ವಿರಾಟ್ ಕೊಹ್ಲಿ, ಗಂಭೀರ್  
ಕ್ರಿಕೆಟ್

ಕೊಹ್ಲಿ-ಗಂಭೀರ್ ನಡುವೆ 'ಫೈಟಿಂಗ್'? ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದು ಏನು?

ಐಪಿಎಲ್ ವೇಳೆ ಗಂಭೀರ್ ಮತ್ತು ಕೊಹ್ಲಿ ನಡುವೆ ಜಗಳವಾದ ನಂತರ ಇವರಿಬ್ಬರ ನಡುವೆ ಈಗಲೂ ಉತ್ತಮ ಸಂಬಂಧ ಇಲ್ಲ ಎನ್ನಲಾಗುತ್ತಿದೆ.

ಮುಂಬೈ: ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಂಡಾಗಿನಿಂದಲೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗಿನ ಅವರ ಸಂಬಂಧ ಅಷ್ಟಕಷ್ಟೇ ಎಂಬಂತಹ ಮಾತುಗಳು ಕೇಳಿಬರುತ್ತಲೇ ಇವೆ.

ಐಪಿಎಲ್ ವೇಳೆ ಗಂಭೀರ್ ಮತ್ತು ಕೊಹ್ಲಿ ನಡುವೆ ಜಗಳವಾದ ನಂತರ ಇವರಿಬ್ಬರ ನಡುವೆ ಈಗಲೂ ಉತ್ತಮ ಸಂಬಂಧ ಇಲ್ಲ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿದ್ದಾರೆ.

ಗಂಭೀರ್ ಮತ್ತು ಕೊಹ್ಲಿ ನಡುವೆ ಗಲಾಟೆ ನಡೆಯುತ್ತಿರುತ್ತದೆ ಎಂಬ ವದಂತಿಗಳನ್ನು ಸೈಕಿಯಾ ನಿರಾಕರಿಸಿದ್ದಾರೆ. ಕೊಹ್ಲಿ- ಗಂಭೀರ್ ನಡುವಿನ ಗಲಾಟೆಗಳನ್ನು ನಾನು ನೋಡಿಲ್ಲ. ಅವರಿಬ್ಬರೂ ಉತ್ತಮ ಸೌಹಾರ್ದಯುತ ಸಂಬಂಧದಲ್ಲಿದ್ದಾರೆ" ಎಂದು ಇಂಡಿಯಾ ಟುಡೇ ಪಾಡ್‌ಕಾಸ್ಟ್‌ನಲ್ಲಿ ಸೈಕಿಯಾ ಮಾತನಾಡಿದ್ದಾರೆ.

ಗಂಭೀರ್ ಮುಖ್ಯ ಕೋಚ್ ಆಗಿರುವಾಗಲೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ನಿವೃತ್ತಿ ಘೋಷಿಸಿದರು. 2027 ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರ್ತಾರಾ? ಎಂಬುದು ಅಭಿಮಾನಿಗಳ ನಡುವೆ ಅನುಮಾನಕ್ಕೂ ಕಾರಣವಾಗಿದೆ.

37 ವರ್ಷದ ಕೊಹ್ಲಿ ಈಗಲೂ ODI ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕೊನೆಯ ಆರು ODIಗಳಲ್ಲಿ ಮೂರು ಶತಕಗಳನ್ನು ಮತ್ತು 93 ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದಿದ್ದಾಗ ಹಿರಿಯ ಆಟಗಾರರು ದೇಶಿಯ ಕ್ರಿಕೆಟ್ ನಲ್ಲಿ ಆಡಬೇಕು ಎಂಬ ಬಿಸಿಸಿಐ ಕಠಿಣ ನಿಲುವಿನ ಹಿಂದೆಯೂ ಕೊಹ್ಲಿ ಹಾಗೂ ಗಂಭೀರ್ ನಡುವಿನ ಹಳಸಿದ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

ಹಲವು ವರ್ಷಗಳ ಬಳಿಕ ಕೊಹ್ಲಿ ಕಳೆದ ವರ್ಷ ಕೊಹ್ಲಿ. ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಎರಡರಲ್ಲೂ ಕಾಣಿಸಿಕೊಂಡಿದ್ದರು. ಇಬ್ಬರ ನಡುವಿನ ಸಂಘರ್ಷದ ವರದಿಗಳ ಹೊರತಾಗಿಯೂ, ಗಂಭೀರ್ ಮತ್ತು ಕೊಹ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ 2025 ರ ರೂಪದಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿಯನ್ನು ತಲುಪಿಸುವಲ್ಲಿ ಒಟ್ಟಿಗೆ ಶ್ರಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್