ಭಾರತಕ್ಕೆ ಭರ್ಜರಿ ಜಯ 
ಕ್ರಿಕೆಟ್

T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

ಯುಎಸ್ಎ ಪರ ಮಿಲಿಂಗ್ ಕುಮಾರ್ 34, ಸಂಜಯ್ ಕೃಷ್ಣಮೂರ್ತಿ 37 ಮತ್ತು ಶುಭಂ ರಂಜನೆ 30 ರನ್ ಗಳ ಹೊರತಾಗಿಯೂ ಯುಎಸ್ಎ ಗುರಿ ತಲುಪಲಾಗಲಿಲ್ಲ.

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 29 ರನ್ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.

ಭಾರತ ನೀಡಿದ್ದ 162 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಅಮೆರಿಕ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 132ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 29 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.

ಯುಎಸ್ಎ ಪರ ಮಿಲಿಂಗ್ ಕುಮಾರ್ 34, ಸಂಜಯ್ ಕೃಷ್ಣಮೂರ್ತಿ 37 ಮತ್ತು ಶುಭಂ ರಂಜನೆ 30 ರನ್ ಗಳ ಹೊರತಾಗಿಯೂ ಯುಎಸ್ಎ ಗುರಿ ತಲುಪಲಾಗಲಿಲ್ಲ. ಅಂತಿಮವಾಗಿ 29 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.

ಭಾರತದ ಪರ ಅರ್ಶ್ ದೀಪ್ ಸಿಂಗ್, ಮಹಮದ್ ಸಿರಾಜ್ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ