ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ (CCL 2026) ಸೆಮಿಫೈನಲ್ ಪಂದ್ಯದಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮಣಿಸುವ ಮೂಲಕ ಫೈನಲ್ ಗೆ ಎಂಟ್ರಿಕೊಟ್ಟಿದೆ. ಕೋಯುಮತ್ತೂರ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 160 ರನ್ ಗಳಿಗೆ ಆಲೌಟ್ ಆಯಿತು.
ಚೆನ್ನೈ ಪರ ವಿಕ್ರಾಂತ್ ಸಂತೋಷ್ 66, ಅಧವ್ ಕನ್ನಡಸನ್ 31 ರನ್ ಗಳಿಸಿದ್ದರೆ ಕರ್ನಾಟಕ ಪರ ಸಚಿನ್ 3, ಚಂದನ್ ಕುಮಾರ್ ಮತ್ತು ಕರಣ್ ಆರ್ಯನ್ ತಲಾ 2 ವಿಕೆಟ್ ಪಡೆದರು. ಇನ್ನು ಚೆನ್ನೈ ನೀಡಿದ 161 ರನ್ ಗುರಿ ಬೆನ್ನಟ್ಟಿದ ಕಿಚ್ಚನ ಪಡೆ ಇನ್ನು ಒಂದು ಎಸೆತ ಬಾಕಿ ಇರುವಂತೆ 161 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ 20, ನಿರೂಪ್ ಭಂಡಾರಿ 25, ಕಾರ್ತಿಕ್ ಜಯರಾಮ್ 50, ಕರಣ್ ಆರ್ಯನ್ 23 ಮತ್ತು ಕಿಚ್ಚ ಸುದೀಪ್ ಅಜೇಯ 14 ರನ್ ಬಾರಿಸಿ ಗೆಲುವಿನ ತಂಡ ಸೇರಿದರು.
ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ 2026ರ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಆಡಲಿದೆ. ಕೊಯಮತ್ತೂರಿನಲ್ಲಿಯೇ ಈ ಪಂದ್ಯ ಇಂದು ಸಂಜೆ ನಡೆಯಲಿದೆ.