ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ 
ಕ್ರಿಕೆಟ್

'ಆಟಗಾರರೇ ತೆಗೆದುಕೊಂಡಿರುವ ನಿರ್ಧಾರ': T20 World Cup ನಲ್ಲಿ ಭಾಗವಹಿಸದಿರುವ ಬಗ್ಗೆ ಬಾಂಗ್ಲಾದೇಶ ಯೂ-ಟರ್ನ್!

ಕಳೆದ ತಿಂಗಳು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೊಂದಿಗೆ ಮಾತುಕತೆ ನಡೆಸಿದ ನಂತರ, ನಜ್ರುಲ್ ಕಠಿಣ ನಿಲುವು ತೆಗೆದುಕೊಂಡಿದ್ದರು.

ಢಾಕಾ: ಬಾಂಗ್ಲಾದೇಶ ಸರ್ಕಾರ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲು ನಿರಾಕರಿಸಿದ್ದಕ್ಕೆ ಆಟಗಾರರ ಭದ್ರತೆಯೇ ಪ್ರಮುಖ ಕಾರಣ ಎಂದು ಹೇಳುತ್ತಿದ್ದ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಇದೀಗ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರು 'ರಾಷ್ಟ್ರೀಯ ಘನತೆಯನ್ನು ಕಾಪಾಡಲು' ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ಐಸಿಸಿ ತಿರಸ್ಕರಿಸಿದ ನಂತರ ಬಾಂಗ್ಲಾದೇಶವು ಪಂದ್ಯಾವಳಿಯಿಂದಲೇ ಹೊರಗುಳಿಯಿತು. ಬಾಂಗ್ಲಾದ ಬದಲಿಗೆ ಸ್ಕಾಟ್ಲೆಂಡ್‌‌ಗೆ ಅವಕಾಶ ನೀಡಲಾಯಿತು. ಆದಾಗ್ಯೂ, ಐಸಿಸಿ ಬಾಂಗ್ಲಾದೇಶಕ್ಕೆ ಯಾವುದೇ ನಿರ್ಬಂಧ ವಿಧಿಸದಿರಲು ನಿರ್ಧರಿಸಿದೆ.

ತಂಡವನ್ನು ಪಂದ್ಯಾವಳಿಯಿಂದಲೇ ವಜಾಗೊಳಿಸುವ ಮೊದಲು ಐಸಿಸಿ ಜೊತೆ ನಡೆದ ವಿಫಲ ಮಾತುಕತೆಗಳ ಸಂದರ್ಭದಲ್ಲಿ ನಜ್ರುಲ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಭದ್ರತೆಯ ದೃಷ್ಟಿಯಿಂದಾಗಿ ತಂಡವನ್ನು ಹೊರಗೆ ಕಳುಹಿಸದಿರುವುದು ಬಾಂಗ್ಲಾದೇಶ ಸರ್ಕಾರದ ವಿಶೇಷ ಹಕ್ಕು ಎಂದು ಒತ್ತಾಯಿಸಿದ್ದರು.

'ವಿಶ್ವಕಪ್ ಆಡದಿದ್ದಕ್ಕೆ ವಿಷಾದಿಸುವ ಪ್ರಶ್ನೆಯೇ ಇಲ್ಲ. ದೇಶದ ಕ್ರಿಕೆಟ್‌ನ ಸುರಕ್ಷತೆ, ಜನರ ಸುರಕ್ಷತೆ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡಲು ತ್ಯಾಗಗಳನ್ನು ಮಾಡಿದ ಬಿಸಿಬಿ ಮತ್ತು ಆಟಗಾರರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ' ಎಂದು ಆಸಿಫ್ ಮಂಗಳವಾರ 'ಕ್ರಿಕ್‌ಬಜ್'ಗೆ ತಿಳಿಸಿದ್ದಾರೆ.

ಕಳೆದ ತಿಂಗಳು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೊಂದಿಗೆ ಮಾತುಕತೆ ನಡೆಸಿದ ನಂತರ, ನಜ್ರುಲ್ ಕಠಿಣ ನಿಲುವು ತೆಗೆದುಕೊಂಡಿದ್ದರು.

'ನಮಗೆ ಐಸಿಸಿಯಿಂದ ನ್ಯಾಯ ಸಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ವಿಶ್ವಕಪ್‌ನಲ್ಲಿ ಆಡುತ್ತೇವೆಯೇ ಅಥವಾ ಇಲ್ಲವೇ ಎಂಬುದು ಸಂಪೂರ್ಣವಾಗಿ ಸರ್ಕಾರದ ನಿರ್ಧಾರ' ಎಂದು ಜನವರಿ 22 ರಂದು ಅವರು ಹೇಳಿದ್ದರು.

ಬಳಿಕ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಆದರೆ, ಬಿಸಿಬಿಯನ್ನೂ ಒಳಗೊಂಡ ತೀವ್ರ ಮಾತುಕತೆಗಳ ನಂತರ ಪಾಕ್ ಆಡಲು ತೀರ್ಮಾನಿಸಿದೆ.

ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಆಟದ ವಿಶಾಲ ಹಿತದೃಷ್ಟಿಯಿಂದ ಭಾರತದ ವಿರುದ್ಧದ ಪಂದ್ಯಕ್ಕೆ ಹಾಜರಾಗುವಂತೆ ಕೇಳಿಕೊಂಡಿತು. ಪಾಕಿಸ್ತಾನ ಸರ್ಕಾರ ಅಂತಿಮವಾಗಿ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಂಡಿತು.

'ಯಾವುದೇ ನಿರ್ಬಂಧಗಳಿಲ್ಲ ಮತ್ತು ಬಾಂಗ್ಲಾದೇಶವನ್ನು ಅಂತರರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಲು ಪರಿಗಣಿಸಲಾಗುವುದು ಎಂದು ಐಸಿಸಿ ಹೇಳಿದೆ. ಇದು ಅದ್ಭುತ ಸಾಧನೆ. ನಾನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ವಂದಿಸುತ್ತೇನೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್