುಕುವ ಮೂಲಕ ಸ್ವಾಗತಿಸುವುದು ವಾಡಿಕೆ. ಆದರೆ, ಭಾರತದ ಆಯುಷ್ ಮ್ಹಾತ್ರೆ ಮತ್ತು ಪಾಕಿಸ್ತಾನದ ಫರ್ಹಾನ್ ಯೂಸುಫ್ ಬುಲವಾಯೊದಲ್ಲಿ ಪಿಚ್‌ಗೆ ನಡೆದಾಗ ಆ ದೃಶ್ಯ ನಿರೀಕ್ಷಿತವಾಗಿ ಕಾಣೆಯಾಗಿತ್ತು. ಹ್ಯಾಂಡ್‌ಶೇಕ್ ಇರಲಿಲ್ಲ. ಆದರೆ, ಟಾಸ್ ಗೆದ್ದ ಪಾಕಿಸ್ತಾನ ಚೇಸಿಂಗ್ ಆಯ್ದುಕೊಂಡಿತು.

ಭಾರತ ಬಹುತೇಕ ಸೆಮಿಫೈನಲ್‌ ತಲುಪಿದ್ದರೂ, ಭಾರಿ ಅಂತರದ ಸೋಲನ್ನು ತಪ್ಪಿಸಬೇಕಾಗಿದೆ. ಈಮಧ್ಯೆ, ಪಾಕಿಸ್ತಾನವು ಭಾರತವನ್ನು ಬೇಗನೆ ಕಟ್ಟಿಹಾಕಿ 30 ಓವರ್‌ಗಳ ಒಳಗೆ ಬೆನ್ನಟ್ಟಿದರೆ, ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ, ಭಾರತವು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕುವುದನ್ನು ನಿರಾಕರಿಸಿತು. ಆದರೆ, ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಆಡಬಹುದು.

2025ರ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾದರೂ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಅದಾದ ಬಳಿಕ 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇದೇ ದಾರಿಯನ್ನು ಅನುಸರಿಸಿದರು ಮತ್ತು ಫಾತಿಮಾ ಸನಾ ಅವರೊಂದಿಗೆ ಕೈಕುಲುಕಿರಲಿಲ್ಲ. ಪುರುಷರ ಅಂಡರ್ 19 ಏಷ್ಯಾ ಕಪ್‌ 2025ರಲ್ಲಿಯೂ ಇದೇ ರೀತಿ ಆಯಿತು. ಇದೀಗ ಅಂಡರ್ 19 ಏಕದಿನ ವಿಶ್ವಕಪ್‌ 2025ರಲ್ಲಿಯೂ ಇದೇ ಮುಂದುವರಿದಿದೆ.

ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲೂ ಸಹ, ಯಾವುದೇ ಹಸ್ತಲಾಘವ ಇರಲಿಲ್ಲ. ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳು ಉತ್ತಮವಾಗಿಲ್ಲ. ಬಾಂಗ್ಲಾದೇಶವು ಭಾರತಕ್ಕೆ ಬರುವುದು ಸುರಕ್ಷಿತವಲ್ಲ ಎಂದು ಭಾವಿಸಿದ ಕಾರಣ 2026ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿದೆ. ಆದಾಗ್ಯೂ, ನಂತರ, ಅಂಡರ್-19 ಟೂರ್ನಮೆಂಟ್‌ನಲ್ಲಿ ನಾಯಕರು ಕೈಕುಲುಕದಿರಲು ಕಾರಣವನ್ನು ಬಿಸಿಬಿ ದೃಢಪಡಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Union Budget 2026: 'ಕರ್ತವ್ಯ ಮಂತ್ರ' ಪಠಿಸಿದ ನಿರ್ಮಲಾ; ಹೂಡಿಕೆ, ಉದ್ಯೋಗ, ಉತ್ಪಾದನೆಗೆ ಒತ್ತು

Union Budget 2026: ನಾರಿ ಶಕ್ತಿ, ರೈತರು, ಕೃಷಿಯಲ್ಲಿ ಮೀನುಗಾರಿಕೆ, AIಗೆ ಆದ್ಯತೆ

ವಾಯು ಮಾಲಿನ್ಯ 'ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ' ಎಂದು ಘೋಷಿಸಿ; ಸಂಸತ್ತಿನಲ್ಲಿ ಚರ್ಚೆಗೆ ರಾಹುಲ್ ಆಗ್ರಹ

Union Budget 2026: ಸರ್ಕಾರದ ಮೂರು ಕರ್ತವ್ಯಗಳನ್ನು ಪಟ್ಟಿ ಮಾಡಿದ ನಿರ್ಮಲಾ

Union Budget 2026 Live updates | ನಿರ್ಮಲಾ ಸೀತಾರಾಮನ್ ಬಜೆಟ್ ಬಂಡವಾಳ ಹೂಡಿಕೆ, ಉದ್ಯೋಗ ಮತ್ತು ಉತ್ಪಾದನೆಯಿಂದ ಬೆಳವಣಿಗೆಗೆ ಶಕ್ತಿ ತುಂಬಲು ಒತ್ತು

SCROLL FOR NEXT